ಅಕ್ಕಿನೇನಿ ನಾಗಾರ್ಜುನ ಬಳಿ ಇದೆ ಖಾಸಗಿ ವಿಮಾನ; ಇನ್ನೂ ಯಾರೆಲ್ಲ ಇದರ ಒಡೆಯರು?

Updated By: ರಾಜೇಶ್ ದುಗ್ಗುಮನೆ

Updated on: Aug 29, 2025 | 8:40 AM

ಟಾಲಿವುಡ್‌ನ ಅನೇಕ ಪ್ರಮುಖ ನಟರು ತಮ್ಮದೇ ಆದ ಖಾಸಗಿ ವಿಮಾನಗಳನ್ನು ಹೊಂದಿದ್ದಾರೆ. ನಾಗಾರ್ಜುನ, ಅಲ್ಲು ಅರ್ಜುನ್, ಚಿರಂಜೀವಿ, ಪವನ್ ಕಲ್ಯಾಣ್, ಜೂನಿಯರ್ ಎನ್ಟಿಆರ್, ರಾಮ್ ಚರಣ್ ಮತ್ತು ಮಹೇಶ್ ಬಾಬು ಅವರಂತಹ ನಟರ ಖಾಸಗಿ ಜೆಟ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ. ಅವರು ತಮ್ಮ ಖಾಸಗಿ ಜೆಟ್‌ಗಳನ್ನು ಸಿನಿಮಾ ಪ್ರಚಾರ, ಪ್ರಯಾಣ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಬಳಸುತ್ತಾರೆ.

1 / 7
ಒಂದು ಸ್ವಂತ ಕಾರು ಹೊಂದಬೇಕು ಎಂಬುದು ಜನಸಾಮಾನ್ಯರ ಕನಸಾಗಿರುತ್ತದೆ. ಆದರೆ, ಸೆಲೆಬ್ರಿಟಿಗಳಿಗೆ ಇದೆಲ್ಲ ಲೆಕ್ಕಕ್ಕಿಲ್ಲ.  ಪ್ರತಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಪಡೆದುಕೊಳ್ಳುವ ಅವರು, ಅದನ್ನು ಬೇರೆಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಾರೆ. ಈ ಕಾರಣಕ್ಕೆ ಹಲವು ಸ್ಟಾರ್​ ನಟರ ಆಸ್ತಿ ನೂರಾರು ಕೋಟಿ ರೂಪಾಯಿ ಮೇಲಿರುತ್ತದೆ. ಟಾಲಿವುಡ್​ನ ಅನೇಕ ಸ್ಟಾರ್​ಗಳು ತಮ್ಮದೇ ಖಾಸಗಿ ಜೆಟ್ ಹೊಂದಿದ್ದಾರೆ. ಸಿನಿಮಾ ಪ್ರಚಾರಕ್ಕಾಗಿ, ಪ್ರವಾಸಕ್ಕಾಗಿ ಈ ವಿಮಾನವನ್ನು ಬಳಕೆ ಮಾಡಿಕೊಳ್ಳುತ್ತಾರೆ.

2 / 7
ಅಕ್ಕಿನೇನಿ ನಾಗಾರ್ಜುನ ಅವರಿಗೆ ಇಂದು (ಆಗಸ್ಟ್ 29) ಜನ್ಮದಿನ. ಅವರ ಕುಟುಂಬ ಸಾಕಷ್ಟು ಗೌರವ ಸಂಪಾದಿಸಿದೆ. ಅವರು ತಮ್ಮದೇ ಖಾಸಗಿ ಜೆಟ್ ಹೊಂದಿದ್ದಾರೆ. ಫ್ಯಾಮಿಲಿ ಜತೆ ಅವರು ಇದೇ ವಿಮಾನದಲ್ಲಿ ಸುತ್ತಾಡುತ್ತಾರೆ. ಹಲವು ಕಡೆಗಳಲ್ಲಿ ಇದರಲ್ಲಿ ಓಡಾಡುತ್ತಾರೆ.

3 / 7
ಚಿರಂಜೀವಿ ಮಗ ರಾಮ್​ ಚರಣ್​ ಅವರು ಪ್ರೈವೇಟ್​ ಜೆಟ್ ಹೊಂದಿದ್ದಾರೆ. ಅವರು ಈ ಮೊದಲು ಏರ್​​ಲೈನ್ಸ್ ಕೂಡ ಆರಂಭಿಸಿದ್ದರು. ಅವರು ಸಾವಿರಾರ ಕೋಟಿ ರೂಪಾಯಿ ಒಡೆಯ ಅನ್ನೋದು ವಿಶೇಷ. ಅವರ ತಂದೆ, ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಅವರು ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡೆಯ. ಅವರು ರಾಜಕೀಯದಲ್ಲೂ ಒಮ್ಮೆ ಕಾಲಿಡುವ ಪ್ರಯತ್ನ ಮಾಡಿದ್ದರು. ಅವರ ಬಳಿಯೂ ಚಾರ್ಟರ್​ ಪ್ಲೇನ್​ ಇದೆ. ಸಿನಿಮಾ ಪ್ರಚಾರಕ್ಕೆ ಹಾಗೂ ಕುಟುಂಬದ ಜತೆ ಸಮಯ ಕಳೆಯೋಕೆ ಇದನ್ನು ಬಳಸುತ್ತಾರೆ.

4 / 7
ಟಾಲಿವುಡ್ ಸ್ಟಾರ್ ನಟ, ಸ್ಟೈಲಿಶ್​ ಹೀರೋ​ ಅಲ್ಲು ಅರ್ಜುನ್​ ಅವರು ಪ್ರತಿ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಪಡೆಯುತ್ತಾರೆ. ಅವರು ತಮ್ಮದೇ ಆದ ಜೆಟ್ ಹೊಂದಿದ್ದಾರೆ. ‘ಪುಷ್ಪ’ ಸಿನಿಮಾ ಪ್ರಚಾರಕ್ಕೆ ಇದೇ ವಿಮಾನ ಬಳಕೆ ಮಾಡಿಕೊಂಡಿದ್ದರು. ನಟಿ ರಶ್ಮಿಕಾ ಇದರಲ್ಲಿ ಓಡಾಟ ನಡೆಸುವಾಗ ತೆಗೆದುಕೊಂಡ ಫೋಟೋ ಹಂಚಿಕೊಂಡಿದ್ದರು.

5 / 7
ಮಹೇಶ್​ ಬಾಬು ಅವರು ಟಾಲಿವುಡ್​ನ ಬೇಡಿಕೆಯ ನಟ. ಅವರು ಸಿನಿಮಾ ಜತೆಗೆ ಕುಟುಂಬಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮದೇ ವಿಮಾನದಲ್ಲಿ ಅವರು ಹಲವು ಕಡೆಗಳಲ್ಲಿ ಕುಟುಂಬದ ಜತೆ ಸುತ್ತಾಟ ನಡೆಸಿದ್ದಿದೆ.

6 / 7
ಜ್ಯೂ.ಎನ್​ಟಿಆರ್​ ಕುಟುಂಬವು ಸಾಕಷ್ಟು ದೊಡ್ಡ ಇತಿಹಾಸ ಹೊಂದಿದೆ. ಅವರ ಬಳಿ 80 ಕೋಟಿ ಮೌಲ್ಯದ ವಿಮಾನ ಇದೆ. ಇದನ್ನು ಹೈದರಾಬಾದ್​ನ ಶಮ್ಶಾಬಾದ್​ ವಿಮಾನ ನಿಲ್ದಾಣದಲ್ಲಿ ಪಾರ್ಕ್​ ಮಾಡಿರಲಾಗುತ್ತದೆ.

7 / 7
ಪವನ್​ ಕಲ್ಯಾಣ್​ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ತೊಡಗಿಕೊಂಡಿದ್ದಾರೆ. ಅವರು ಆಂಧ್ರದ ಉಪ ಮುಖ್ಯಮಂತ್ರಿ ಕೂಡ ಹೌದು. ಅವರ ಬಳಿಯೂ ವಿಮಾನ ಇದೆ. 

Published On - 8:38 am, Fri, 29 August 25