- Kannada News Photo gallery Toxic Daughter in law: Having such a daughter in law ruins the peace of the home
Toxic Daughter in law: ಇಂತಹ ಸೊಸೆಯಿದ್ದರೆ ಮನೆಯ ನೆಮ್ಮದಿಯೇ ಹಾಳದಂತೆ
ಅಬ್ಬಬ್ಬಾ… ಈ ಸೊಸೆ ಮನೆಗೆ ಕಾಲಿಟ್ಟ ಮೇಲೆ ನಮ್ ಮನೆಯಲ್ಲಿ ಯಾವಗ್ ನೋಡಿದ್ರು ಜಗಳ, ಮನಸ್ತಾಪಗಳೇ ನಡೆಯುತ್ತಿರುತ್ತವೆ ಎಂದು ಹೇಳುವುದನ್ನು ನೀವು ಕೂಡಾ ನೋಡಿರಬಹುದಲ್ವಾ. ಇನ್ನೂ ಹೆಚ್ಚಾಗಿ ಅತ್ತೆಯ ಮೇಲೆ ಸೊಸೆ ದೂರು ಹೇಳುವುದು, ಸೊಸೆಯ ಮೇಲೆ ಅತ್ತೆ ದೂರು ಹೇಳುವುದು ಇವೆಲ್ಲವೂ ನಡೆಯುತ್ತಲೇ ಇರುತ್ತವೆ. ಕೆಲವು ಮನೆಯಲ್ಲಿ ಅತ್ತೆಯ ಕಾರಣದಿಂದ ಜಗಳಗಳು ಆರಂಭವಾದರೆ ಇನ್ನೂ ಕೆಲವು ಕಡೆ ಸೊಸೆಯ ಕಾರಣದಿಂದಲೇ ಮನೆಯಲ್ಲಿ ಯಾವಗಾಲೂ ಜಗಳ ಮನಸ್ತಾಪಗಳ ನಡೆಯುತ್ತಿರುತ್ತವೆ. ಅದರಲ್ಲೂ ಈ ಗುಣಗಳಿರುವ ಸೊಸೆ ಇದ್ದರಂತೂ ಆ ಮನೆಯಲ್ಲಿ ಜಗಳಗಳು ತಪ್ಪಿದ್ದಲ್ಲವಂತೆ. ಹಾಗಾದರೆ ಎಂತಹ ಸೊಸೆಯಿದ್ದರೆ ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
Updated on: May 11, 2025 | 5:15 PM

ಕೆಲವೊಂದಿಷ್ಟು ಗುಣ ಸ್ವಭಾವಗಳಿರುವ ಸೊಸೆಯಿಂದ ಮನೆಯಲ್ಲಿ ನೆಮ್ಮದಿ ಅನ್ನುವಂತಹದ್ದು ಹಾಳಾಗುತ್ತಂತೆ. ಹೌದು ಮನೆಯಲ್ಲಿ ಎಲ್ಲರೂ ನಾನು ಹೇಳಿದಂತೆಯೇ ಕೇಳಬೇಕು, ಮನೆಯಲ್ಲಿ ಎಲ್ಲವೂ ನಾನು ಹೇಳಿದಂತೆಯೇ ನಡೆಯಬೇಕು ಎಂದು ಹೇಳಿ ಎಲ್ಲರ ಮೇಲೂ ಅಧಿಕಾರ ಚಲಾಯಿಸಲು ಬರುವಂತಹ ಸೊಸೆಯಿದ್ದರೆ, ಅಂತಹ ಮನೆಯಲ್ಲಿ ನೆಮ್ಮದಿ ಅನ್ನೋದೆ ಇರಲ್ಲ. ತಾನು ದರ್ಪದಿಂದ ಅಧಿಕಾರ ಚಲಾಯಿಸಿ ಮನೆಯವರಿಗೆ ನೋವುಂಟು ಮಾಡುವ ಸಾಧ್ಯತೆಯೂ ಇರುತ್ತದೆ.

ತಾನಿರುವ ಮನೆ, ತನ್ನ ಕುಟುಂಬದ ಬಗ್ಗೆ ಯೋಚಿಸಿದೆ, ಯಾವಾಗಲೂ ತನ್ನ ಬಗ್ಗೆ ಮಾತ್ರ ಯೋಚಿಸುತ್ತಾಳೋ, ತಾನು ಕೇಳಿದ್ದನ್ನೆಲ್ಲಾ ನನ್ನ ಗಂಡ ಕೊಡಿಸಬೇಕು ಎಂಬ ಸ್ವಾರ್ಥಿ ಸೊಸೆಯಿದ್ದರೆ ಮನೆಯಲ್ಲಿ ನೆಮ್ಮದಿ ಅನ್ನೋದೆ ಇರಲ್ಲ. ಆಕೆ ಎಂದಿಗೂ ಮನೆಯ ಏಳಿಗೆಯ ಬಗ್ಗೆ ಯೋಚಿಸುವುದಿಲ್ಲ. ಅಂತಹ ಮನೆಯಲ್ಲಿ ನೆಮ್ಮದಿ ಕೂಡಾ ಇರುವುದಿಲ್ಲ.

ಮನೆಯ ವಿಷಯವನ್ನು ಹೊರಗಿನವರಿಗೆ ಯಾರಿಗೂ ಹೇಳಬಾರದು ಎಂದು ಹೇಳುತ್ತಾರೆ. ಆದ್ರೆ ಕೆಲ ಮಹಿಳೆಯರು ತಮ್ಮ ಮನೆಯಲ್ಲಿ ಜಗಳ, ಮನಸ್ತಾಪಗಳು ನಡೆದ್ರೆ ಅದರನ್ನು ಹೊರಗಿನವರ ಬಳಿ ಹೇಳಿ, ತಾನು ಒಳ್ಳೆಯವಳು ಎಂಬಂತೆ ಬಿಂಬಿಸುತ್ತಾರೆ. ಹೀಗೆ ಯಾರು ತನ್ನ ಗಂಡ, ಅತ್ತೆ-ಮಾವ ಹಾಗೂ ಕುಟುಂಬದ ಬಗ್ಗೆ ಹೊರಗಿನವರಲ್ಲಿ ಚಾಡಿ ಹೇಳುವುದು, ದೂರು ಹೇಳುವುದು ಮಾಡುತ್ತಿರುತ್ತಾಳೋ, ಅಂತಹ ಸೊಸೆಯಿದ್ದರೆ ಮನೆಯ ನೆಮ್ಮದಿಯೇ ಹಾಳಾಗುತ್ತದೆ. ಆಕೆ ಯಾವಾಗಲೂ ತನ್ನ ಕುಟುಂಬ ಸದಸ್ಯರನ್ನು ಕೀಳಾಗಿ ಕಾಣುತ್ತಿರುತ್ತಾಳೆ.

ಯಾವ ಮಹಿಳೆ ತನ್ನ ಗಂಡನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಳು ಬಯಸುತ್ತಾಳೋ, ಅಂತಹ ಹೆಣ್ಣು ಸೊಸೆಯಾಗಿ ಬಂದರೆ ಮನೆಯ ನೆಮ್ಮದಿ ಹಾಳಾಗುವುದಂತೂ ಖಂಡಿತ. ಏಕೆಂದ್ರೆ ಗಂಡನ ಮೇಲೆ ನಿಯಂತ್ರಣ ಸಾಧಿಸುವುದು ಮಾತ್ರವಲ್ಲದೆ ಅತ್ತೆ-ಮಾವನ ಬಗ್ಗೆ ಸುಳ್ಳು ದೂರುಗಳನ್ನು ಹೇಳಿ ಅಪ್ಪ, ಅಮ್ಮ, ಮಗನ ಸಂಬಂಧವನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ.

ಕೆಲವು ಮಹಿಳೆಯರು ಇತರರ ಬಗ್ಗೆ ತುಂಬಾನೇ ಅಸೂಯೆಯನ್ನು ಹೊಂದಿರುತ್ತಾರೆ. ಅಂತಹ ಮಹಿಳೆಯರು ಎಂದಿಗೂ ಒಳ್ಳೆಯ ಸೊಸೆಯಂದಿರಾಗಲು ಸಾಧ್ಯವಿಲ್ಲ. ಅವಳು ತನ್ನ ಅತ್ತೆಯ ಮನೆಯಲ್ಲಿ ಇತರ ಸದಸ್ಯರೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಆಕೆ ಅವರನ್ನು ಯಾವಾಗಲೂ ಹೊರಗಿನವರಂತೆ ನೋಡುತ್ತಾಳೆ. ಇನ್ನೂ ಮನೆಯವರಿಗೆ ಏನಾದ್ರೂ ಒಳ್ಳೆಯದಾದ್ರೆ, ಇಂತಹ ಸೊಸೆಯಂದಿರು ತುಂಬಾನೇ ಅಸೂಯೆ ಪಡುತ್ತಾರೆ.

ಇದಲ್ಲದೆ ಅತ್ತೆ-ಮಾವ ಮನೆಯವರ ಮೇಲೆ ಸುಖಾ ಸುಮ್ಮನೆ ಕೋಪ ಮಾಡಿಕೊಳ್ಳುವುದು, ಒಬ್ಬರ ದೂರನ್ನು ಇನ್ನೊಬ್ಬರ ಜೊತೆ ಹೇಳುವುದು, ಮನೆ ಕೆಲಸದಲ್ಲಿ ಸಹಾಯ ಮಾಡದೆ ದರ್ಪದಿಂದ ಮಾತನಾಡುವುದು, ಗಂಡನ ಜೊತೆ ಪ್ರತಿಯೊಂದು ವಿಷಯದ ಬಗ್ಗೆ ಚಾಡಿ ಹೇಳುವುದು ಇಂತಹ ಗುಣಗಳನ್ನು ಹೊಂದಿರುವ ಮಹಿಳೆ ಉತ್ತಮ ಸೊಸೆಯಾಗಲಾರಳು. ಇಂತಹ ಸೊಸೆಯಿದ್ದರೆ ಮನೆಯ ನೆಮ್ಮದಿಯೇ ಹಾಳಾಗುವ ಸಾಧ್ಯತೆ ಇರುತ್ತದೆ.




