ಹೊಸ ‘ನ್ಯಾಷನಲ್ ಕ್ರಶ್’ ತೃಪ್ತಿ ದಿಮ್ರಿಗೆ ದಕ್ಷಿಣದ ನಟನೊಟ್ಟಿಗೆ ನಟಿಸುವಾಸೆ
Triptii Dimri: ‘ಅನಿಮಲ್’ ಸಿನಿಮಾದ ಮೂಲಕ ಸ್ಟಾರ್ ಆಗಿರುವ, ಹೊಸ ‘ನ್ಯಾಷನಲ್ ಕ್ರಶ್’ ಎಂದು ಕರೆಸಿಕೊಳ್ಳುತ್ತಿರುವ ತೃಪ್ತಿ ದಿಮ್ರಿಗೆ ಹಲವು ಅವಕಾಶಗಳು ಬರುತ್ತಿವೆ, ಆದರೆ ಅವರಿಗೆ ದಕ್ಷಿಣದ ಈ ಸ್ಟಾರ್ ನಟನೊಟ್ಟಿಗೆ ನಟಿಸುವಾಸೆ.
Updated on: Dec 14, 2023 | 11:33 PM

‘ಅನಿಮಲ್’ ಸಿನಿಮಾದಲ್ಲಿ ನಟಿಸಿರುವ ತೃಪ್ತಿ ದಿಮ್ರಿ ಒಂದೇ ಸಿನಿಮಾಕ್ಕೆ ಸ್ಟಾರ್ ನಟಿಯಾಗಿಬಿಟ್ಟಿದ್ದಾರೆ.

‘ಅನಿಮಲ್’ ಸಿನಿಮಾದಲ್ಲಿ ಕೆಲವು ದೃಶ್ಯಗಳಲ್ಲಿ ಮಾತ್ರವೇ ಬಂದು ಹೋಗುವ ತೃಪ್ತಿ ದಿಮ್ರಿಯ ನಟನೆ, ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ತೃಪ್ತಿ ದಿಮ್ರಿಯನ್ನು ಹೊಸ ನ್ಯಾಷನಲ್ ಕ್ರಶ್ ಎಂದು ನೆಟ್ಟಿಗರು ಕರೆಯುತ್ತಿದ್ದಾರೆ. ತೃಪ್ತಿಯ ಚಿತ್ರಗಳು ಸಖತ್ ವೈರಲ್ ಆಗುತ್ತಿವೆ.

ಹಲವು ಬಾಲಿವುಡ್ ನಟರೊಟ್ಟಿಗೆ ನಟಿಸುವ ಆಫರ್ಗಳು ತೃಪ್ತಿ ದಿಮ್ರಿಗೆ ಹರಿದು ಬರುತ್ತಿವೆ, ವಿಕ್ಕಿ ಕೌಶಲ್ ಜೊತೆಗೆ ಹೊಸ ಸಿನಿಮಾದಲ್ಲಿ ತೃಪ್ತಿ ನಟಿಸುತ್ತಿದ್ದಾರೆ.

ಆದರೆ ತೃಪ್ತಿ ದಿಮ್ರಿಗೆ ಜೂ ಎನ್ಟಿಆರ್ ಜೊತೆ ನಟಿಸುವ ಆಸೆಯಂತೆ, ಎನ್ಟಿಆರ್ ಜೊತೆ ರೊಮ್ಯಾನ್ಸ್ ಮಾಡುವಾಸೆ ಎಂದಿದ್ದಾರೆ.

ತೃಪ್ತಿ ದಿಮ್ರಿಗೆ ಆದಷ್ಟು ಬೇಗ ದಕ್ಷಿಣ ಭಾರತದ ಸಿನಿಮಾಗಳ ಅವಕಾಶಗಳೂ ಬರಬಹುದೇನೋ?

ತೃಪ್ತಿ ದಿಮ್ರಿಗೆ ‘ಅನಿಮಲ್’ ಸಿನಿಮಾದ ಬಳಿಕ ಹಲವು ಆಫರ್ಗಳು ಬರುತ್ತಿವೆ, ಅವರ ಇನ್ಸ್ಟಾಗ್ರಾಂ ಫಾಲೋವರ್ಗಳ ಸಂಖ್ಯೆಯೂ ದಿಡೀರನೆ ಹೆಚ್ಚಾಗಿದೆ.



















