Stretch Marks: ಚರ್ಮದ ಮೇಲೆ ಸ್ಟ್ರೆಚ್ ಮಾರ್ಕ್ಗಳಾಗಿವೆಯೇ? ಚಿಂತಿಸುವುದನ್ನು ಬಿಡಿ ಈ ವಿಧಾನ ಅನುಸರಿಸಿ
ತೂಕ ಹೆಚ್ಚಾಗುವುದು ಮತ್ತು ಗರ್ಭಾವಸ್ಥೆಯ ನಂತರ ಸ್ಟ್ರೆಚ್ ಮಾರ್ಕ್ ಕಾಣಿಸಿಕೊಳ್ಳುತ್ತದೆ. ಸ್ಟ್ರೆಚ್ ಮಾರ್ಕ್‌ಗಳಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಈ ಕೆಳಗಿನ ಸುಲಭವಾದ ಸಲಹೆಗಳನ್ನು ಅನುಸರಿಸಬಹುದು.
Updated on: Dec 21, 2021 | 7:10 AM

ಸೌತೆಕಾಯಿ ಮತ್ತು ನಿಂಬೆ ರಸ: ಚರ್ಮದ ಮೇಲಿನ ಸ್ಟ್ರೆಚ್ ಮಾರ್ಕ್ ಕಡಿಮೆ ಮಾಡಲು ನಿಂಬೆ ರಸವು ತುಂಬಾ ಪ್ರಯೋಜನಕಾರಿಯಾಗಿದೆ. ಸೌತೆಕಾಯಿ ಕೂಡ ಚರ್ಮದ ಆರೋಗ್ಯಕ್ಕೆ ಉತ್ತಮ. ನಿಂಬೆ ರಸ ಮತ್ತು ಸೌತೆಕಾಯಿ ರಸವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಬಳಿಕ ಅದನ್ನು ಚರ್ಮದ ಮೇಲೆ ಅನ್ವಯಿಸಿ. ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ. ಸುಮಾರು 10 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.

ಕೋಕೋ ಬೆಣ್ಣೆ: ಕೋಕೋ ಬೆಣ್ಣೆಯನ್ನು ಮುಖ್ಯವಾಗಿ ಹೆಚ್ಚಿನ ಕ್ರೀಮ್‌ಗಳಲ್ಲಿ ಬಳಸಲಾಗುತ್ತದೆ. ಇದು ಚರ್ಮದ ಮೇಲಿನ ಗುರುತುಗಳನ್ನು ಅಥವಾ ಕಲೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಕೋಕೋ ಬೆಣ್ಣೆಯನ್ನು ಬಳಸಲು ಉತ್ತಮ ಸಮಯವೆಂದರೆ ರಾತ್ರಿ. ಹೀಗಾಗಿ ರಾತ್ರಿ ಮಲಗುವ ಮೊದಲು ಚರ್ಮಕ್ಕೆ ಕೋಕೋ ಬೆಣ್ಣೆ ಹಾಕಿ ಮಸಾಜ್ ಮಾಡಿ.

ತೆಂಗಿನ ಎಣ್ಣೆ: ಸ್ಟ್ರೆಚ್ ಮಾರ್ಕ್‌ಗಳನ್ನು ತೊಡೆದುಹಾಕಲು ನೀವು ತೆಂಗಿನ ಎಣ್ಣೆಯನ್ನು ಬಳಸಬಹುದು. ನೀವು ಹಗಲು ಅಥವಾ ರಾತ್ರಿಯಲ್ಲಿ ಇದನ್ನು ಚರ್ಮಕ್ಕೆ ಹಚ್ಚಬಹುದು. ತೆಂಗಿನ ಎಣ್ಣೆಯಿಂದ ಪ್ರತಿದಿನ ಮಸಾಜ್ ಮಾಡಿಕೊಳ್ಳಿ. ಇದು ನಿಮ್ಮ ಚರ್ಮದ ಕಾಂತಿಯನ್ನು ಉಳಿಸುತ್ತದೆ ಮತ್ತು ತೇವಾಂಶದಿಂದಿರಲು ಸಹಾಯ ಮಾಡುತ್ತದೆ.

ಅಲೋವೆರಾ: ಅಲೋವೆರಾ ನಿಮ್ಮ ಚರ್ಮಕ್ಕೆ ಉತ್ತಮ ಅಂಶವಾಗಿದೆ. ಇದು ಅನೇಕ ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ತಾಜಾ ಜೆಲ್ ಅನ್ನು ತೆಗೆದುಕೊಂಡು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗದಲ್ಲಿ ಮಸಾಜ್ ಮಾಡಿ ಮತ್ತು 20-30 ನಿಮಿಷಗಳ ಕಾಲ ಬಿಡಿ. ನೀವು ಇದನ್ನು ಪ್ರತಿದಿನ ಬಳಸಿದರೆ, ಉತ್ತಮ ಫಲಿತಾಂಶ ಪಡೆಯುತ್ತೀರಿ.

ಅಡಿಗೆ ಸೋಡಾ: ಅಡಿಗೆ ಸೋಡಾ ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಎಕ್ಸ್ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಡಿಗೆ ಸೋಡಾ ಮತ್ತು ನಿಂಬೆ ರಸದ ಮಿಶ್ರಣವು ಕಲೆಗಳನ್ನು ತೆಗೆದುಹಾಕಲು ಪರಿಣಾಮಕಾರಿ ಮಾರ್ಗವಾಗಿದೆ. ನೀವು ಅಡಿಗೆ ಸೋಡಾ ಮತ್ತು ಅರ್ಧ ನಿಂಬೆಯ ರಸ ಸೇರಿಸಿ ಸ್ಟ್ರೆಚ್ ಮಾರ್ಕ್ ಇರುವ ಕಡೆ ಹಚ್ಚಿ. 20 ನಿಮಿಷಗಳ ನಂತರ ತೊಳೆಯಿರಿ.
























