Girish Bharadwaj: ತೂಗು ಸೇತುವೆ ನಿರ್ಮಿಸಿ ಜನರ ಕಷ್ಟ ಪರಿಹರಿಸಿದ ಬ್ರಿಡ್ಜ್​ಮ್ಯಾನ್​ ಗಿರೀಶ್ ಭಾರದ್ವಾಜರ ಸಾಧನೆಗೆ ನಮ್ಮದೊಂದು ಸನ್ಮಾನ

Edited By:

Updated on: Jan 05, 2022 | 9:26 AM

Navanakshatra Sanman 2021: ಅದು 1989ರ ಸಮಯ.. ದಕ್ಷಿಣ ಕನ್ನಡ ಜಿಲ್ಲೆಯ ಅರಂಬೂರಿನ ಜನ ಸಂಕಷ್ಟದಲ್ಲಿದ್ದರು. ಅನಾರೋಗ್ಯ ಕಾಣಿಸಿಕೊಂಡ್ರೆ ಆಸ್ಪತ್ರೆಗೆ ತೆರಳೋದೇ ಸಾಹಸವಾಗ್ತಿತ್ತು. ದೋಣಿಯಲ್ಲಿ ಪಯಸ್ವಿನಿ ನದಿ ದಾಟಿ ಸುಳ್ಯ ತಲುಪೋದು ನರಕಯಾತನೆ ನೀಡ್ತಿತ್ತು. ಆಗ ಅರಂಬೂರಿನ ಒಂದಿಷ್ಟು ಜನ, ಅದೊಬ್ಬ ಇಂಜಿನಿಯರ್ ಬಳಿ ತೆರಳಿ, ಈ ಯಮಯಾತನೆಯಿಂದ ಮುಕ್ತಿ ನೀಡಿ ಅಂತಾ ಅಂಗಲಾಚಿದ್ರು. ಯೋಚನೆಗಿಳಿದ ಮೆಕ್ಯಾನಿಕಲ್ ಇಂಜಿನಿಯರ್ ಗಿರೀಶ್ ಭಾರದ್ವಾಜ್ ಅದ್ಭುತವನ್ನೇ ಸೃಷ್ಟಿಸಿದ್ರು. ಅರಂಬೂರಿನಿಂದ ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ 87ಮೀಟರ್ ಉದ್ದದ ತೂಗು ಸೇತುವೆ ನಿರ್ಮಿಸಿದ್ರು. ಅಂದು ತೂಗು ಸೇತುವೆ ನಿರ್ಮಿಸಿದ ಗಿರೀಶ್ ಇಂದು ಬ್ರಿಡ್ಜ್ಮ್ಯಾನ್ ಅಂತಲೇ ಚಿರಪರಿಚಿತ. ಗಿರೀಶ್ ಭಾರದ್ವಾಜರ ಈ ನಿಸ್ವಾರ್ಥ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಇಂತಹ ಲೋಕೊಪಕಾರಿ ಬ್ರಿಡ್ಜ್ಮ್ಯಾನ್ ಗಿರೀಶ್, ಟಿವಿ9ನ 2021ನೇ ಸಾಲಿನ ನವನಕ್ಷತ್ರ ಗೌರವಕ್ಕೆ ಭಾಜನರಾಗಿದ್ದಾರೆ.

1 / 7
ಬ್ರಿಡ್ಜ್ಮ್ಯಾನ್ ಅಂತಲೇ ಚಿರಪರಿಚಿತರಾದ ಮೆಕ್ಯಾನಿಕಲ್ ಇಂಜಿನಿಯರ್ ಗಿರೀಶ್ ಭಾರದ್ವಾಜ್

ಬ್ರಿಡ್ಜ್ಮ್ಯಾನ್ ಅಂತಲೇ ಚಿರಪರಿಚಿತರಾದ ಮೆಕ್ಯಾನಿಕಲ್ ಇಂಜಿನಿಯರ್ ಗಿರೀಶ್ ಭಾರದ್ವಾಜ್

2 / 7

ಕೃಷಿಯಲ್ಲಿ ಅಪರೂಪದ ಸಾಧನೆ ಮಾಡಿರುವ ರೈತ ಬೋರೆ ಗೌಡರ ಜೊತೆ ಗಿರೀಶ್ ಭಾರದ್ವಾಜ್

3 / 7

ಕರ್ನಾಟಕ ಹಾಗೂ ದೇಶದ ಇತರ ಭಾಗಗಗಳಲ್ಲಿ 142 ಬ್ರಿಡ್ಜ್ಗಳನ್ನು ನಿರ್ಮಿಸಿ ನೂರಾರು ಕುಗ್ರಾಮಗಳ ಜನರಿಗೆ ಹೊರ ಜಗತ್ತಿನ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡಿದ ಬ್ರಿಡ್ಜ್ಮ್ಯಾನ್ ಎಂದೇ ಖ್ಯಾತಿಪಡೆದಿರುವ ಗಿರೀಶ್ ಭಾರದ್ವಾಜ್ ಅವರಿಗೆ ಟಿವಿ9ನ 2021ನೇ ಸಾಲಿನ ನವನಕ್ಷತ್ರ ಗೌರವ.

4 / 7

ಗಿರೀಶ್ ಭಾರದ್ವಾಜ್ ಅವರಿಗೆ ನವನಕ್ಷತ್ರ ಗೌರವ ಕಾಣಿಕೆ ನೀಡಿ ಸನ್ಮಾನಿಸಿದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್

5 / 7

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮತ್ತು ಬ್ರಿಡ್ಜ್ಮ್ಯಾನ್ ಗಿರೀಶ್ ಭಾರದ್ವಾಜ್

6 / 7

ಕರ್ನಾಟಕ ಹಾಗೂ ದೇಶದ ಇತರ ಭಾಗಗಗಳಲ್ಲಿ 142 ಬ್ರಿಡ್ಜ್ಗಳನ್ನು ನಿರ್ಮಿಸಿ ಬ್ರಿಡ್ಜ್ಮ್ಯಾನ್ ಎಂದೇ ಖ್ಯಾತಿಪಡೆದಿರುವ ಗಿರೀಶ್ ಭಾರದ್ವಾಜ್

7 / 7

ಗಿರೀಶ್ ಭಾರದ್ವಾಜ್

Published On - 8:35 am, Wed, 5 January 22

TV9 Web

TV9 Kannada

Read More
Loading...
Unable to load recommendations.
Follow Us