ಫೆ. 1ರ ಬಳಿಕ ಮಾರುಕಟ್ಟೆ ಕುಸಿಯುತ್ತದಾ? ಬಜೆಟ್​ನಲ್ಲಿ ಸಂಭಾವ್ಯ ಘೋಷಣೆಗಳಿವು…

|

Updated on: Jan 26, 2025 | 1:04 PM

ನವದೆಹಲಿ, ಜನವರಿ 26: ಈ ಬಾರಿಯ ಬಜೆಟ್​ನಲ್ಲಿ ಇಪಿಎಫ್​ಒ ಪಿಂಚಣಿ ಏರಿಕೆ, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಅತಿಶ್ರೀಮಂತರಿಗೆ ಹೆಚ್ಚು ತೆರಿಗೆ ಬೀಳುವ ನಿರೀಕ್ಷೆ ಇದೆ ಎನ್ನುತ್ತಾರೆ ರೈಟ್ ಹೊರೈಜಾನ್​ನ ಫಂಡ್ ಮ್ಯಾನೇಜರ್ ಅನಿಲ್ ರೆಗೋ; ಹಾಗೆಯೇ, ಬಜೆಟ್ ಬಳಿಕ ಮಾರುಕಟ್ಟೆ ಬೀಳುವ ಸಾಧ್ಯತೆಯನ್ನು ಅವರು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಒಂದು ವರದಿ:

1 / 5
ಕಳೆದ ಆರು ತಿಂಗಳಿಂದಲೂ ಸಾಕಷ್ಟು ಅಲುಗಾಟದಲ್ಲಿರುವ ಷೇರು ಮಾರುಕಟ್ಟೆ ಫೆಬ್ರುವರಿ 1ರ ಬಜೆಟ್ ಬಳಿಕ ತೀವ್ರ ರೀತಿಯಲ್ಲಿ ಕುಸಿತ ಕಾಣಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ರೈಟ್ ಹೊರೈಜಾನ್ಸ್​ನ ಸಂಸ್ಥಾಪಕ ಮತ್ತು ಫಂಡ್ ಮ್ಯಾನೇಜರ್ ಆಗಿರುವ ಅನಿಲ್ ರೆಗೋ ಅವರ ಪ್ರಕಾರ, ಬಜೆಟ್ ಬಳಿಕ ಮಾರ್ಕೆಟ್ ಕರೆಕ್ಷನ್ ಸಣ್ಣ ಮಟ್ಟದಲ್ಲಿ ಆಗಬಹುದು. ಆದರೆ, ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಕುಸಿಯುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ.

2 / 5
ಷೇರು ಮಾರುಕಟ್ಟೆ ಈಗಾಗಲೇ ಸಾಕಷ್ಟು ಪ್ರತಿರೋಧ ತೋರಿದೆ. ಹೂಡಿಕೆದಾರರು ಸಕಾರಾತ್ಮಕವಾಗಿ ಭಾಗಿಯಾಗುತ್ತಿದ್ದಾರೆ. ಮೂಲಭೂತ ಅಂಶಗಳು ಉತ್ತಮಗೊಳ್ಳುತ್ತಿವೆ. ಹಲವು ಷೇರುಗಳ ಮೌಲ್ಯ ಅಧಿಕ ಮಟ್ಟದಲ್ಲಿದ್ದರೂ, ಅತಿರೇಕ ಎನಿಸುವ ಮಟ್ಟದಲ್ಲಿಲ್ಲ.

3 / 5
ಕಾರ್ಪೊರೇಟ್ ಸಂಸ್ಥೆಗಳ ಆದಾಯ ಉತ್ತಮವಾಗಿಯೇ ಇದೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರ ಉಪಸ್ಥಿತಿ ಕಡಿಮೆ. ಇದು ಮಾರುಕಟ್ಟೆಯ ಆರೋಗ್ಯ ಸ್ಥಿತಿಗೆ ದ್ಯೋತಕವಾಗಿದೆ. ಕಿರು ಅವಧಿಯಲ್ಲಿ ಮಾರುಕಟ್ಟೆಯಲ್ಲಿ ವಿಚಲನೆಗಳಾದರೂ, ಬಜೆಟ್​ನಲ್ಲಿ ಹಣಕಾಸು ಶಿಸ್ತು ಕಾಯ್ದುಕೊಂಡರೆ ಮತ್ತು ಇನ್​ಫ್ರಾಸ್ಟ್ರಕ್ಚರ್​​ಗಳಲ್ಲಿ  ಹೂಡಿಕೆಗೆ ಒತ್ತುಕೊಟ್ಟರೆ ದೀರ್ಘಾವಧಿಯಲ್ಲಿ ಮಾರುಕಟ್ಟೆ ಸರಾಗವಾಗಿರುತ್ತದೆ ಎನ್ನುವುದು ಅನಿಲ್ ರೆಗೋ ಅನಿಸಿಕೆ.

4 / 5
ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿರುವುದು ಭಾರತದ ಮಾರುಕಟ್ಟೆಯಲ್ಲಿ ಅನಿಶ್ಚಿತ ಪರಿಣಾಮ ತರುವ ಸಾಧ್ಯತೆ ಇದೆ. ಆದರೆ, ಭಾರತದಲ್ಲಿ ದೇಶೀಯವಾಗಿ ಉತ್ತಮವಾಗಿರುವ ಅಂಶಗಳು ಬಾಹ್ಯ ಆಘಾತಗಳನ್ನು ನಿಷ್ಕ್ರಿಯಗೊಳಿಸಬಲ್ಲುವು. ಅಮೆರಿಕದ ನೀತಿಗಳು ದೀರ್ಘಾವಧಿಯಲ್ಲಿ ಭಾರತದ ಮೇಲೆ ಬೀರಬಹುದಾದ ಪರಿಣಾಮ ಕಡಿಮೆಯೇ ಇರುತ್ತದೆ ಎನ್ನಲಾಗಿದೆ.

5 / 5
ಇಪಿಎಫ್​ಒ ಕನಿಷ್ಠ ಪಿಂಚಣಿಯನ್ನು 1,000 ರೂನಿಂದ 5,000 ರೂಗೆ ಏರಿಸಬಹುದು. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 10 ಲಕ್ಷ ರೂಗೆ ಏರಿಸಬಹುದು. ಅತಿ ಶ್ರೀಮಂತರಿಗೆ ಹೆಚ್ಚುವರಿ ಶೇ. 2ರಷ್ಟು ತೆರಿಗೆ ಹಾಕಬಹುದು. ಆ ಹಣವನ್ನು ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಬಳಸಬಹುದು ಎಂದು ರೆಗೋ ಅಭಿಪ್ರಾಯಪಟ್ಟಿದ್ದಾರೆ.