- Kannada News Photo gallery Union Minister Pralhad Joshi played Traditional pagade Game in Dharwad, Karnataka news in kannada
ರಾಜಕೀಯ ಕೆಲಸಕ್ಕೆ ಕೊಂಚ ಬಿಡುವು: ಪಗಡೆ ಆಟವಾಡಿದ ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧಾರವಾಡದ ಹೆಬ್ಬಳ್ಳಿ ಗ್ರಾಮದ ಮೂಗ ಬಸವೇಶ್ವರ ದೇವಸ್ಥಾನದಲ್ಲಿ ಹಿರಿಯರೊಂದಿಗೆ ಪಗಡೆಯಾಟ ಆಡಿದ್ದಾರೆ. ರಾಜಕೀಯದಿಂದ ವಿರಾಮ ಪಡೆದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು. ಈ ಘಟನೆಯನ್ನು ಟ್ವೀಟ್ ಮಾಡಿ, ಜೀವನದಲ್ಲಿ ನಾವು ಕೇವಲ ಕಾಯಿಗಳು ಎಂದು ಅವರು ಬರೆದಿದ್ದಾರೆ. ದೇವರ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ ಎಂದಿದ್ದಾರೆ.
Updated on:Nov 21, 2024 | 11:27 AM

ರಾಜಕೀಯ ಕೆಲಸದಿಂದ ಕೊಂಚ ಬಿಡುವು ಮಾಡಿಕೊಂಡ ಕೇಂದ್ರ ಸಚಿವ ಪ್ರಲ್ದಾದ್ ಜೋಶಿ ಇಂದು ಹಿರಿಯರೊಂದಿಗೆ ಪಗಡೆಯಾಟ ಆಡಿ ತಮ್ಮ ಬಾಲ್ಯವನ್ನು ಮೆಲಕು ಹಾಕಿದರು.

ಹೌದು. ಪ್ರಲ್ಹಾದ್ ಜೋಶಿ ಇಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ ಸಂದರ್ಭದಲ್ಲಿ ಮೂಗ ಬಸವೇಶ್ವರ ದೇವಸ್ಥಾನಕ್ಕೆ ಈ ಘಟನೆ ನಡೆದಿದೆ.

ದೇವಸ್ಥಾನದ ಭೇಟಿ ವೇಳೆ ಪ್ರಾಂಗಣದಲ್ಲಿ ಗ್ರಾಮದ ಹಿರಿಯರು ಪಗಡೆಯಾಡುತ್ತಿದ್ದರು. ಇದನ್ನು ನೋಡಿ ಅವರು ಆಟಕ್ಕೆ ಕುಳಿತುಕೊಂಡರು. ದೇವರಿಗೆ ನಮಸ್ಕರಿಸಿ ದಾಳ ಉರುಳಿಸಿ ಖುಷಿ ಪಟ್ಟರು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ. ನಡೆಸುವಾತ ಬೇರೆ. ಅವನ ಇಚ್ಛೆ ಯಾರು ಬಲ್ಲರು? ಎಂದು ಬರೆದುಕೊಂಡಿದ್ದಾರೆ.

ದೇವಸ್ಥಾನದ ಆವರಣದಲ್ಲಿ ಪರಂಪರಾಗತವಾಗಿ ಮಹಾನವಮಿಯಿಂದ ಪಗಡೆ ಆಟ ಆಡುತ್ತಿದ್ದ ಹಿರಿಯರೊಂದಿಗೆ ದಾಳ ಉರುಳಿಸುವ ಅವಕಾಶ ಸಿಕ್ಕಿದ್ದು, ಆ ಮೂಗಬಸವೇಶ್ವರ ದೈವನ ಇಚ್ಛೆ ಎಂದಿದ್ದಾರೆ.
Published On - 7:42 pm, Sun, 17 November 24



















