Updated on:May 24, 2022 | 11:53 AM
ರಸ್ತೆಯ ಮೇಲೆ SORRY SORRY ಅಂತಾ ಬರೆದು ಹುಚ್ಚಾಟ ಮೆರೆದಿರುವ ಘಟನೆ ಸುಂಕದಕಟ್ಟೆಯ ಶಾಂತಿಧಾಮ ಕಾಲೇಜು ಬಳಿ ನಡೆದಿದೆ. ಕಾಲೇಜು ಕಾಂಪೌಂಡ್ ಮೇಲೂ SORRY ಅಂತಾ ಬರೆದಿದ್ದಾರೆ. ರಸ್ತೆ ಹಾಗೂ ಕಾಲೇಜು ಗೋಡೆ ಮೇಲೆ SORRY ಅಂತ ಬರೆದಿರುವ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟನೆ ರಾತ್ರಿ 11 ರಿಂದ 12 ಗಂಟೆ ಸಮಯದಲ್ಲಿ ನಡೆದಿದೆ. ಡ್ಯೂಕ್ ಬೈಕ್ನಲ್ಲಿ ಬಂದು ಇಬ್ಬರು ಯುವಕರು ಈ ಕೃತ್ಯ ಎಸಗಿದ್ದಾರೆ. ಫುಡ್ ಡೆಲವರಿ ಬ್ಯಾಗ್ನೊಂದಿಗೆ ಬಂದ ಇಬ್ಬರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಬ್ಯಾಗ್ನೊಳಗೆ ಕೆಂಪು ಬಣ್ಣದ ಸ್ಪ್ರೇ ತಂದಿದ್ದರು. ಸ್ಪ್ರೇ ಮೂಲಕ SORRY ಎಂದು ಬರೆದಿದ್ದಾರೆ. ತನ್ನ ಪ್ರೇಯಸಿಗಾಗಿ ಈ ರೀತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಯಾರು ಹೀಗೆ ಮಾಡಿದ್ದಾರೊ ಪತ್ತೆ ಮಾಡಬೇಕು. ರಾತ್ರಿ ನೋಡಿದಾಗ ಈ ರೀತಿ ಇರಲಿಲ್ಲ. ಬೆಳಗ್ಗೆ ಎದ್ದು ನೋಡಿದರೆ SORRY SORRY ಅಂತಾ ಬರೆಯಲಾಗಿದೆ. ಪ್ರೀತಿ ಅನ್ನೋದು ಮನಸ್ಸಿನಲ್ಲಿರಬೇಕು. ಈ ರೀತಿಯಾಗಿ ಆಗಬಾರದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
Published On - 11:44 am, Tue, 24 May 22