- Kannada News Photo gallery Varalakshmi Vratam 2024 : Here's a tip to look traditional for the Varamahalakshmi festival Kannada News
Varalakshmi Vratam 2024 : ನಿಮ್ಮ ಮೈಬಣ್ಣಕ್ಕೆ ಈ ಬಣ್ಣದ ಸೀರೆ, ಬಳೆ ಬೆಸ್ಟ್ ನೋಡಿ
ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಈ ಮಾಸದ ಎರಡನೇ ಹಬ್ಬವೇ ವರಮಹಾಲಕ್ಷ್ಮಿ ಹಬ್ಬ. ಎರಡನೇ ಶುಕ್ರವಾರದಂದು ಆಚರಿಸಲಾಗುವ ಈ ಹಬ್ಬವು ಈ ಬಾರಿ ಆಗಸ್ಟ್ 16 ರಂದು ಬಂದಿದೆ. ಮನೆಯಲ್ಲಿ ಲಕ್ಷ್ಮಿದೇವಿಯ ಮೂರ್ತಿಯ ಅಲಂಕಾರ ಎಷ್ಟು ಚೆನ್ನಾಗಿ ಮಾಡುತ್ತಿರೋ ಅದೇ ರೀತಿ ಹಬ್ಬದ ದಿನ ನೀವು ಕೂಡ ಸುಂದರವಾಗಿ ಕಾಣಿಸಿಕೊಳ್ಳುವುದು ಅಷ್ಟೇ ಮುಖ್ಯ. ಹೀಗಾಗಿ ಹಬ್ಬದ ದಿನ ಟ್ರಡಿಷನಲ್ ಲುಕ್ ನಲ್ಲಿ ಕಾಣಿಸಿಕೊಳ್ಳಲು ಈ ಕೆಲವು ಸಲಹೆಗಳನ್ನು ಪಾಲಿಸಿ.
Updated on: Aug 14, 2024 | 4:35 PM

ವರಮಹಾಲಕ್ಷ್ಮಿ ಹಬ್ಬದಂದು ಸೀರೆಯನ್ನು ಧರಿಸುವುದರಿಂದ ನಿಮಗೆ ಸಾಂಪ್ರದಾಯಿಕ ಲುಕ್ ತಂದು ಕೊಡುತ್ತದೆ. ನಿಮ್ಮ ಮೈ ಬಣ್ಣಕ್ಕೆ ಒಪ್ಪುವಂತಹ ಬಣ್ಣದ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿಕೊಳ್ಳಿ. ಪ್ಲೇನ್ ರೇಷ್ಮೆ ಸೀರೆಯೊಂದಿಗೆ ಗ್ರ್ಯಾಂಡ್ ಬ್ಲೌಸ್ ಧರಿಸಿದರೆ ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು.

ಸೀರೆ ಧರಿಸಲು ಇಷ್ಟ ಪಡದವರಿಗೆ ರೇಷ್ಮೆ ಸೀರೆಯ ಲಂಗ ದಾವಣಿಯು ಉತ್ತಮ ಆಯ್ಕೆಯಾಗಿದೆ. ಈ ಉಡುಗೆಯೂ ಸಾಂಪ್ರದಾಯಿಕ ಲುಕ್ ನೀಡುವುದರೊಂದಿಗೆ ಹಬ್ಬದ ದಿನ ಗ್ರ್ಯಾಂಡ್ ಆಗಿ ಕಾಣಿಸಿಕೊಳ್ಳಬಹುದು. ಹುಡುಗಿಯರು ಮಾತ್ರವಲ್ಲದೇ ಮದುವೆಯಾದ ಮಹಿಳೆಯರು ಈ ಲಂಗ ದಾವಣಿಯನ್ನು ಧರಿಸಬಹುದು.

ಸೀರೆ ಅಥವಾ ಲಂಗ ದಾವಣಿ ಉಡುಪಿನೊಂದಿಗೆ ಆಂಟಿಕ್ ಡಿಸೈನ್‌ನ ಟ್ರೆಡಿಷನಲ್ ಆಭರಣಗಳ ಆಯ್ಕೆಯಿರಲಿ. ಸೀರೆಗೆ ಹೊಂದಿಕೆಯಾಗುವ ಆಂಟಿಕ್ ಜ್ಯುವೆಲರಿ ಅಥವಾ ಟ್ರೆಡಿಷನಲ್ ಜ್ಯುವೆಲರಿಗಳಾದ ಜುಮಕಿ, ನೆಕ್ಲೇಸ್, ಹಾರ, ಬಾಜುಬಂದ್ ಧರಿಸಿದರೆ ಇನ್ನಷ್ಟು ಸುಂದರವಾಗಿ ಕಾಣಿಸಿಕೊಳ್ಳಬಹುದು.

ಮದುವೆಯಾದ ಹೆಣ್ಣು ಮಕ್ಕಳು ಕೆಂಪು ಹಾಗೂ ಹಸಿರು ಬಣ್ಣದ ಗಾಜಿನ ಬಳೆಗಳನ್ನು ಧರಿಸಿ. ಈ ಬಳೆಯ ನಡುವೆ ಬಂಗಾರದ ಸೆಟ್ ಬ್ಯಾಂಗಲ್ಸ್ ಧರಿಸಿದರೆ ಕೈಯ ಅಂದವು ಹೆಚ್ಚುತ್ತದೆ. ಈ ರೀತಿ ಬಳೆಯನ್ನು ತೊಟ್ಟರೆ ರೇಷ್ಮೆ ಸೀರೆ ಹಾಗೂ ಟ್ರೆಡಿಷನಲ್ ಜ್ಯುವೆಲರಿಗೂ ಒಪ್ಪುತ್ತದೆ.

ಮಹಿಳೆಯರು ಉಡುಗೆ ತೊಡುಗೆ ಆಭರಣಗಳ ಆಯ್ಕೆಗೆ ಸಮಯ ಕೊಡುವಷ್ಟು ಹೇರ್ ಸ್ಟೈಲ್ ಕಡೆಗೆ ಗಮನಕೊಡುವುದಿಲ್ಲ. ಆದರೆ ಸೀರೆ ಹಾಗೂ ಲಂಗದಾವಣಿಯಂತಹ ಉಡುಗೆಗೆ ಬನ್ ಹೇರ್ ಸ್ಟೈಲ್ ಬೆಸ್ಟ್ ಎನ್ನಬಹುದು. ಉದ್ದದ ಕೂದಲು ಇರುವವರಿಗೆ ಈ ಕೇಶ ವಿನ್ಯಾಸವು ಒಪ್ಪುತ್ತದೆ. ತುರುಬಿನ ಸುತ್ತ ಮಲ್ಲಿಗೆ ಹೂವನ್ನು ಮುಡಿದುಕೊಂಡರೆ ಹಬ್ಬದ ದಿನ ಟ್ರಡಿಷನಲ್ ಲುಕ್ ನಲ್ಲಿ ಕಂಗೊಳಿಸಬಹುದು.




