ಹಂಪಿಯ ವಿರೂಪಾಕ್ಷ ದೇವಸ್ಥಾನಕ್ಕೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಭೇಟಿ; ಇಲ್ಲಿವೆ ಚಿತ್ರಗಳು

Edited By:

Updated on: Aug 21, 2021 | 11:47 AM

ಹಂಪಿಯ ವಿಶ್ವ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ಇಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ. ಉಷಾ ಆಗಮಿಸಿದ್ದಾರೆ.

1 / 7
ಹಂಪಿಗೆ ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹಂಪಿಯ ಶ್ರೀ ವಿರೂಪಾಕ್ಷ ದೇಗುಲ, ಲೋಟಸ್ ಮಹಲ್
ವಿಜಯ ವಿಠ್ಠಲ ದೇಗುಲ ವೀಕ್ಷಿಸಿದ್ದಾರೆ. ಈ ನಿಟ್ಟಿನಲ್ಲಿ ಹಂಪಿಯಲ್ಲಿ ಇಂದು ಪೊಲೀಸ್ ಭದ್ರತೆ ಮಾಡಲಾಗಿದೆ.

ಹಂಪಿಗೆ ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ನೀಡಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹಂಪಿಯ ಶ್ರೀ ವಿರೂಪಾಕ್ಷ ದೇಗುಲ, ಲೋಟಸ್ ಮಹಲ್ ವಿಜಯ ವಿಠ್ಠಲ ದೇಗುಲ ವೀಕ್ಷಿಸಿದ್ದಾರೆ. ಈ ನಿಟ್ಟಿನಲ್ಲಿ ಹಂಪಿಯಲ್ಲಿ ಇಂದು ಪೊಲೀಸ್ ಭದ್ರತೆ ಮಾಡಲಾಗಿದೆ.

2 / 7

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಂಪಿ ಪ್ರವಾಸ ಕೈಗೊಂಡಿದ್ದಾರೆ. ಹಂಪಿಯ ವಿರೂಪಾಕ್ಷ ದೇವಸ್ಥಾನಕ್ಕೆ ವೆಂಕಯ್ಯ ನಾಯ್ಡು ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಬಳಿಕ ವಿರೂಪಾಕ್ಷೇಶ್ವರ, ಪಾರ್ವತಿ, ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

3 / 7

ಈ ವೇಳೆ ಹಂಪಿಯ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಶ್ರೀಗಳು ಉಪಸ್ಥಿತರಿದ್ದರು. ಕಡಲೇಕಾಳು ಗಣೇಶ, ಲೋಟಸ್ ಮಹಲ್, ವಿಜಯವಿಠಲ ದೇವಸ್ಥಾನ, ಕಲ್ಲಿನ ರಥ ಸೇರಿದಂತೆ ಹಲವು ಸ್ಮಾರಕಗಳನ್ನು ವೆಂಕಯ್ಯ ನಾಯ್ಡು ಹಾಗೂ ಅವರ ಕುಟುಂಬ ವೀಕ್ಷಣೆ ಮಾಡಲಿದ್ದಾರೆ.

4 / 7

ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಾಭದ್ರಾ ಜಲಾಶಯ ಸೌಂದರ್ಯವನ್ನು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಎಂ.ವೆಂಕಯ್ಯ ನಾಯ್ಡು ಹಾಗೂ ಅವರ ಇಡೀ ಕುಟುಂಬದವರು ನಿನ್ನೆ ಕಣ್ತುಂಬಿಕೊಂಡರು. ಇಂದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಗೆ ಎಂ.ವೆಂಕಯ್ಯ ನಾಯ್ಡು ಭೇಟಿ ನೀಡಿದ್ದಾರೆ.

5 / 7

ಬ್ಯಾಟರಿ ಚಾಲಿತ ವಾಹನದ ಮೂಲಕ ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳಿದ ವೆಂಕಯ್ಯನಾಯ್ಡು ಕುಟುಂಬ ಸಮೇತವಾಗಿ ಹಂಪಿ ಸ್ಮಾರಕ ವೀಕ್ಷಣೆ ಮಾಡುತ್ತಿದ್ದಾರೆ.

6 / 7

ಹಂಪಿಯ ವಿಶ್ವ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ಇಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ. ಉಷಾ ಆಗಮಿಸಿದ್ದಾರೆ. ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಮುನ್ಸಿಪಲ್ ಮೈದಾನಕ್ಕೆ ನಿನ್ನೆ ಸಂಜೆ ಆಗಮಿಸಿದ್ದರು. ಆ ಬಳಿಕ ಇಂದು ಮುಂಜಾನೆ ಹಂಪಿಗೆ ಆಗಮಿಸಿದ್ದಾರೆ.

7 / 7

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ವೆಂಕಯ್ಯ ನಾಯ್ಡು ಸ್ಮಾರಕಗಳ ವೀಕ್ಷಣೆ ಮಾಡಿದ್ದಾರೆ. ವೆಂಕಯ್ಯನಾಯ್ಡು ಹಾಗೂ ಅವರ ಕುಟುಂಬಕ್ಕೆ ದೇವಸ್ಥಾನದ ಆನೆ ವಿಶೇಷವಾಗಿ ಸ್ವಾಗತಿಸಿತು. ಹೂಮಾಲೆ ಹಾಕಿ ದೇವಸ್ಥಾನದ ಆನೆ ಲಕ್ಷ್ಮಿ ಸ್ವಾಗತ ಕೋರಿದೆ.

Published On - 11:40 am, Sat, 21 August 21

Loading...
Unable to load recommendations.
Follow Us