ನಟ ವಿಜಯ್ ದೇವರಕೊಂಡ ಟರ್ಕಿ ಪ್ರವಾಸದಲ್ಲಿದ್ದಾರೆ. ಡಯಟ್ಗೆ ಗುಡ್ಬೈ ಹೇಳಿ ಟರ್ಕಿ ಆಹಾರ ಎಂಜಾಯ್ ಮಾಡುತ್ತಿದ್ದಾರೆ.
ಟರ್ಕಿಯಲ್ಲಿ ವಿವಿಧ ಬಗೆಯ ಆಹಾರ ಸವಿಯುತ್ತಿರುವ ಚಿತ್ರಗಳನ್ನು ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಟರ್ಕಿ ಪ್ರವಾಸಕ್ಕೆ ಒಬ್ಬರೇ ಹೋಗಿದ್ದಾರೆಯೇ ಅಥವಾ ರಶ್ಮಿಕಾ ಮಂದಣ್ಣ ಸಹ ಅವರೊಟ್ಟಿಗಿದ್ದಾರೆಯೇ ಎಂಬ ಅನುಮಾನ ಶುರುವಾಗಿದೆ.
ಈ ಹಿಂದೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ಪ್ರವಾಸಕ್ಕೆ ಹೋಗಿದ್ದರು. ಬಳಿಕ ನಾವಿಬ್ಬರೇ ಅಲ್ಲ ನಮ್ಮೊಟ್ಟಿಗೆ ಇನ್ನೂ ಕೆಲವು ಗೆಳೆಯರಿದ್ದರು ಎಂದು ಸ್ಪಷ್ಟನೆ ನೀಡಿದ್ದರು ರಶ್ಮಿಕಾ.
ಲೈಗರ್ ಸಿನಿಮಾದ ಸೋಲಿನ ಬಳಿಕ ಇದೀಗ ಸಮಂತಾ ಜೊತೆಗೆ ಖುಷಿ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ. ಅದರ ಬಳಿಕ ಗೀತಾ ಗೋವಿಂದಂ2 ಸಿನಿಮಾ ಸಹ ಬರಲಿದೆ.