
ವಿಜಯಲಕ್ಷ್ಮೀ ಅವರು ಕಳೆದ ಆರು ತಿಂಗಳಿಂದ ಟೆನ್ಷನ್ನಲ್ಲಿ ಇದ್ದರು. ಇದಕ್ಕೆ ಕಾರಣ ಆಗಿದ್ದು ದರ್ಶನ್ ಬಂಧನ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆದ ದಿನದಿಂದ ವಿಜಯಲಕ್ಷ್ಮೀ ಸರಿಯಾಗಿ ನಿದ್ದೆಯನ್ನೇ ಮಾಡಿರಲಿಲ್ಲ. ಆದರೆ, ಈಗ ಎಲ್ಲವೂ ಬದಲಾಗಿದೆ.

ದರ್ಶನ್ ಅವರು ಇತ್ತೀಚೆಗೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಆ ಬಳಿಕ ದರ್ಶನ್ ಅವರು ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಜೊತೆಯೂ ಅವರು ಸಮಯ ಕಳೆದಿದ್ದಾರೆ. ಇದು ದರ್ಶನ್ಗೆ ಖುಷಿ ನೀಡಿದೆ.

ವಿಜಯಲಕ್ಷ್ಮೀ ಅವರು ಬೆಕ್ಕಿನ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ವೇಳೆ ಅವರು ಖುಷಿಯಿಂದ ಇದ್ದಾರೆ. ವಿಜಯಲಕ್ಷ್ಮೀ ಅವರು ಮತ್ತೆ ಹ್ಯಾಪಿ ಮೂಡ್ಗೆ ಮರಳಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ್ ಬಂಧನಕ್ಕೆ ಒಳಗಾದಾಗ ವಿಜಯಲಕ್ಷ್ಮೀ ಅವರು ಸಾಕಷ್ಟು ಸುತ್ತಾಟ ನಡೆಸಿದ್ದರು. ಕೊರ್ಟು-ಕಚೇರಿ ಅಲೆದಿದ್ದರು. ಅವರು ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ಕೂಡ ನೀಡಿದ್ದರು. ಅವರ ಪ್ರಾರ್ಥನೆ ಕೊನೆಗೂ ಈಡೇರಿದೆ.

ವಿಜಯಲಕ್ಷ್ಮೀ ಹಾಗೂ ದರ್ಶನ್ ಮಧ್ಯೆ ಹಲವು ಬಾರಿ ವೈಮನಸ್ಸು ಮೂಡಿದ್ದು ಇದೆ. ಆದರೆ, ಪ್ರತಿ ಬಾರಿಯೂ ದರ್ಶನ್ ಪರ ನಿಂತಿದ್ದಾರೆ ಅವರ ಪತ್ನಿ. ಈಗಲೂ ಅವರು ದರ್ಶನ್ ಪರ ನಿಂತು, ಅವರನ್ನು ಬೆಂಬಲಿಸುತ್ತಾ ಇದ್ದಾರೆ.