- Kannada News Photo gallery Vijayalakshmi visit Kolluru Shri Mookambika Devi Temple And did special Pooja for Darshan Cinema News
ಮಳೆಯ ಮಧ್ಯೆಯೇ ದೇವರಿಗೆ ವಿಜಯಲಕ್ಷ್ಮೀ ವಿಶೇಷ ಪೂಜೆ; ಇಲ್ಲಿವೆ ಫೋಟೋಸ್
ವಿಜಯಲಕ್ಷ್ಮೀ ಅವರು ಕೊಲ್ಲೂರಿಗೆ ತೆರಳಿದ್ದಾರೆ. ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಮಳೆಯ ಮಧ್ಯೆಯೇ ಅವರು ದೇವರ ಮೊರೆ ಹೋಗಿದ್ದಾರೆ. ಇಷ್ಟೇ ಅಲ್ಲ, ಚಂಡಿಕಾ ಯಾಗ ಕೂಡ ಮಾಡಿಸಿದ್ದಾರೆ. ಈ ಮೂಲಕ ಪತಿಯ ಬಿಡುಗಡೆಗೆ ಪ್ರಾರ್ಥಿಸಿದ್ದಾರೆ.
Updated on: Jul 26, 2024 | 8:43 AM

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಈ ಕಾರಣಕ್ಕೆ ಅವರ ಕುಟುಂಬದವರು ಹಾಗೂ ಅಭಿಮಾನಿ ವರ್ಗ ಚಿಂತೆಗೆ ಒಳಗಾಗಿದೆ. ಈ ಕಾರಣಕ್ಕೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ.

ವಿಜಯಲಕ್ಷ್ಮೀ ಅವರು ಕೊಲ್ಲೂರಿಗೆ ತೆರಳಿದ್ದಾರೆ. ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಮಳೆಯ ಮಧ್ಯೆಯೇ ಅವರು ದೇವರ ಮೊರೆ ಹೋಗಿದ್ದಾರೆ. ಇಷ್ಟೇ ಅಲ್ಲ, ಚಂಡಿಕಾ ಯಾಗ ಕೂಡ ಮಾಡಿಸಿದ್ದಾರೆ. ಈ ಮೂಲಕ ಪತಿಯ ಬಿಡುಗಡೆಗೆ ಪ್ರಾರ್ಥಿಸಿದ್ದಾರೆ.

ದರ್ಶನ್ ಅರೆಸ್ಟ್ ಆದ ಬಳಿಕ ವಿಜಯಲಕ್ಷ್ಮೀ ಅವರು ಇನ್ಸ್ಟಾಗ್ರಾಮ್ನ ಡಿ ಆ್ಯಕ್ಟೀವ್ ಮಾಡಿದ್ದರು. ಆ ಬಳಿಕ ಅವರು ಮತ್ತೆ ಸೋಶಿಯಲ್ ಮೀಡಿಯಾಗೆ ಮರಳಿದರು. ಪತಿ ಬಳಿ ತೆರಳಿ ಅವರು ಮಾತುಕತೆ ನಡೆಸಿದ್ದಾರೆ.

ಈಗ ವಾರಕ್ಕೆ ಒಮ್ಮೆಯಾದರೂ ದರ್ಶನ್ ಅವರನ್ನು ವಿಜಯಲಕ್ಷ್ಮೀ ಭೇಟಿ ಮಾಡುತ್ತಾರೆ. ಜೈಲಿಗೆ ತೆರಳಿ ಪತಿಗೆ ಧೈರ್ಯ ತುಂಬಿ ಬರುತ್ತಿದ್ದಾರೆ. ಇದರಿಂದ ದರ್ಶನ್ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ.

ದರ್ಶನ್ ಪರವಾಗಿ ಅಭಿಮಾನಿಗಳು ನಿಂತಿದ್ದಾರೆ. ಅವರ ಪತ್ನಿ ಕೂಡ ದರ್ಶನ್ ಪರವಾಗಿ ನಿಂತು ಹೋರಾಡುತ್ತಿದ್ದಾರೆ. ಇತ್ತೀಚೆಗೆ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.