AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಸರು ಗದ್ದೆಯಾಟದ ಗಮ್ಮತ್ತು; ಹಾಸನದಲ್ಲಿ ಪತ್ರಕರ್ತರ ಜೊತೆಗೆ ಹಳ್ಳಿ ಜನರ ಕೆಸರು ಗದ್ದೆಯಾಟ, ಫೋಟೋಸ್ ಇಲ್ಲಿದೆ

ಅಲ್ಲಿ ಎಲ್ಲರೂ ಮಕ್ಕಳಾಗಿ ಹೋಗಿದ್ರು, ಸುರಿಯೋ ಮಳೆ. ನಾಟಿಗಾಗಿ ಸಿದ್ದಗೊಂಡ ಭತ್ತದ ಗದ್ದೆಯಲ್ಲಿ ಕೆಸರಿನ ನಡುವೆ ಮಿಂದೇಳುತ್ತಾ ಹಳ್ಳಿ ಆಟದ ಮಜಾ ಅನುಭವಿಸುತ್ತಾ ಇಡೀ ದಿನ ಎಂಜಾಯ್ ಮಾಡಿದ್ರು. ಮುಂಗಾರು ಮಳೆ ಆರಂಭವಾದ ಹಿನ್ನೆಲೆಯಲ್ಲಿ ಶುರುವಾಗಿರೊ ಪ್ರಕೃತಿ ವೈಭವದ ನಡುವೆ ಇದೇ ಮೊದಲ ಬಾರಿಗೆ ಹಾಸನ ಜಿಲ್ಲೆಯಲ್ಲಿ ಪತ್ರಕರ್ತರಿಗಾಗಿ ಆಯೋಜನೆಗೊಂಡಿದ್ದ ಕೆಸರುಗದ್ದೆ ಕ್ರೀಡಾ ಕೂಟದಲ್ಲಿ ಪತ್ರಕರ್ತರ ಜೊತೆಗೆ ಊರ ಜನರೂ ಕೂಡ ಹಳ್ಳಿ ಆಟದ ಮೂಲಕ ಎಂಜಾಯ್ ಮಾಡಿದ್ರು.

ಮಂಜುನಾಥ ಕೆಬಿ
| Edited By: |

Updated on:Jul 02, 2024 | 9:54 AM

Share
ಇದೇ ಮೊದಲಬಾರಿಗೆ ಹಾಸನ ಜಿಲ್ಲೆಯಲ್ಲಿ ಪತ್ರಕರ್ತರಿಗಾಗಿ ಆಯೋಜನೆಗೊಂಡಿದ್ದ ಕೆಸರುಗದ್ದೆ ಕ್ರೀಡಾ ಕೂಟದಲ್ಲಿ ನೂರಾರು ಪತ್ರಕರ್ತರ ಜೊತೆಗೆ ಹಳ್ಳಿಯ ಜನರೂ ಕೂಡ ಭಾಗಿಯಾಗಿ ಸಂಭ್ರಮಿಸಿದರು.

1 / 6
ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಲೂರು ತಾಲ್ಲೂಕಿನ ಬೈರಾಪುರ ಸಮೀಪ ಆಯೋಜನೆಗೊಂಡಿದ್ದ ಕೆಸರುಗದ್ದೆ ಕ್ರೀಡಾ ಕೂಟದಲ್ಲಿ ನೂರಾರು ಜನರು ಭಾಗಿಯಾಗಿ ಎಂಜಾಯ್ ಮಾಡಿದ್ರು, ಸಂಪೂರ್ಣ ಕೆಸರು ಮಯವಾಗಿದ್ದ ಭತ್ತದ ಗದ್ದೆಯಲ್ಲಿ ಗೆಲುವಿಗಾಗಿ ಸ್ಪರ್ದಿಗಳು ಭರ್ಜರಿ ಸೆಣಸಾಟ ನಡೆಸಿದ್ರು.

2 / 6
ಶರವೇಗದಲ್ಲಿ ಗುರಿಮುಟ್ಟೋ ಸಾಹಸದಲ್ಲಿ ಎದ್ನೋ ಬಿದ್ನೋ ಅಂತಾ ಗಿರಿಯತ್ತ ಸ್ಪರ್ಧಿಗಳು ಓಡುತ್ತಿದ್ದರೆ ನೆರೆದಿದ್ದವರು ಸಿಳ್ಳೆ, ಚಪ್ಪಾಳೆಗಳ ಮೂಲಕ ಆಟದ ರೋಚಕತೆಯನ್ನ ಅನುಭವಿಸಿದ್ರು. ಸದಾ ಒತ್ತಡದಲ್ಲಿ ಕೆಲಸ ಮಾಡೋ ಪತ್ರಕರ್ತರಿಗಾಗಿ ಇದೇ ಮೊದಲ ಬಾರಿಗೆ ಗ್ರಾಮೀಣ ಆಟಗಳ ಸ್ಪರ್ದೆಯನ್ನ ಆಯೋಜನೆ ಮಾಡಲಾಗಿತ್ತು. ಹಳ್ಳಿಯ ರೈತರ ಜೊತೆಯಲ್ಲಿ ಕೆಸರಿನಲ್ಲಿ ಮಿಂದೆದ್ದ ಪತ್ರಕರ್ತರು ಇಡೀ ದಿನ ಖುಷಿಯಲ್ಲಿ ಸಂಭ್ರಮಿಸಿದ್ರು.

3 / 6
ಹಾಸನ ಜಿಲ್ಲೆ ಹೇಳಿ ಕೇಳಿ ಮಲೆನಾಡು ಅರೆ ಮಲೆನಾಡು ಪ್ರದೇಶವನ್ನ ಒಳಗೊಂಡ ಜಿಲ್ಲೆ. ಪಶ್ಷಿಮ ಘಟ್ಟದ ತಪ್ಪಲಿನಲ್ಲಿರೊ ಜಿಲ್ಲೆಯ ಸಕಲೇಶಫುರ, ಆಲೂರು, ಹಾಗು ಬೇಲೂರಿನ ಕೆಲ ಭಾಗಳಲ್ಲಿ ಮುಂಗಾರು ಮಳೆ ಆರಂಭವಾಗುತ್ತಲೆ ಪ್ರಕೃತಿ ವೈಭವ ಕಳೆಗಟ್ಟುತ್ತೆ, ಕರ್ನಾಟಕದ ಸ್ವಿಡ್ಜರ್ ಲ್ಯಾಂಡ್ ಎಂದೇ ಕರೆಸಿಕೊಳ್ಳೋ ಮಲೆನಾಡು ಭಾಗದಲ್ಲಿ ಹಳ್ಳಿಯ ಜನರು ಕೃಷಿ ಚಟವಟಿಕೆ ಆರಂಭಿಸುತ್ತಾರೆ.

4 / 6
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಂತ ಜಿಲ್ಲೆಗೆ ಸೀಮಿತವಾಗಿದ್ದ ಕೆಸರುಗದ್ದೆ ಕ್ರೀಡಾಕೂಟ ಇದೀಗ ಹಾಸನದಲ್ಲೂ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಕ್ರೀಡಾಕೂಟದಲ್ಲಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಸೇರಿ ಹಲವು ಪತ್ರಕರ್ತರು ಭಾಗಿಯಾಗಿ ಸಂಭ್ರಮಿಸಿದ್ರು.

5 / 6
ಪತ್ರಕರ್ತರು ಹಾಗು ಸಾರ್ವಜನಿಕರಿಗಾಗಿ ನೂರು ಹಾಗು ಇನ್ನೂರು ಮೀಟರ್ ಓಟದ ಸ್ಪರ್ದೆ, ಹಗ್ಗ ಜಗ್ಗಾಟ, ಹಾಗು ಕೆಸರಿನಲ್ಲೇ ವಾಲಿಬಾಲ್ ಆಟದ ಸ್ಪರ್ದೆಯನ್ನ ಆಯೋಜನೆ ಮಾಡಲಾಗಿತ್ತು, ಬೆಳಿಗ್ಗೆಯಿಂದ ಸಂಜೆವರೆಗೂ ಗ್ರಾಮಸ್ಥರ ಜೊತೆಗೆ ಪತ್ರಕರ್ತರಿಗಾಗಿಯೋ ವಿವಿಧ ಸ್ಪರ್ದೆಗಳನ್ನ ಆಯೋಜನೆ ಮಾಡಲಾಗಿತ್ತು. ಸದಾ ಒತ್ತಡದ ಕೆಲಸದಲ್ಲಿ ಕ್ರೀಡೆ, ಹಾಗು ಮನೋರಂಜನೆ ಕಾರ್ಯಕ್ರಮಗಳಿಂದ ದೂರವೇ ಉಳಿಯೋ ಪತ್ರಕರ್ತರಿಗಾಗಿ ಆಯೋಜನೆಗೊಳ್ಳುವ ಕ್ರೀಡೆಗಳು ಅವರ ಒತ್ತಡ ನಿವಾರಣೆ ಮಾಡುತ್ತೆ ಎಂದು ಅಧಿಕಾರಿಗಳು ಶ್ಲಾಘಿಸಿದ್ರು.

6 / 6

Published On - 7:52 am, Tue, 2 July 24

ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್

ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ

ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ

ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ

ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು

‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ