ಸಂಗೀತಾ ಭಟ್ ಈ ಸ್ಥಿತಿಗೆ ಕಾರಣವೇನು? ಮಹಿಳೆಯಾಗಿ ಈ ತಪ್ಪು ಮಾಡಬೇಡಿ

Updated on: Oct 17, 2025 | 5:00 PM

ಸಂಗೀತಾ ಭಟ್ ಅವರು ಸಿನಿಮಾಗಳ ಮೂಲಕ ಗಮನ ಸೆಳೆದವರು. ಆದರೆ, ಈಗ ಅವರು ಬೆಡ್ ಮೇಲೆ ಮಲಗಿದ್ದಾರೆ. ಅವರಿಗೆ ಆಪರೇಷನ್ ಕೂಡ ಆಗಿದೆ. ಮಹಿಳೆಯರಾಗಿ ಈ ತಪ್ಪು ಮಾಡಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಆ ಬಗ್ಗೆ ಇಲ್ಲಿದೆ ವಿವರ.

1 / 5
ನಟಿ ಸಂಗೀತಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾರೆ. ಈ ವೇಳೆ ಅವರು ಇದರ ಹಿಂದಿರುವ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

2 / 5
ಸಂಗೀತಾ ಭಟ್ ಅವರಿಗೆ ಕಳೆದ ಕೆಲವು ತಿಂಗಳಿಂದ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗಿತ್ತು. ಪರೀಕ್ಷೆ ಮಾಡಿದಾಗ ಅವರ ಗರ್ಭಕೋಶದಲ್ಲಿ 1.75 ಸೆಂಟಿಮೀಟರ್​ನ ಗಡ್ಡೆ ಕಾಣಿಸಿದೆ. ಇದರಿಂದಾಗಿ ಅವರು ಅತೀವ ನೋವು ಅನುಭವಿಸುತ್ತಿದ್ದರು.

3 / 5
ಗಡ್ಡೆಯನ್ನು ತೆಗೆಯಲು ‘ಹಿಸ್ಟ್ರೋಸ್ಟೋಫಿಕ್ ಪಾಲಿಪೆಕ್ಟ್ರೊಮಿ’ ಹೆಸರಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕಾರಣದಿಂದ ಅವರು ಆಸ್ಪತ್ರೆ ಬೆಡ್ ಮೇಲೆ ಮಲಗಬೇಕಾಯಿತು. ಶೂಟಿಂಗ್​ಗಳನ್ನು ಮುಗಿಸಿ ಅವರು ಈ ಶಸ್ತ್ರಚಿಕಿತ್ಸೆ ಮಾಡಿಕೊಂಡರು.

4 / 5
ಈ ಸಮಸ್ಯೆ ಇದ್ದರೆ ಋತುಚಕ್ರ ಸರಿಯಾಗಿ ಆಗುವುದಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ಅಲ್ಲದೆ, ಕೂದಲು ಉದುರುವಿಕೆ ಸಮಸ್ಯೆ ಕೂಡ ಎದುರಾಗುತ್ತದೆಯಂತೆ. ಈಗ ಅವರು ಸಮಸ್ಯೆಯ ವಿರುದ್ಧ ಜಯಿಸಿದ್ದಾರೆ. ಅವರು ಬೇಗ ರಿಕವರಿ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

5 / 5
ಈ ಕಷ್ಟದ ಸಮಯದಲ್ಲಿ ಅವರ ಪತಿ ಸುದರ್ಶನ್ ರಂಗಪ್ರಸಾದ್ ಕೂಡ ಬೆಂಬಲಕ್ಕೆ ನಿಂತಿದ್ದಾರೆ. ಅವರು ಪತ್ನಿಗೆ ಸಂಪೂರ್ಣ ಸಪೋರ್ಟ್ ಕೊಟ್ಟಿದ್ದಾರೆ. ಅವರು ಆಸ್ಪತ್ರೆಯಲ್ಲಿದ್ದಾಗ ಅವರು ಕಾಳಜಿವಹಸಿದ್ದಾರೆ.