ಮದುವೆಯಾಗಿ ಇಬ್ಬರು ಮಕ್ಕಳಿರೋದನ್ನು ಮುಚ್ಚಿಟ್ಟು ಯುವಕನೊಂದಿಗೆ ವಿವಾಹವಾದ ಮಹಿಳೆ! ಆಮೇಲೇನಾಯ್ತು ಗೊತ್ತೇ?

Updated on: Feb 11, 2026 | 11:01 AM

ಹಾವೇರಿ, ಫೆಬ್ರವರಿ 11: ಮೊದಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಮಹಿಳೆಯೊಬ್ಬಳು ಮತ್ತೊಮ್ಮೆ ಮದುವೆಯಾಗಿ ಯುವಕನಿಗೆ ಮೋಸ ಮಾಡಿದ ಪ್ರಕರಣ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ, ಮೋಸಹೋದ ಯುವಕ ನ್ಯಾಯಕ್ಕಾಗಿ ಹಲಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಮಹಿಳೆ ಯುವಕನನ್ನು ಮದುವೆಯಾಗಿದ್ದಲ್ಲದೆ, ಆತನಿಂದ 2.5 ಲಕ್ಷ ರೂ. ಸಹ ಪಡೆದಿದ್ದಾಳೆ. ಕೊನೆಗೆ ಅಚ್ಚರಿಯ ರೀತಿಯಲ್ಲಿ ಮಹಿಳೆಯ ಕಳ್ಳಾಟ ಬಯಲಾಗಿದೆ.

1 / 5
ಮದುವೆ ಹೆಸರಿನಲ್ಲಿ ವಂಚನೆ ಕೃತ್ಯಗಳನ್ನು ಎಸಗುವ ಪ್ರಕರಣಗಳ ಬಗ್ಗೆ ಆಗಾಗ್ಗೆ ವರದಿಯಾಗುತ್ತಿರುತ್ತವೆ. ಆದರೆ, ಹಾವೇರಿಯಲ್ಲೊಂದು ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬಳು, ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಯುವಕನ ಕೈಹಿಡಿದು ಆತನಿಂದ 2.5 ಲಕ್ಷ ರೂ. ಪಡೆದು ಮೋಸ ಮಾಡಿದ್ದಾಳೆ.

2 / 5
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರವಿಚಂದ್ರ ಎಂಬ ಯುವಕ ಮೋಸಹೋದ ಅಮಾಯಕನಾಗಿದ್ದಾನೆ. ತುಮಕೂರಿನ ಪಾವಗಡ ಮೂಲದ ರೇಖಾ ಎಂಬ ಮಹಿಳೆ ಆತನನ್ನು ಮದುವೆಯಾದ್ದಲ್ಲದೆ, ಸುಮಾರು 2.5 ಲಕ್ಷ ರೂಪಾಯಿ ವಧು ದಕ್ಷಿಣೆ ಪಡೆದ್ದಾಳೆ.

3 / 5
ಕಳೆದ ವಾರವೇ ಹಿರೇಕೇರೂರು ದುರ್ಗಾ ದೇವಿ ದೇವಸ್ಥಾನದಲ್ಲಿ ಇವರ ಮದುವೆ ನೆರವೇರಿತ್ತು. ಆದರೆ ಮದುವೆಯಾಗಿ ಕೆಲವೇ ದಿನಗಳಲ್ಲಿ ರೇಖಾಳ ಕಳ್ಳಾಟ ಬಯಲಾಗಿದೆ. ರೇಖಾಳ ಮೊಬೈಲ್‌ಗೆ ಮಂಗಳವಾರ ಕರೆ ಮಾಡಿದ ಮಕ್ಕಳು ‘ನಾವು ರೇಖಾ ಮಕ್ಕಳು’ ಎಂದು ಹೇಳಿದಾಗ ರವಿಚಂದ್ರ ಕುಟುಂಬಕ್ಕೆ ಆಘಾತವಾಗಿದೆ.

4 / 5
ತನ್ನ ಕಳ್ಳಾಟ ಯುವಕನ ಮನೆಯವರಿಗೆ ಗೊತ್ತಾಯಿತು ಎಂಬುದು ತಿಳಿಯುತ್ತಿದ್ದಂತೆಯೇ ರೇಖಾ ತುಮ್ಮಿನಕಟ್ಟಿ ಗ್ರಾಮದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆಕೆ ಓಡಿ ಹೋಗಲು ಯತ್ನಿಸುತ್ತಿರುವ ವಿಷಯ ತಿಳಿದ ರವಿಚಂದ್ರ ಹಾಗೂ ಗ್ರಾಮಸ್ಥರು ರೇಖಾಳನ್ನು ಹಿಡಿದು ಹಲಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

5 / 5
ಸದ್ಯ ಮಹಿಳೆ ಪೊಲೀಸರ ವಶದಲ್ಲಿದ್ದಾಳೆ. ಆಕೆಯ ಕೃತ್ಯದ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸದ್ಯ ಈ ಮದುವೆ ಹಾವೇರಿಯಲ್ಲಿ ಸಂಚಲನ ಸೃಷ್​ಟಿಸಿದ್ದು, ಯುವಕನ ಬಗ್ಗೆ ಕನಿಕರ ವ್ಯಕ್ತವಾಗುತ್ತಿದೆ.
- ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಸದ್ಯ ಮಹಿಳೆ ಪೊಲೀಸರ ವಶದಲ್ಲಿದ್ದಾಳೆ. ಆಕೆಯ ಕೃತ್ಯದ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸದ್ಯ ಈ ಮದುವೆ ಹಾವೇರಿಯಲ್ಲಿ ಸಂಚಲನ ಸೃಷ್​ಟಿಸಿದ್ದು, ಯುವಕನ ಬಗ್ಗೆ ಕನಿಕರ ವ್ಯಕ್ತವಾಗುತ್ತಿದೆ. - ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ