AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸನ್​ರೈಸರ್ಸ್’ ಪರ ಕಣಕ್ಕಿಳಿದ ಪಾಕಿಸ್ತಾನ್ ಆಟಗಾರ..!

Abrar Ahmed: ಅಬ್ರಾರ್ ಅಹ್ಮದ್ ಪಾಕಿಸ್ತಾನ್ ಮೂಲದ ಕ್ರಿಕೆಟಿಗ. ಈ ಹಿಂದೆ ಭಾರತವನ್ನು ಅಣಕಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದರು. ಇತ್ತ ವಿರೋಧಿ ಮನಸ್ಥಿತಿ ಹೊಂದಿದ್ದರೂ ಪಾಕ್ ಮೂಲದ ಆಟಗಾರನನ್ನು ಸನ್​ರೈಸರ್ಸ್ ಹೈದರಾಬಾದ್ ಒಡೆತನದ ಸನ್​ರೈಸರ್ಸ್ ಲೀಡ್ಸ್ ಫ್ರಾಂಚೈಸಿ ಖರೀದಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಝಾಹಿರ್ ಯೂಸುಫ್
|

Updated on: Jul 22, 2026 | 11:54 AM

Share
ಇಂಗ್ಲೆಂಡ್​ನಲ್ಲಿ 100 ಎಸೆತಗಳ ಕ್ರಿಕೆಟ್ ಟೂರ್ನಿ ‘ದಿ ಹಂಡ್ರೆಡ್’ ಲೀಗ್ ಶುರುವಾಗಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನ್ ಆಟಗಾರ ಕಣಕ್ಕಿಳಿದಿದ್ದಾರೆ. ಅದು ಸಹ ಭಾರತೀಯ ಮೂಲದ ಫ್ರಾಂಚೈಸಿ ಸನ್​ರೈಸರ್ಸ್ ಲೀಡ್ಸ್ ತಂಡದ ಪರ ಎಂಬುದು ವಿಶೇಷ. (PC: SL)

1 / 5
ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಅವರು 2025 ರಲ್ಲಿ ದಿ ಹಂಡ್ರೆಡ್ ಲೀಗ್​ನಲ್ಲಿ ಸನ್​ರೈಸರ್ಸ್ ಲೀಡ್ಸ್ ಹೆಸರಿನ​ ತಂಡವನ್ನು ಖರೀದಿಸಿದ್ದರು. ಅಲ್ಲದೆ ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಕಾವ್ಯಾ ಮಾರನ್ ಹಾಗೂ ಕೋಚ್ ಡೇನಿಯಲ್ ವೆಟ್ಟೋರಿ ಭಾರಿ ಪೈಪೋಟಿ ನಡೆಸಿ ಪಾಕಿಸ್ತಾನ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 1,90,000 ಪೌಂಡ್ಸ್ (ಸುಮಾರು ₹2.45 ಕೋಟಿ) ನೀಡಿ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರು. (PC: PCB)

2 / 5
ಕಾವ್ಯ ಮಾರನ್ ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಪಾಕಿಸ್ತಾನ್ ಆಟಗಾರನನ್ನು ಸನ್​ರೈಸರ್ಸ್ ಲೀಡ್ಸ್ ತಂಡದಿಂದ ಕೈ ಬಿಡಬೇಕೆಂಬ ಒತ್ತಾಯಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಹೀಗಾಗಿ ಟೂರ್ನಿ ಆರಂಭಕ್ಕೂ ಮುನ್ನ ಅಬ್ರಾರ್ ಅಹ್ಮದ್ ಅವರನ್ನು SRH ಫ್ರಾಂಚೈಸಿ ಕೈ ಬಿಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. (PC: X.com)

3 / 5
ಅದರೆ ಎಂಐ ಲಂಡನ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಸನ್​ರೈಸರ್ಸ್ ಲೀಡ್ಸ್ ಪರ ಅಬ್ರಾರ್ ಅಹ್ಮದ್ ಕಣಕ್ಕಿಳಿದಿದ್ದಾರೆ. ಇದರೊಂದಿಗೆ ‘ಸನ್‌ರೈಸರ್ಸ್’ ಲೋಗೋ ಮತ್ತು ಜೆರ್ಸಿ ಧರಿಸಿ ಕಣಕ್ಕಿಳಿದ ಮೊದಲ ಪಾಕಿಸ್ತಾನಿ ಆಟಗಾರ ಎಂಬ ಹೆಗ್ಗಳಿಕೆಗೆ ಅಬ್ರಾರ್ ಪಾತ್ರರಾಗಿದ್ದಾರೆ.  (PC: PCB)

4 / 5
ಇನ್ನು ಈ ಪಂದ್ಯದಲ್ಲಿ 3 ಎಸೆತಗಳನ್ನು ಎದುರಿಸಿದ ಅಬ್ರಾರ್ ಅಹ್ಮದ್ ಒಂದು ಸಿಕ್ಸರ್​ನೊಂದಿಗೆ 7 ರನ್​ ಬಾರಿಸಿದ್ದರು. ಹಾಗೆಯೇ 10 ಎಸೆತಗಳಲ್ಲಿ ಬರೋಬ್ಬರಿ 30 ರನ್ ನೀಡಿದ್ದಾರೆ. ಇತ್ತ ಮೊದಲ ಮ್ಯಾಚ್​ನಲ್ಲೇ ದುಬಾರಿಯಾಗಿರುವ ಕಾರಣ ಪಾಕ್ ಸ್ಪಿನ್ನರ್​ನನ್ನು ಮುಂದಿನ ಪಂದ್ಯದಿಂದ ಕೈ ಬಿಡುವ ಸಾಧ್ಯತೆಯಿದೆ. (PC: The Hundred)

5 / 5
Follow Us
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ

ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ

‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ

ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ

ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು

ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!

ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ

ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್

ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!

ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!