Kannada News Photo gallery World Chess Championship 2024 Gukesh Takes Lead For First Time As He Wins Game 11
World Chess Championship 2024: 11ನೇ ಗೇಮ್ ಗೆದ್ದ ಗುಕೇಶ್; ಇತಿಹಾಸ ಸೃಷ್ಟಿಸಲು ಇನ್ನೊಂದು ಹೆಜ್ಜೆ ದೂರ
World Chess Championship 2024: ಕೇವಲ 18 ವರ್ಷ ವಯಸ್ಸಿನ ಗುಕೇಶ್ ಅವರು ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಆಗುವ ಅವಕಾಶವನ್ನು ಹೊಂದಿದ್ದು, ಉಳಿದಿರುವ 3 ಗೇಮ್ಗಳಲ್ಲಿ ಗುಕೇಶ್ 1 ಪಂದ್ಯವನ್ನು ಗೆದ್ದು ಉಳಿದ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ವಿಶ್ವ ಚೆಸ್ ಚಾಂಪಿಯನ್ ಕಿರೀಟ ಗುಕೇಶ್ ಮುಡಿಗೇರಲಿದೆ.
ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆಯುತ್ತಿರುವ 2024 ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ 11ನೇ ಗೇಮ್ನಲ್ಲಿ ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್, ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
1 / 5
ಸಿಂಗಾಪುರದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಶಿಪ್‌ನ 11 ನೇ ಪಂದ್ಯದಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ಗುಕೇಶ್, ಡಿಂಗ್ ಅವರನ್ನು 29 ನಡೆಗಳಲ್ಲಿ ಸೋಲಿಸಿ ಪ್ರಶಸ್ತಿ ರೇಸ್‌ನಲ್ಲಿ 1 ಪಾಯಿಂಟ್‌ನಿಂದ ಮುನ್ನಡೆ ಸಾಧಿಸಿದ್ದಾರೆ.
2 / 5
ಇದಕ್ಕೂ ಮೊದಲು ಗುಕೇಶ್ ಮತ್ತು ಲಿರೆನ್ ನಡುವೆ ಸತತ ಏಳು ಗೇಮ್ಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಆದರೆ ಭಾರತೀಯ ಗ್ರ್ಯಾಂಡ್ ಮಾಸ್ಟರ್, ಲಿರೆನ್ ಅವರ ತಪ್ಪಿನ ಲಾಭವನ್ನು ಪಡೆದು ಚೀನಾದ ಪ್ರತಿಸ್ಪರ್ಧಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
3 / 5
ಇಬ್ಬರು ಆಟಗಾರರ ನಡುವಿನ ಒಟ್ಟು 11 ಗೇಮ್ಗಳಲ್ಲಿ ಎಂಟು ಗೇಮ್ಗಳು ಡ್ರಾ ಆಗಿವೆ. ಉಳಿದಂತೆ ಎರಡು ಗೇಮ್ಗಳಲ್ಲಿ ಗುಕೇಶ್ ಗೆಲುವು ಸಾಧಿಸಿದ್ದರೆ, ಚೀನಾದ ಲಿರೆನ್ ಇದುವರೆಗೆ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಉಭಯ ಆಟಗಾರರು ಕ್ರಮವಾಗಿ 6 ಮತ್ತು 5 ಅಂಕ ಸಂಪಾಧಿಸಿದ್ದಾರೆ.
4 / 5
ಕೇವಲ 18 ವರ್ಷ ವಯಸ್ಸಿನ ಗುಕೇಶ್ ಅವರು ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಆಗುವ ಅವಕಾಶವನ್ನು ಹೊಂದಿದ್ದು, ಉಳಿದಿರುವ 3 ಗೇಮ್ಗಳಲ್ಲಿ ಗುಕೇಶ್ 1 ಪಂದ್ಯವನ್ನು ಗೆದ್ದು ಉಳಿದ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಅವರಿಗೆ ವಿಶ್ವ ಚೆಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಸಿಗಲಿದೆ.