Kannada News » Photo gallery » Xiaomi 11T Pro 5G Review you need to know about this HyperPhone before buying it
Xiaomi 11T Pro 5G: ಈ 120W ಹೈಪರ್ ಚಾರ್ಜರ್ ಫೋನ್ ಖರೀದಿಸಬಹುದೇ?: ಒಮ್ಮೆ ಇಲ್ಲಿ ಗಮನಿಸಿ
ಶಿಯೋಮಿ 11T ಪ್ರೊ ಅನೇಕ ವಿಶೇಷತೆಗಳಿಂದ ಕೂಡಿರುವ ಫೋನಾಗಿದೆ. ಇದರ ಪ್ರಮುಖ ಹೈಲೇಟ್ 108 ಮೆಗಾಫಿಕ್ಸೆಲ್ ಕ್ಯಾಮೆರಾ ಮತ್ತು 120W ಫಾಸ್ಟ್ ಚಾರ್ಜಿಂಜ್. ಹಾಗಾದ್ರೆ ಈ ಫೋನ್ ಖರೀದಿಗೆ ಸೂಕ್ತವೇ?. ನಿಮ್ಮ ಈ ಫೋನನ್ನು ತೆಗೆದುಕೊಳ್ಳುವ ಪ್ಲಾನ್ ನಲ್ಲಿದ್ದರೆ ಒಮ್ಮೆ ಈ ಸುದ್ದಿಯನ್ನು ಗಮನಿಸಿ.
ಶಿಯೋಮಿ ಕಂಪನಿ 2022 ರಲ್ಲಿ ಅತಿ ದೊಡ್ಡದಾಗಿ ಬಿಡುಗಡೆ ಮಾಡಿದ ಸ್ಮಾರ್ಟ್ಫೋನ್ ಶಿಯೋಮಿ 11T ಪ್ರೊ 5G. ಜಾಗತೀಕವಾಗಿ ಬಿಡುಗಡೆ ಆಗಿ ನಾಲ್ಕು ತಿಂಗಳ ಬಳಿಕ ಭಾರತಕ್ಕೆ ಈ ಫೋನ್ ಕಾಲಿಟ್ಟಿದೆ. ಅನೇಕ ವಿಶೇಷತೆಗಳಿಂದ ಕೂಡಿರುವ ಈ ಫೋನಿನ ಪ್ರಮುಖ ಹೈಲೇಟ್ 108 ಮೆಗಾಫಿಕ್ಸೆಲ್ ಕ್ಯಾಮೆರಾ ಮತ್ತು 120W ಫಾಸ್ಟ್ ಚಾರ್ಜಿಂಜ್. ಹಾಗಾದ್ರೆ ಈ ಫೋನ್ ಖರೀದಿಗೆ ಸೂಕ್ತವೇ?. ನಿಮ್ಮ ಈ ಫೋನನ್ನು ತೆಗೆದುಕೊಳ್ಳುವ ಪ್ಲಾನ್ ನಲ್ಲಿದ್ದರೆ ಒಮ್ಮೆ ಈ ಸುದ್ದಿಯನ್ನು ಗಮನಿಸಿ.
1 / 7
ಪವರ್ ಫುಲ್ ಪ್ರೊಸೆಸರ್: ಶಿಯೋಮಿ 11T ಪ್ರೊ 5G ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI 12.5 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಜೊತೆಗೆ 3GB ವರ್ಚುವಲ್ RAM ವಿಸ್ತರಣೆಗೆ ಸಹ ಬೆಂಬಲಿಸಲಿದೆ. ಇದೇ ಪ್ರೊಸೆಸರ್ ಈ ಹಿಂದೆ ಬಿಡುಗಡೆ ಆದ ಶಯೋಮಿ 11X ಪ್ರೊ ಮತ್ತು ಒನ್ಪ್ಲಸ್ 9RT ಫೋನ್ ನಲ್ಲೂ ಇದೆ.
2 / 7
120hZ ಡಿಸ್ ಪ್ಲೇ: ಶಿಯೋಮಿ 11T ಪ್ರೊ 5G ಸ್ಮಾರ್ಟ್ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್ಡಿ+ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ ಪ್ಲೇ 120Hz ಡೈನಾಮಿಕ್ ರಿಫ್ರೆಶ್ ರೇಟ್ ಹೊಂದಿದ್ದು, 10-ಬಿಟ್ ಟ್ರೂಲಿ ಕಲರ್ ಫ್ಲಾಟ್ ಅಮೋಲೆಡ್ ಡಿಸ್ ಪ್ಲೇಯನ್ನು ಒಳಗೊಂಡಿದೆ. ಈ ಡಿಸ್ ಪ್ಲೇ ಡಾಲ್ಬಿ ವಿಷನ್ ಬೆಂಬಲಿಸಲಿದ್ದು, 480Hz ವರೆಗೆ ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಹೊಂದಿದೆ.
3 / 7
108MP ಕ್ಯಾಮೆರಾ: ಶಿಯೋಮಿ 11T ಪ್ರೊ 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ HM2 ಸೆನ್ಸಾರ್ f/1.75 ವೈಡ್-ಆಂಗಲ್ ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್ ಎಫ್/2.2 ಲೆನ್ಸ್ 120 ಡಿಗ್ರಿಗಳ ಫೀಲ್ಡ್-ಆಫ್-ವ್ಯೂ (FoV) ಹೊಂದಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್ ಟೆಲಿಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ.
4 / 7
ಇದರಲ್ಲಿರುವ ಕ್ಯಾಮೆರಾ ಫೀಚರ್ಸ್ನಲ್ಲಿ ಟೈಮ್-ಲ್ಯಾಪ್ಸ್, ಸಿನಿಮಾಟಿಕ್ ಫಿಲ್ಟರ್ಗಳು ಮತ್ತು ಆಡಿಯೋ ಜೂಮ್ನಂತಹ 50 ಕ್ಕೂ ಹೆಚ್ಚು ಡೈರೆಕ್ಟರ್ ಮೋಡ್ಗಳೊಂದಿಗೆ ಪ್ರೀ ಲೋಡ್ ಆಗಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಕೂಡ ಅಳವಡಿಸಲಾಗಿದೆ.
5 / 7
17 ನಿಮಿಷಗಳಲ್ಲಿ ಚಾರ್ಜ್ ಫುಲ್: ಶಿಯೋಮಿ 11T ಪ್ರೊ 5G ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ಹೈಪರ್ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್ನೊಂದಿಗೆ ಬರುತ್ತದೆ. ಇದು 0-100 ಶೇ. ಚಾರ್ಜ್ ಆಗಲು ಕೇವಲ 17 ನಿಮಿಷಗಳು ಸಾಕು ಎಂದು ಕಂಪನಿ ಹೇಳಿದೆ.
6 / 7
ಬೆಲೆ ಹೇಗಿದೆ?: ಈ ಸ್ಮಾರ್ಟ್ಫೋನ್ ಭಾರತದಲ್ಲಿ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 39,999 ರೂ. ಬೆಲೆ ಹೊಂದಿದೆ. 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 41,999 ರೂ. ಬೆಲೆ ಹೊಂದಿದ್ದು, 12GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 43,999 ರೂ. ಬೆಲೆ ನಿಗದಿ ಪಡಿಸಲಾಗಿದೆ. ಇದರ ಜೊತೆಗೆ ಬ್ಯಾಂಕಿಂಗ್ ಆಫರ್ ಕೂಡ ನೀಡಲಾಗಿದ್ದು, ಅಮೆಜಾನ್, ಮಿ.ಕಾಮ್, ಮಿ ಹೋಮ್ ಸ್ಟೋರ್ಗಳು, ಮಿ ಸ್ಟುಡಿಯೋಸ್ ಮತ್ತು ಇತರ ಆಫ್ಲೈನ್ ರಿಟೇಲ್ ವ್ಯಾಪಾರಿಗಳ ಮೂಲಕ ಖರೀದಿಸಬಹುದು.