- Kannada News Photo gallery Yash CM Siddaramaiah Kichcha Sudeep and other Take A last seen of Dwarakish
ದ್ವಾರಕೀಶ್ ಅಂತಿಮ ದರ್ಶನ ಪಡೆದ ಯಶ್, ರವಿಚಂದ್ರನ್, ಸುದೀಪ್; ಇಲ್ಲಿದೆ ಗ್ಯಾಲರಿ
ದ್ವಾರಕೀಶ್ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರು ಇಲ್ಲ ಎಂಬ ನೋವು ಬಹುವಾಗಿ ಕಾಡುತ್ತಿದೆ. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಅವರು ಚಿತ್ರರಂಗದಲ್ಲಿ ಮಿಂಚಿದರು. ದ್ವಾರಕೀಶ್ ಅವರನ್ನು ಕೊನೆಯ ಬಾರಿಗೆ ಸೆಲೆಬ್ರಿಟಿಗಳು ದರ್ಶನ ಪಡೆದಿದ್ದಾರೆ. ಆ ಚಿತ್ರಗಳು ಇಲ್ಲಿವೆ.
Updated on: Apr 17, 2024 | 11:47 AM

ಕಿಚ್ಚ ಸುದೀಪ್ ಅವರು ಚೆನ್ನೈನಲ್ಲಿ ‘ಮ್ಯಾಕ್ಸ್’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದರು. ಅವರು ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದರು. ‘ವಿಷ್ಣುವರ್ಧನ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು.

ರವಿಚಂದ್ರನ್ ಅವರು ದ್ವಾರಕೀಶ್ ಅವರ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಹೂವಿನ ಮಾಲೆ ಹಾಕಿ ಕೈ ಮುಗಿದಿದ್ದಾರೆ. ದ್ವಾರಕೀಶ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ.

ರಾಘವೇಂದ್ರ ರಾಜ್ಕುಮಾರ್ ಅವರು ಪತ್ನಿಯ ಜೊತೆ ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ್ದಾರೆ. ದ್ವಾರಕೀಶ್ ಅವರನ್ನು ಈ ಸ್ಥಿತಿಯಲ್ಲಿ ನೋಡಿ ಅವರು ಬೇಸರ ಮಾಡಿಕೊಂಡಿದ್ದಾರೆ. ಅವರು ಭಾವುಕರಾಗಿ ಮಾತನಾಡಿದ್ದಾರೆ.

ಹಾಸ್ಯ ನಟ ಉಮೇಶ್ ಜೊತೆ ದ್ವಾರಕೀಶ್ ಅವರಿಗೆ ಸಾಕಷ್ಟು ಒಡನಾಟ ಇತ್ತು. ಆಪ್ತ ಗೆಳೆಯನ ಕಳೆದುಕೊಂಡ ಉಮೇಶ್ ಬೇಸರಕ್ಕೆ ಒಳಗಾದರು. ಅವರು ಕುಟುಂಬದವರನ್ನು ಸಾಂತ್ವನ ಮಾಡಿದ್ದಾರೆ.

ದ್ವಾರಕೀಶ್ ಅವರು ಸಾಕಿದ ಪ್ರೀತಿಯ ಶ್ವಾನದ ಮೂಕವೇದನೆ ಮುಗಿಲುಮುಟ್ಟಿದೆ. ಬೇಸರದಿಂದ ಶ್ವಾನ ಬೊಗಳೋಕೆ ಶುರು ಮಾಡಿತ್ತು.

ರಾಕಿಂಗ್ ಸ್ಟಾರ್ ಯಶ್ ಅವರು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ ಯಶ್. ಅವರು ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಬ್ಯುಸಿಯಲ್ಲಿ ಇದ್ದಾರೆ. ಇದರ ಮಧ್ಯೆ ಅವರು ಸಮಯ ಮಾಡಿಕೊಂಡು ಬಂದು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದರು.



















