Skin Care: ಚರ್ಮದ ಆರೋಗ್ಯ ಮತ್ತು ಹೊಳಪಿಗೆ ಈ 5 ಯೋಗಾಸನಗಳನ್ನು ಅಭ್ಯಾಸ ಮಾಡಿ

| Updated By: Skanda

Updated on: Aug 25, 2021 | 7:15 AM

Yoga: ಯೋಗಾಸನವು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ಎಲ್ಲರೂ ತಿಳಿದಿರುತ್ತೇವೆ. ಆದರೆ, ಯೋಗಾಭ್ಯಾಸದಿಂದ ಚರ್ಮದ ಆರೋಗ್ಯ ಮತ್ತು ಹೊಳಪನ್ನೂ ಕಾಪಾಡಿಕೊಳ್ಳಬಹುದು. ಅದಕ್ಕಾಗಿ ಈ ಸಲಹೆಗಳನ್ನು ಗಮನಿಸಿ.

1 / 5
ಸರ್ವಾಂಗಾಸನ: ಈ ಆಸನವು ರಕ್ತ ಸಂಚಲನ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಸರ್ವಾಂಗಾಸನವನ್ನು 3 ರಿಂದ 5 ಬಾರಿ ಒಂದು ದಿನದಲ್ಲಿ ಮಾಡುವುದರಿಂದ ಮೊಡವೆ, ಚರ್ಮದ ಮೇಲಿನ ಕಲೆ, ಸುಕ್ಕು ಕಡಿಮೆ ಮಾಡಲು ಸಹಾಯವಾಗುತ್ತದೆ.

2 / 5
ಪದ್ಮಾಸನ: ಈ ಆಸನವು ಮನಸಿನ ಒತ್ತಡವನ್ನು ನಿವಾರಿಸಿ ಶಾಂತಿಯನ್ನು ನೀಡುತ್ತದೆ. ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿ ಇಡುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ,, ಚರ್ಮದ ಕಾಂತಿ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.

3 / 5
ಭಾರದ್ವಾಜಾಸನ: ಆರೋಗ್ಯಕರ ಚರ್ಮಕ್ಕೆ ಉತ್ತಮ ಜೀರ್ಣಕ್ರಿಯೆ ಅಗತ್ಯವೂ ಇದೆ. ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕಲು ಈ ಆಸನ ಸಹಾಯ ಮಾಡುತ್ತದೆ. ಅದರಿಂದ ಚರ್ಮದ ಆರೋಗ್ಯ ಹೆಚ್ಚುತ್ತದೆ. ದೇಹದಿಂದ ಬೇಡವಾದ ಅಂಶವನ್ನು ಹೊರಹಾಕುವುದು ಚರ್ಮದ ಆರೋಗ್ಯಕ್ಕೆ ಅಗತ್ಯ.

4 / 5
ತ್ರಿಕೋನಾಸನ: ಈ ಆಸನದಿಂದ ಶ್ವಾಸಕೋಸ. ಹೃದಯ ಮತ್ತು ಎದೆಯ ಭಾಗ ಹಿಗ್ಗುತ್ತದೆ. ಇದು ಚರ್ಮವೂ ಸೇರಿ ದೇಹದ ವಿವಿಧ ಭಾಗಕ್ಕೆ ಹೆಚ್ಚು ಆಮ್ಲಜನಕವನ್ನು ಪೂರೈಸುತ್ತದೆ. ಅದರಿಂದಾಗಿ ಚರ್ಮವು ಹೊಳಪು ಉಳಿಸಿಕೊಳ್ಳುತ್ತದೆ.

5 / 5
ಹಲಾಸನ: ಈ ಆಸನದಿಂದಾಗಿ ದೇಹದಲ್ಲಿ ರಕ್ತದ ಸಂಚಲನ ಉತ್ತಮವಾಗುತ್ತದೆ. ನಿದ್ರೆ ಮತ್ತು ಜೀವನಶೈಲಿ ಕೂಡ ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಿ, ಚರ್ಮದ ಆರೋಗ್ಯ ಸುಧಾರಿಸುತ್ತದೆ.