ಮನೆಯಲ್ಲಿ ಯಾವ ಶಂಖವನ್ನಿಟ್ಟು ಪೂಜೆ ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

| Updated By: preethi shettigar

Updated on: Aug 16, 2021 | 7:18 AM

ಹಿಂದೂ ಧರ್ಮದಲ್ಲಿ, ಶಂಖವನ್ನು ಭಗವಾನ್ ವಿಷ್ಣುವಿನ ಲಾಂಛನ ಎಂದು ಕರೆಯಲಾಗುತ್ತದೆ. ಶಂಖದಿಂದ ಬರುವ ನಾದವು ಯಾವುದೇ ನಕಾರಾತ್ಮಕ ಶಕ್ತಿಯನ್ನು ನಿರ್ನಾಮ ಮಾಡುವ ಸಮರ್ಥ್ಯ ಹೊಂದಿದೆ ಎಂದು ನಂಬಲಾಗಿದೆ.

1 / 7
ಶಂಖವು ಸಮುದ್ರದ ಆಳದಲ್ಲಿ ಸಿಗುವ ಒಂದು ಜೀವಿ. ಸಾಮಾನ್ಯವಾಗಿ ಇದನ್ನು ಮನೆಯಲ್ಲಿ ಪೂಜೆಗಾಗಿ ಬಳಸುತ್ತಾರೆ. ಶಂಖ ವೇದ-ಗ್ರಂಥಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ವಿಶೇಷವಾಗಿ ಹಿಂದೂ ಧರ್ಮದಲ್ಲಿ, ಶಂಖವನ್ನು ಭಗವಾನ್ ವಿಷ್ಣುವಿನ ಲಾಂಛನ ಎಂದು ಕರೆಯಲಾಗುತ್ತದೆ.

2 / 7
ಶಂಖದಿಂದ ಬರುವ ನಾದವು ಯಾವುದೇ ನಕಾರಾತ್ಮಕ ಶಕ್ತಿಯನ್ನು ನಿರ್ನಾಮ ಮಾಡುವ ಸಮರ್ಥ್ಯ ಹೊಂದಿದೆ ಎಂದು ನಂಬಲಾಗಿದೆ. ಹೀಗಾಗಿಯೇ ದೇವಸ್ಥಾನಗಳಲ್ಲಿ ಮತ್ತು ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಶಂಖವನ್ನು ಊದುತ್ತಾರೆ.

3 / 7
ಶಂಖವನ್ನು ಮನೆಗೆ ತಂದ ಮೇಲೆ ಸರಿಯಾದ ರೀತಿಯಲ್ಲಿ ಪೂಜೆ ಮಾಡಬೇಕು. ದಿನಕ್ಕೆ ಎರಡು ಬಾರಿ ಶಂಖಕ್ಕೆ ಪೂಜೆ ಮಾಡಬೇಕು (ಬೆಳಿಗ್ಗೆ ಮತ್ತು ಸಂಜೆ) ಮತ್ತು ಪೂಜಾ ಸಂದರ್ಭದಲ್ಲಿ ಇದನ್ನು ಊದಬೇಕು. ಶಂಖವನ್ನು ಮನೆಗೆ ತರುವಾಗ ಒಂದು ತರುವ ಬದಲು ಎರಡು ಶಂಖ ತಂದು ಪ್ರತ್ಯೇಕವಾಗಿ ಇಡಬೇಕು.

4 / 7
ಶಿವನಿಗೆ ಅಥವಾ ಸೂರ್ಯನಿಗೆ ನೀರನ್ನು ಅರ್ಪಿಸಲು ಶಂಖವನ್ನು ಎಂದಿಗೂ ಬಳಸಬಾರದು. ಊದಲು ಬಳಸುವ ಶಂಖವನ್ನು ಎಂದಿಗೂ ನೀರು ಅಥವಾ ಧಾರ್ಮಿಕ ಪಠಣೆಗೆ ಬಳಸಬೇಡಿ. ಶಂಖವನ್ನು ಹಳದಿ ಬಟ್ಟೆಯ ಮೇಲೆ ಇಡುವುದು ಸೂಕ್ತ.

5 / 7
ಪೂಜಿಸಲು ಬಳಸುವ ಶಂಖವನ್ನು ಅಥವಾ ಪೂಜಾ ಸಂದರ್ಭದಲ್ಲಿ ಊದುವ ಶಂಖವನ್ನು ಎತ್ತರದ ಸ್ಥಳದಲ್ಲಿ ಇಡಿ. ಧಾರ್ಮಿಕ ಹಾಗೂ ಪುರಾಣ ವಿಷಯಗಳನ್ನು ಹೊರತುಪಡಿಸಿ, ಅನೇಕ ವೈಜ್ಞಾನಿಕ ವಿಷಯಗಳಿವೆ. ಕಿವಿಯ ಬಳಿ ಶಂಖವನ್ನು ಹಿಡಿದು ಊದಿದರೆ ಸಮುದ್ರದ ಶಬ್ದ ಹತ್ತಿರದಲ್ಲಿ ಕೇಳಿದಂತಾಗುತ್ತದೆ.

6 / 7
ಶಂಖದಲ್ಲಿ ಅನೇಕ ವಿಧಗಳಿವೆ ಕೌರಿ ಶಂಖ, ಮೋತಿ, ಹೀರಾ ಶಂಖ, ದಕ್ಷಿಣವರ್ತಿ ಶಂಖ, ವಾಮವರ್ತಿ ಶಂಖ, ಗಣೇಶ ಶಂಖ, ಗೌಮುಖಿ ಶಂಖ, ಮುತ್ತಿನ ಶಂಖ. ದಕ್ಷಿಣವರ್ತಿ ಶಂಖವು ಸಂಪತ್ತಿಗೆ ಸಂಬಂಧಿಸಿದ ಶಂಖ. ಇದನ್ನು ಮನೆಯಲ್ಲಿಟ್ಟು ಪೂಜಿಸಿದರೆ ಸಂಪತ್ತು ಹೆಚ್ಚಾಗುತ್ತದೆ.

7 / 7
ಶಂಖವನ್ನು ಎಂದಿಗೂ ಶಿವಲಿಂಗದ ಮೇಲೆ ಇಡಬಾರದು ಅಥವಾ ಯಾವುದೇ ಧಾರ್ಮಿಕ ಆಚರಣೆಯ ಸಮಯದಲ್ಲಿ ಶಿವನ ಬಳಿ ಶಂಖ ಇಡಬಾರದು ಎಂಬ ನಂಬಿಕೆ ಇದೆ. ಇದಲ್ಲದೆ ಶಂಖವು ದುಷ್ಟ ಶಕ್ತಿಗಳನ್ನು ದೂರ ಮಾಡುತ್ತದೆ ಮತ್ತು ಪರಿಸರದ ಸಮಸ್ಯೆಯನ್ನು ದೂರ ಮಾಡುತ್ತದೆ ಎಂದು ಸಹ ನಂಬಲಾಗಿದೆ.