40 ಪರ್ಸೆಂಟ್ ಕಮಿಷನ್ ಆರೋಪ, ಗುತ್ತಿಗೆದಾರ ಕೆಂಪಣ್ಣ ಆರೋಪ ನಿರಾಧಾರ: ಜಯರಾಂ ರಾಯಪುರ

ಬಿಬಿಎಂಪಿ ಹಣಕಾಸು ವಿಭಾಗದ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ನಿರಾಧಾರ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಹೇಳಿದರು.

40 ಪರ್ಸೆಂಟ್ ಕಮಿಷನ್ ಆರೋಪ, ಗುತ್ತಿಗೆದಾರ ಕೆಂಪಣ್ಣ ಆರೋಪ ನಿರಾಧಾರ: ಜಯರಾಂ ರಾಯಪುರ
ಕೆಂಪಣ್ಣ, ಜಯರಾಂ ರಾಯಪುರ
Follow us
|

Updated on: Mar 15, 2023 | 8:30 PM

ಬೆಂಗಳೂರು: ಪಾರದರ್ಶವಾಗಿ ಗುತ್ತಿಗೆದಾರರ (contractor) ಕಾಮಗಾರಿ ಬಿಲ್‌ ಪಾವತಿಸುತ್ತೇವೆ. ಯಾವುದೇ ಲಂಚ ಕೇಳಲ್ಲ. ಜೇಷ್ಠತೆ ಆಧಾರದಲ್ಲಿ ಗುತ್ತಿಗೆದಾರರ ಕಾಮಗಾರಿ ಬಿಲ್‌ ಪಾವತಿ ಮಾಡಲಾಗುವುದು. ಜೇಷ್ಠತೆ ಕಾಪಾಡಿಲ್ಲವೆಂದು ಸಾಬೀತುಪಡಿಸಿದ್ರೆ ರಾಜೀನಾಮೆ ನೀಡುತ್ತೇನೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ (Jayaram Raipur) ಹೇಳಿದರು. ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಕೆಂಪಣ್ಣ ನನ್ನ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ. ಅವರ ಆರೋಪ ನಿರಾಧಾರವಾಗಿದೆ. ಅದಕ್ಕೆ ಸಂಬಂಧಸಿದಂತೆ ಲಂಚ ಕೇಳಿದ್ದ ಬಗ್ಗೆ ದಾಖಲೆ ಕೊಡಲಿ. ಇಲ್ಲ ನನ್ನಿಂದ ತಪ್ಪಾಯಿತು ಅಂತಾ ಬಹಿರಂಗವಾಗಿ ಕ್ಷಮೆ ಕೇಳಲಿ. ಇಲ್ಲದಿದ್ದರೆ ಕೆಂಪಣ್ಣ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಪಾಲಿಕೆ ಗುತ್ತಿಗೆದಾರರ ಸಮಸ್ಯೆಗೆ ಮನಗೊಂಡು ಬ್ಯಾಂಕ್ ಜೊತೆ ಒಡಂಬಡಿಕೆ ಕೂಡ ಮಾಡಿ ಕೊಂಡಿದ್ದೇವೆ. ಅತ್ಯಂತ ಪಾರದರ್ಶಕವಾಗಿ ಹಣಕಾಸು ಇಲಾಖೆ ಎಲ್ಲಾ ಕೆಲಸ ನಡೆಯುತ್ತೆ. ಪಾಲಿಕೆಯ ಹಣಕಾಸು ಇಲಾಖೆ ಪಾರದರ್ಶಕ ವ್ಯವಹಾರದ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದರು. ಹಣ ಬಿಡುಗಡೆ ಮಾಡಲು ಲಂಚ ಕೇಳಿದ್ದಾರೆ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷರು ಆರೋಪ ಮಾಡಿದ್ದರು. ಇದು ಸುಳ್ಳು, ಯಾವ ರೀತಿಯೂ ಜೇಷ್ಠತೆ ಮೀರಿ ವ್ಯವಹಾರ ಆಗಿಲ್ಲ. ನಿರಾಧರವಾದ ಆರೋಪವನ್ನು ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಮತ್ತೆ ಜೀವ: ಹೋರಾಟಕ್ಕೆ ಸಜ್ಜಾದ ಗುತ್ತಿಗೆದಾರರ ಸಂಘ

ಸರಿಸುಮಾರು ಶೇಕಡಾ 99ರಷ್ಟು ಜೇಷ್ಠತೆ ಆಧಾರದ ಮೇಲೆ ಪಾವತಿ ಮಾಡಲಾಗುತ್ತದೆ. ಗುತ್ತಿಗೆದಾರರ ಮನೆಯಲ್ಲಿ ಏನಾದರೂ ಸಮಸ್ಯೆ ಆದರೆ, ಉದಾಹರಣೆಗೆ ಆರೋಗ್ಯ ಸಮಸ್ಯೆ, ಮದುವೆ ಇತರೆ ಸಮಸ್ಯೆ ಇದ್ದರೆ ಮಾನವೀಯತೆ ಆಧಾರದ ಮೇಲೆ ಕೆಲವೊಮ್ಮೆ ನಾವು ಹಣ ಬಿಡುಗಡೆ ಮಾಡಿದ್ದೇವೆ ಅಷ್ಟೇ. ಅದು ಬಿಟ್ಟು ಪ್ರತಿಯೊಂದು ಆರೋಪ ಸತ್ಯಕ್ಕೆ ದೂರವಾದ ಆರೋಪ ಎಂದು ಹೇಳಿದರು.

ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ 

ಮೊದಲಿಗೆ ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ,ಬಳಿಕ MLAಗಳಿಗೆ 10 ಪರ್ಸೆಂಟ್​ ಕಮಿಷನ್​ ಕೊಡಬೇಕು, ಮಂತ್ರಿ​​ಗಳಿಗೆ ಶೇಕಡಾ 5ರಷ್ಟು ಪರ್ಸೆಂಟೇಜ್​ ಕೊಡಬೇಕು ಎಂಬ ಸ್ಫೋಟಕ ಬಾಂಬ್ ಸಿಡಿಸಿದ್ದರು. ಬಿಜೆಪಿ ಸರ್ಕಾರದಲ್ಲಿ 40% -50% ಕಮಿಷನ್​ ವಸೂಲಿ ಆಗುತ್ತಿದ್ದು, 2019ರ ನಂತರ ಸರ್ಕಾರದಲ್ಲಿ ಪರ್ಸೆಂಟೇಜ್​ ಹೆಚ್ಚಾಗಿದೆ. ಕಾಂಟ್ರಾಕ್ಟರ್​​​ಗಳಿಂದ ಹೆಜ್ಜೆ-ಹೆಜ್ಜೆಗೂ ಕಮಿಷನ್​ ವಸೂಲಿ ಆಗುತ್ತಿದೆ. ನಾನು ಈಗಾಗಲೇ ಪ್ರಧಾನಿ ಮೋದಿಯವರಿಗೂ ದೂರು ನೀಡಿದ್ದೇನೆ.

ಇದನ್ನೂ ಓದಿ: ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧನ

ಕರ್ನಾಟಕದಲ್ಲಿ 1 ಲಕ್ಷ ಮಂದಿ ಕಾಂಟ್ರಾಕ್ಟರ್​​ಗಳು ಇದ್ದಾರೆ. KRIDL ಗುತ್ತಿಗೆಯಲ್ಲಿ ಕೆಲಸ ಮಾಡದೇ ಹಣ ಪಡೆಯುತ್ತಿದ್ದಾರೆ, ಏಪ್ರಿಲ್​​​ನಲ್ಲಿ 50 ಸಾವಿರ ಕಾಂಟ್ರಾಕ್ಟರ್​ಗಳು ಹೋರಾಟ ಮಾಡಿದ್ದೇವೆ. ರಸ್ತೆಗಳೂ ಕಳಪೆ ಕಾಮಗಾರಿಯಿಂದ ನಿರ್ಮಾಣ ಆಗುತ್ತಿವೆ, 20 ರಿಂದ 25 ಸಾವಿರ ಕೋಟಿ ರಾಜಕಾರಣಿಗಳ ಜೇಬು ಸೇರುತ್ತಿದೆ. ಭ್ರಷ್ಟಾಚಾರದ ಬಗ್ಗೆ ಯಾರೂ ಕ್ರಮ ಕೈಗೊಳುತ್ತಿಲ್ಲ ಎಂದು ಕೆಂಪಣ್ಣ ಕಿಡಿಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.