ಮಂಡ್ಯದಲ್ಲಿ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಿದ್ಧತೆ: ಸಮಾವೇಶದಲ್ಲಿ 1 ಲಕ್ಷ ಮಂದಿ ಭಾಗಿ ಸಾಧ್ಯತೆ, ಕಾಂಗ್ರೆಸ್​ ಗುರಿಯಾಗಿಸಿ ರಣತಂತ್ರ ಹೆಣೆದ ಬಿಜೆಪಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸವು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಇಂದು (ಶುಕ್ರವಾರ, ಡಿ 30) ಮಂಡ್ಯದಲ್ಲಿ ನಡೆಯುವ ಜನಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಘಟನಾ ಕಾರ್ಯದರ್ಶಿ ರಾಜೇಶ್, ಸಿ.ಟಿ.ರವಿ ಅವರೊಂದಿಗೆ ಅಮಿತ್ ಶಾ ಕೆಲ ಸಮಯ ಸಮಾಲೋಚನೆ ನಡೆಸಿದರು.

ಮಂಡ್ಯದಲ್ಲಿ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಿದ್ಧತೆ: ಸಮಾವೇಶದಲ್ಲಿ 1 ಲಕ್ಷ ಮಂದಿ ಭಾಗಿ ಸಾಧ್ಯತೆ, ಕಾಂಗ್ರೆಸ್​ ಗುರಿಯಾಗಿಸಿ ರಣತಂತ್ರ ಹೆಣೆದ ಬಿಜೆಪಿ
ಅಮಿತ್ ಶಾ
Follow us
TV9 Web
| Updated By: ನಯನಾ ರಾಜೀವ್

Updated on: Dec 30, 2022 | 10:44 AM

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸವು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಇಂದು (ಶುಕ್ರವಾರ, ಡಿ 30) ಮಂಡ್ಯದಲ್ಲಿ ನಡೆಯುವ ಜನಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಘಟನಾ ಕಾರ್ಯದರ್ಶಿ ರಾಜೇಶ್, ಸಿ.ಟಿ.ರವಿ ಅವರೊಂದಿಗೆ ಅಮಿತ್ ಶಾ ಕೆಲ ಸಮಯ ಸಮಾಲೋಚನೆ ನಡೆಸಿದರು.

ರಾಜ್ಯಕ್ಕೆ ಅಮಿತ್ ಶಾ ಪ್ರವೇಶದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕವು ಚುರುಕಾಗಿದ್ದು, ಚಾಣಕ್ಯನ ಸಾಲುಸಾಲು ಸಭೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಸಂಘಟನೆ ಹಾಗೂ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಮಿತ್ ಶಾ ನಿರಂತರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮಾಹಿತಿ ಸಂಗ್ರಹಿಸಲೆಂದು ಬಿಜೆಪಿ ಘಟಕದ ಜೊತೆಗೆ ಪ್ರತ್ಯೇಕವಾಗಿ ತಮ್ಮದೇ ಆದ ‘ಶೆಫೋಲೋಜಿ’ (ದತ್ತಾಂಶ ವಿಶ್ಲೇಷಣೆ) ತಂಡವನ್ನೂ ಅಮಿತ್ ಶಾ ಹೊಂದಿದ್ದಾರೆ. ಈ ತಂಡದ ಮೂಲಕ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಮಾಹಿತಿ ಕಲೆಹಾಕಲಾಗಿದೆ. ಈ ಮೂಲಕ ಬಿಜೆಪಿಯ ಶಕ್ತಿ ಕಡಿಮೆಯಿರುವ ಹಳೇ ಮೈಸೂರು ಭಾಗದ ಕಾರ್ಯತಂತ್ರ ರೂಪಿಸಲು ಶಾ ಯತ್ನಿಸುತ್ತಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ನಿರಂತರವಾಗಿ ಬಿಜೆಪಿ ಕಾರ್ಯಕ್ರಮಗಳು ರೂಪಿಸುತ್ತಿದೆ. ಬಿಜೆಪಿಯು ಇಲ್ಲಿ ಗೆಲುವು ಸಾಧಿಸುವ ಜೊತೆಗೆ ಕಾಂಗ್ರೆಸ್ ಮತಬ್ಯಾಂಕ್ ತನ್ನೆಡೆಗೆ ಸೆಳೆದುಕೊಳ್ಳಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್​ನ ಮೊದಲ ವಿರೋಧಿಯಾಗಿ ತನ್ನನ್ನು ಬಿಂಬಿಸಿಕೊಳ್ಳುವುದೇ ಬಿಜೆಪಿಯ ಮುಖ್ಯಕಾರ್ಯತಂತ್ರವಾಗಿ. ಹಾಲಿ ವಿಧಾನಸಭೆಯಲ್ಲಿ ಮಂಡ್ಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜೆಡಿಎಸ್ ಹೆಚ್ವಿನ ಸೀಟ್ ಗಳಿಸಿದೆ. ಈ ಸ್ಥಾನಗಳು ಈ ಬಾರಿ ಕಾಂಗ್ರೆಸ್ ಪರವಾಗಿ ವಾಲಬಾರದು ಎನ್ನುವುದು ಬಿಜೆಪಿಯ ಕಾಳಜಿಯಾಗಿದೆ. ‘ಜಿಲ್ಲೆಯಲ್ಲಿ ಹೇಗೂ ಕಾಂಗ್ರೆಸ್ ಗೆಲ್ಲುವುದಿಲ್ಲ. ಜೆಡಿಎಸ್ ವಿರೋಧಿ ಮತಗಳೆಲ್ಲವೂ ಬಿಜೆಪಿ ಬಿದ್ದರೆ, ಸಾಂಪ್ರದಾಯಿಕ ಬಿಜೆಪಿ ಮತಗಳೊಂದಿಗೆ ಅವನ್ನೂ ಒಗ್ಗೂಡಿಸಿಕೊಂಡು ಗೆಲುವಿನತ್ತ ದಾಪುಗಾಲು ಹಾಕುವುದು ಸುಲಭ’ ಎನ್ನುವುದು ಬಿಜೆಪಿಯ ತಂತ್ರವಾಗಿದೆ.

ಹಿಂದುತ್ವದ ಅಜೆಂಡಾ ರೂಪಿಸಲು ಸೂಚನೆ

ಹಳೇ ಮೈಸೂರು ಭಾಗದಲ್ಲಿ ಜನರನ್ನು ತಲುಪಲು ಅಭಿವೃದ್ಧಿಯೊಂದಿಗೆ ಹಿಂದುತ್ವದ ತಂತ್ರಗಳನ್ನು ಹದವಾಗಿ ಬೆರೆಸುವ ತಂತ್ರವನ್ನು ಬಿಜೆಪಿ ಹೆಣೆದಿದೆ. ಅಭಿವೃದ್ಧಿ ವಿಚಾರ ಹಾಗೂ ಹಿಂದುತ್ವ ಸಿದ್ದಾಂತಗಳೆರಡನ್ನೂ ಒಟ್ಟಾಗಿ ಕೊಂಡೊಯ್ಯಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಕೇವಲ ಸಿದ್ದಾಂತದಿಂದ ಮಾತ್ರ ಮಂಡ್ಯದಲ್ಲಿ ತಕ್ಷಣಕ್ಕೆ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ಹಳೇ ಮೈಸೂರು ಭಾಗಕ್ಕೆ ಬಿಜೆಪಿ ಕೊಡುಗೆ ಮುಂದಿಟ್ಟು ಬಿಜೆಪಿ ಪ್ರಚಾರಕ್ಕೆ ಮುಂದಾಗಿದೆ.

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಬೆಂಗಳೂರು ಮೈಸೂರು ಹೆದ್ದಾರಿ ಯೋಜನೆ, ಹಾಲು ಉತ್ಪಾದಕರಿಗೆ ಸಹಾಯಧನ, ಮೈಸೂರು ಹಾಸನ ವಿಮಾನ ನಿಲ್ದಾಣ, ಈ‌ ಭಾಗದ ರೈಲ್ವೆ ಯೋಜನೆಗಳನ್ನು ಮುಖ್ಯವಾಗಿ ಪ್ರಸ್ತಾಪಿಸಲು ಬಿಜೆಪಿ ಮುಂದಾಗಿದೆ. ಇದರ ಜೊತೆಗೆ ಟಿಪ್ಪು ಸುಲ್ತಾನ್, ಶ್ರೀರಂಗಪಟ್ಟಣ ಮಸೀದಿ, ರಾಮದೇವರ ಬೆಟ್ಟ ಅಭಿವೃದ್ಧಿಯಂತಹ ವಿಚಾರಗಳನ್ನು ಚುನಾವಣಾ ಅಸ್ತ್ರವಾಗಿ ಬಳಸಲು ಬಿಜೆಪಿ ನಿರ್ಧರಿಸಿದೆ.

ನಾಲ್ಕು ವಿಭಾಗಗಳಲ್ಲಿ ಕ್ಷೇತ್ರಗಳ ವಿಂಗಡನೆ

ಹಳೇ ಮೈಸೂರು ಭಾಗದದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಹಾಗೂ ಹೊಸದಾಗಿ ನಾಯಕತ್ವ ಹುಟ್ಟುಹಾಕಿ ಗೆಲ್ಲಬಹುದಾದ ಕ್ಷೇತ್ರಗಳ ಆಯ್ಕೆಯ ಬಗ್ಗೆ ಅಮಿತ್ ಶಾ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಹಾಗೂ ಇತರ ಹಿರಿಯ ನಾಯಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳನ್ನೇ ಗುರಿಯಾಗಿಸಿ ತಂತ್ರ ಹೆಣೆಯಲಾಗುತ್ತಿದೆ. ಸ್ಥಿತಿಗತಿಯನ್ನು ವಿಸ್ತೃತವಾಗಿ ಅವಲೋಕಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮವನ್ನು ನಿಗದಿಪಡಿಸಲಾಗುವುದು. ಎಲ್ಲ ಕ್ಷೇತ್ರಗಳನ್ನೂ ಎ, ಬಿ ಮತ್ತು ಸಿ ಎಂದು ಮೂರು ರೀತಿಯಾಗಿ ವಿಂಗಡಿಸಲಾಗಿದೆ. ಈ ಪೈಕಿ ‘ಎ’ ಎಂದರೆ ಗೆಲ್ಲಬಹುದಾದ ಕ್ಷೇತ್ರ, ‘ಬಿ’ ಎಂದರೆ ಪೈಪೋಟಿ ನೀಡಬಹುದಾದ ಕ್ಷೇತ್ರ. ‘ಸಿ’ ಎಂದರೆ ಗೆಲುವಿನ ಸಾಧ್ಯತೆ ತೀರಾ ಕಡಿಮೆ ಇರುವ ಕ್ಷೇತ್ರ ಎಂದು ಗುರುತಿಸಲಾಗಿದೆ.

ಯಡಿಯೂರಪ್ಪ ದೂರ

ಅಮಿತ್ ಶಾ ಅವರ ಬೆಂಗಳೂರು ಹಾಗೂ ಮಂಡ್ಯ ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಭಾಗವಹಿಸುತ್ತಿಲ್ಲ. ಹಲವು ಊಹಾಪೋಹಗಳಿಗೆ ಈ ಬೆಳವಣಿಗೆಯು ಕಾರಣವಾಗಿದೆ. ತಮ್ಮ ಅನುಪಸ್ಥಿತಿ ಕುರಿತು ಯಡಿಯೂರಪ್ಪ ಈಗಾಗಲೇ ಅಮಿತ್ ಶಾಗೆ ಮಾಹಿತಿ ನೀಡಿದ್ದಾರೆ. ವಿವಿಧ ಜಿಲ್ಲೆಯಲ್ಲಿ ಪೂರ್ವನಿಗದಿತ ಪ್ರವಾಸಗಳು ಇದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಜನವರಿ 1ರಂದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಅಮಿತ್ ಶಾ ಅವರ ಜೊತೆಯಲ್ಲಿ ಯಡಿಯೂರಪ್ಪ ಬದಲು ವಿಜಯೇಂದ್ರ ಭಾಗವಹಿಸಲಿದ್ದಾರೆ. ಮಂಡ್ಯದ ಕಾರ್ಯಕ್ರಮದಲ್ಲೂ ವಿಜಯೇಂದ್ರ ಉಪಸ್ಥಿತರಿರಲಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ