Karnataka Politics ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಡ್ತೇವೆ: ಸಂಚಲನ ಮೂಡಿಸಿದ ಜಮೀರ್ ಹೇಳಿಕೆ
ರಾಜ್ಯ ರಾಜಕೀಯದಲ್ಲಿ ಬಾಂಬ್ ಬ್ಲಾಸ್ಟ್ ಆಗಲಿದ್ದು, ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಡ್ತೇವೆ ಎಂದಿರುವ ಶಾಸಕ ಜಮೀರ್ ಅಹಮ್ಮದ್ ಖಾನ್ ಜಾರಕಿಹೊಳಿ ರಾಜಕೀಯದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಧಾರವಾಡ: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಆರೇಳು ತಿಂಗಳು ಬಾಕಿ ಇದ್ದು, ಇದಕ್ಕಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದರ ಮಧ್ಯೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್, ಡಿಸೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಧಾರವಾಡದಲ್ಲಿ ಇಂದು(ಅಕ್ಟೋಬರ್ 21) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಬಾಂಬ್ ಬ್ಲಾಸ್ಟ್ ಆಗಲಿದ್ದು, ಹೊಸ ವರ್ಷಕ್ಕೆ ನಾವು ಸಿಹಿ ಸುದ್ದಿ ಕೊಡುತ್ತೇವೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
Karnataka Politics: ದೊಡ್ಡಗೌಡ್ರ ಪ್ಲಾನ್ ಸಕ್ಸಸ್: ಭಾರೀ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್-ಬಿಜೆಪಿಗೆ ಜಿಟಿಡಿ ಶಾಕ್!
ಬಿಜೆಪಿಯಲ್ಲಿ ಬಹಳಷ್ಟು ಗೊಂದಲ ಇದೆ. ನವೆಂಬರ್‌ವರೆಗೆ ಕಾಯಿರಿ. ನವೆಂಬರ್ ಕಳೆಯಲಿ, ಡಿಸೆಂಬರ್ ನೋಡಿ ಯಾವ ಯಾವುದು ಯಾವ ತರಹ ಆಗಲಿದೆ. ಎಷ್ಟು ಜನ ಬಿಜೆಪಿ ಬಿಟ್ಟು ಆಚೆ ಬರುತ್ತಾರೆ ಕಾದು ನೋಡಿ. ರಮೇಶ ಜಾರಕಿಹೊಳಿ ಮಾತ್ರವಲ್ಲ ಇನ್ನೂ ಬಹಳ ಜನ ಬೇಸತ್ತಿದ್ದಾರೆ. ಎಷ್ಟು ಜನ ಬರ್ತಾರೆ ಅಂತ ನಾನು ಅಂದಾಜು ಹೇಳುವುದಿಲ್ಲ. ನವೆಂಬರ್‌ನಲ್ಲಿ ಎಲ್ಲ ಹೇಳುತ್ತೇವೆ ಎಂದು ಹೇಳಿದರು.
ರಾಸಲೀಲೆ ಸಿಡಿ ಹಾಗೂ ಕಳೆದ ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು . ಈ ಎರಡು ಕಾರಣಗಳಿಂದ ರಮೇಶ್ ಜಾರಕಿಹೊಳಿ ಬಿಜೆಪಿ ಹೈಕಮಾಂಡ್ ನಾಯಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅಷ್ಟಾಗಿ ಪಕ್ಷ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ.
ಅಲ್ಲದೇ ಎಚ್ಡಿ ಕುಮಾರಸ್ವಾಮಿ ಜೊತೆಯೂ ಮುಂದಿನ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ರಮೇಶ ಜಾರಕಿಹೊಳಿ ಮಾತ್ರವಲ್ಲ ಇನ್ನೂ ಬಹಳ ಜನ ಬೇಸತ್ತಿದ್ದಾರೆ ಎನ್ನುವ ಜಮೀರ್ ಅಹಮ್ಮದ್ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಗಾದ್ರೆ ಜಮೀರ್ ಕೊಟ್ಟ ಸುಳಿವಿನಂತೆ ರಮೇಶ್ ಜಾರಕಿಹೊಳಿ ಬಿಜೆಪಿ ತೊರೆಯುತ್ತಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.