30 ವರ್ಷದ ಇತಿಹಾಸದಲ್ಲೇ ವಿಪಕ್ಷ ನಾಯಕನಿಲ್ಲದೆ ಕಲಾಪ: ಹೈಕಮಾಂಡ್ ಕೈ ಸೇರಿದ ವರದಿ, ಇಂದೇ ಘೋಷಣೆ ಸಾಧ್ಯತೆ

ತೀವ್ರ ಕುತೂಹಲ ಮೂಡಿಸಿರುವ ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಆಯ್ಕೆ ಸಂಬಂಧ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.

30 ವರ್ಷದ ಇತಿಹಾಸದಲ್ಲೇ ವಿಪಕ್ಷ ನಾಯಕನಿಲ್ಲದೆ ಕಲಾಪ: ಹೈಕಮಾಂಡ್ ಕೈ ಸೇರಿದ ವರದಿ, ಇಂದೇ ಘೋಷಣೆ ಸಾಧ್ಯತೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jul 05, 2023 | 7:06 AM

ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಶುರುವಾಗಿ 3ನೇ ದಿನಕ್ಕೆ ಕಾಲಿಟ್ಟಿದೆ. ಆದ್ರೆ ವಿಪಕ್ಷ ಬಿಜೆಪಿಯಲ್ಲಿ(BJP) ವಿಪಕ್ಷ ನಾಯಕ (opposition leader) ಯಾರೂ ಎನ್ನುವ ಸಸ್ಪೆನ್ಸ್ ಮುಂದುವರೆದಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನ(karnataka assembly session) ಪ್ರತಿಪಕ್ಷ ನಾಯಕನಿಲ್ಲದೆ ಆರಂಭವಾಗಿದೆ. ಅಧಿವೇಶನ ಶುರುವಾಗಿ 3ನೇ ದಿನಕ್ಕೆ ಕಾಲಿಟ್ಟರೂ ಬಿಜೆಪಿಯಿಂದ ವಿಪಕ್ಷ ನಾಯಕನ ಹೆಸರು ಮಾತ್ರ ಇನ್ನೂ ಘೋಷಣೆ ಆಗಿಲ್ಲ. 30 ವರ್ಷದ ಇತಿಹಾಸದಲ್ಲೇ ಇದೇ ಮೊದಲು ವಿಪಕ್ಷ ನಾಯಕನ ಸೀಟ್ ಖಾಲಿ ಉಳಿಸಿ ಕಲಾಪ ನಡೆಯುತ್ತಿದೆ.

ಇದನ್ನೂ ಓದಿ: ಕುಮಾರಸ್ವಾಮಿ ಆರೋಪಗಳೆಲ್ಲ ಸತ್ಯ, ಒಗ್ಗಟ್ಟಾಗಿ ಹೋರಾಡುತ್ತೇವೆ; ಜೆಡಿಎಸ್, ಬಿಜೆಪಿ ಮೈತ್ರಿ ಸುಳಿವು ನೀಡಿದ ಯಡಿಯೂರಪ್ಪ

ಇಂದೇ ವಿಪಕ್ಷ ನಾಯಕನ ಹೆಸರು ಘೋಷಣೆ ಸಾಧ್ಯತೆ!

ವಿಧಾನಸಭೆ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರ ಆಯ್ಕೆ ಸಂಬಂಧ ಹೈಕಮಾಂಡ್ ಅಭಿಪ್ರಾಯ ಸಂಗ್ರಹಣೆ ಮುಗಿದಿದೆ. ವೀಕ್ಷಕರ ವರದಿಯೂ ಹೈಕಮಾಂಡ್ ಕೈ ಸೇರಿದೆ. ಇವತ್ತು ಯಾವುದೇ ಕ್ಷಣದಲ್ಲಾದರೂ ವಿಪಕ್ಷ ನಾಯಕರ ಹೆಸರು ಘೋಷಣೆಯಾಗುವ ನಿರೀಕ್ಷೆ ಇದೆ. ವಿಧಾ‌ನಸಭೆ ವಿಪಕ್ಷ ನಾಯಕ ಸ್ಥಾ‌ನದ ರೇಸ್​ನಲ್ಲಿ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಅರಗ ಜ್ಞಾನೇಂದ್ರ, ಸುರೇಶ್ ಕುಮಾರ್, ಆರ್. ಅಶೋಕ್, ಅರವಿಂದ ಬೆಲ್ಲದ್ ಹೆಸರಿದೆ. ಎಲ್ಲಾ ಬೆಳವಣಿಗೆ ಗಮನಿಸಿದರೆ ರೇಸ್​ನಲ್ಲಿ ಯತ್ನಾಳ್ ಹೆಸರು ಮುಂಚೂಣಿಯಲ್ಲಿರುವಂತಿದೆ.

ತೀವ್ರ ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ

ತೀವ್ರ ಕುತೂಹಲ ಮೂಡಿಸಿರುವ ಪ್ರತಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಆಯ್ಕೆ ಸಂಬಂಧ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಈ ಸಂಬಂಧ ನಿನ್ನೆ (ಮಂಗಳವಾರ) ಪಕ್ಷದ ಕೇಂದ್ರ ಸಮಿತಿಯಿಂದ ವೀಕ್ಷಕರಾಗಿ ಬಂದಿದ್ದ ವಿನೋದ್‌ ತಾವಡೆ ಮತ್ತು ಮನ್ಸುಖ್‌ ಮಾಂಡವಿಯ, ರಾಜ್ಯದ ಹಿರಿಯ ಮುಖಂಡರು ಮತ್ತು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ವಾಪಸಾಗಿದ್ದಾರೆ. ರಾತ್ರಿವರೆಗೆ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಸಂಗ್ರಹಿಸಿದ ಬಳಿಕ ದೆಹಲಿಗೆ ತೆರಳಿದ್ದು, ವರದಿಯನ್ನು ಹೈಕಮಾಂಡ್​ಗೆ ಮುಟ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಹೈಕಮಾಂಡ್​ ಅಂಗಳದಲ್ಲಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ನಿನ್ನೆ (ಜುಲೈ 04) ಕಾಂಗ್ರೆಸ್ ಪಡೆ ವಿಪಕ್ಷ ನಾಯಕನ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಬಿಜೆಪಿಯ ಕಾಲೆಳೆಯೋ ಕೆಲಸ ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿಯೇ ಬೀಡು ಬಿಟ್ಟಿದ್ದ ಬಿಜೆಪಿ ನಾಯಕರು ಈಗ ಕ್ಯಾರೇ ಅಂತಿಲ್ಲ ಎಂದು ಟ್ವಿಟರ್​ನಲ್ಲಿ ಲೇವಡಿ ಮಾಡಿದೆ. ಈ ನಡುವೆ ನಿನ್ನೆ ಸದನದಲ್ಲಿ ಖಾಲಿ ಇದ್ದ ಪ್ರತಿಪಕ್ಷ ನಾಯಕನ ಕುರ್ಚಿಯ ಪಕ್ಕದ ಆಸನದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರ್‌. ಅಶೋಕ್‌ ಕುಳಿತಿದ್ದರು.

ಇನ್ನು ವಿಧಾನಸಭೆ ಪಡಸಾಲೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ, ಬಿಜೆಪಿ ಶಾಸಕರ ನಡುವೆಯೇ ನನಗೆ ಹಾಗೂ ಅಶೋಕ್​ಗೆ ಕೊಡಲ್ಲ ಎಂದು ನಗುನಗುತ್ತಲೇ ಮಾತನಾಡ್ತಾ ಇದ್ರು. ಇದು ತಮಾಷೆಯೋ ಗಂಭೀರವೋ ಎನ್ನುವುದು ಶಾಸಕರಿಗೂ ಅರ್ಥವಾಗಲಿಲ್ಲ.

ಒಟ್ಟಿನಲ್ಲಿ ಇವತ್ತು ಯಾವುದೇ ಕ್ಷಣದಲ್ಲಾದರೂ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಹೆಸರು ಘೋಷಣೆ ಆಗಲಿದೆ. ಒಂದು ವೇಳೆ ಇಂದೂ ಕೂಡ ವಿಪಕ್ಷ ನಾಯಕ ಯಾರು ಎನ್ನುವ ಸಸ್ಪೆನ್ಸ್ ಮುಂದುವರೆದರೆ ಇದನ್ನೇ ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. 30 ವರ್ಷದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕರಿಲ್ಲದೇ ಸದನ ಎದುರಿಸುತ್ತಿರುವ ಪಕ್ಷ ಎಂಬ ಕಳಂಕ ಬಿಜೆಪಿಗಂಟಿಸಲು ಪ್ಲ್ಯಾನ್ ಮಾಡಿದೆ.

ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ