ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಸಿದ್ದರಾಮಯ್ಯಗೆ ಹೊಸ ಟಾಸ್ಕ್ ಕೊಟ್ಟ ಸಿಟಿ ರವಿ!

| Updated By: ರಮೇಶ್ ಬಿ. ಜವಳಗೇರಾ

Updated on: Jan 22, 2024 | 8:02 PM

ಅತ್ತ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರಲ್ಲಿ ರಾಮಲಲ್ಲಾ ವಿಗ್ರಹಕ್ಕೆ ಪೂಜೆ ಸಲ್ಲಿಸಿದರೆ. ಇತ್ತ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಮಮಂದಿರ ಉದ್ಘಾಟಿಸಿ ಬಳಿಕ ಜೈ ಶ್ರೀರಾಮ್ ಘೋಷಣೆ ಕೂಗಿದರು. ಇನ್ನು ಇದಕ್ಕೆ ಬಿಜೆಪಿ ನಾಯಕರ ಸಿಟಿ ರವಿ ಪ್ರತಿಕ್ರಿಯಿಸಿ ಹೊಸ ಟಾಸ್ಕ್​ ಕೊಟ್ಟಿದ್ದಾರೆ.

ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಸಿದ್ದರಾಮಯ್ಯಗೆ ಹೊಸ ಟಾಸ್ಕ್ ಕೊಟ್ಟ ಸಿಟಿ ರವಿ!
ಸಿಟಿ ರವಿ, ಸಿದ್ದರಾಮಯ್ಯ
Follow us on

ಚಿಕ್ಕಮಗಳೂರು, (ಜನವರಿ 22): ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah)  ಇಂದು(ಜನವರಿ 22) ಬೆಂಗಳೂರಿನಲ್ಲಿ ರಾಮಮಂದಿರ (Ram Mandir)  ಉದ್ಘಾಟಿಸಿ ಬಳಿಕ ಜೈ ಶ್ರೀರಾಮ್ ಘೋಷಣೆ ಕೂಗಿ ಅಚ್ಚರಿ ಮೂಡಿಸಿದ್ದಾರೆ. ಇನ್ನು ಸಿದ್ದರಾಮಯ್ಯನವರ ಜೈ ಶ್ರೀರಾಮ್ ಘೋಷಣೆಗೆ ಬಿಜೆಪಿ ನಾಯಕ ಸಿಟಿ ರವಿ(CT Ravi) ಪ್ರತಿಕ್ರಿಯಿಸಿ, ನಾನು ಸಿದ್ದರಾಮಯ್ಯ ಅಂತರಂಗವನ್ನು ತಿಳಿದಿಲ್ಲ. ಬಹಿರಂಗವಾಗಿ ಹೇಳುವಷ್ಟು ಹಿಂದುತ್ವಕ್ಕೆ ಸಾಮರ್ಥ್ಯ ಬಂದಿದೆ ಎಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ನಾನು ಸಿದ್ದರಾಮಯ್ಯ ಅಂತರಂಗವನ್ನು ತಿಳಿದಿಲ್ಲ. ಬಹಿರಂಗವಾಗಿ ಹೇಳುವಷ್ಟು ಹಿಂದುತ್ವಕ್ಕೆ ಸಾಮರ್ಥ್ಯ ಬಂದಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣವನ್ನು ವಿರೋಧಿಸಿದವರು ವಿಚಿತ್ರವಾಗಿ ಸಲಹೆ ಕೊಟ್ಟವರು. ನಮ್ಮ ಅಸ್ಮಿತೆ ಎಂದು ನಂಬಿದವರು ಇಂದು ಜೈ ಶ್ರೀರಾಮ್ ಎಂದು ಹೇಳುತ್ತಿದ್ದಾರೆ. ಮುಸಲ್ಮಾನರಿಗೂ ಪೂರ್ವಜ ರಾಮ ಎಂದರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟಿಸಿ ಬಳಿಕ ಜೈ ಶ್ರೀರಾಮ್‌ ಘೋಷಣೆ ಕೂಗಿದ ಸಿಎಂ ಸಿದ್ದರಾಮಯ್ಯ

ಶ್ರೀರಾಮ ಭಕ್ತ ಹನುಮಂತನ ದೇವಾಲಯ ಮಸೀದಿಯಾಗಿದೆ. ಶ್ರೀರಂಗಪಟ್ಟಣದ ಹನುಮಂತನ ಮಂದಿರ ಮಸೀದಿಯಾಗಿದೆ. ಭಗವಂತ ಹಾಗೂ ಭಕ್ತನ ನಡುವೆ ಇರುವ ಸಂಬಂಧ ಗೊತ್ತು. ಸಿದ್ದರಾಮಯ್ಯನವರೇ ರಾಮನ ಹೆಸರನ್ನು ಇಟ್ಟುಕೊಂಡಿದ್ದೀರಾ ಜೈಹನುಮಾನ್ ಅಂತಾ ಹೇಳಿ ಮಂದಿರ ಪಡೆದುಕೊಳ್ಳೋಣ. ಆಗ ನಿಮ್ಮದು ನಿಜವಾದ ರಾಮ ಭಕ್ತಿ ಎಂದು ನಂಬುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಾವು ಮಾಡಿದ್ರೆ ಕೋಮುವಾದ, ನೀವು ಮಾಡಿದ್ರೆ ಕೋಮುವಾದ ಎನ್ನಲ್ಲ. ಅಡ್ವಾಣಿ, ಮೋದಿ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ನಿಮ್ಮ ಹೋರಾಟದ ಮೂಲಕ ಮಸೀದಿಯಿಂದ ಹನುಮಂತನ ದೇವಾಲಯ ಪಡೆದುಕೊಳ್ಳೋಣ ನಿಮ್ಮ ನೇತೃತ್ವಕ್ಕಾಗಿ ಕಾಯುತ್ತಿರುತ್ತೇವೆ ಎಂದು ಹೇಳಿದರು.

ರಾಮಮಂದಿರ ಉದ್ಘಾಟಿಸಿ ಜೈ ಶ್ರೀರಾಮ್ ಎಂದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಇಂದು (ಜನವರಿ 22) ಬೆಂಗಳೂರಿನ ರಾಮಮಂದಿರ(Ram Mandir) ಉದ್ಘಾಟಿಸಿದರು. ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ್ದ ರಾಮ ಸೀತ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು.

ಜೈ ಶ್ರೀರಾಮ್ ಅಂತ ನಾವೂ ಹೇಳೋಲ್ವಾ? ಜೈ ಶ್ರೀರಾಮ್ ಎಂಬುದು ಒಬ್ಬರ ಸ್ಲೋಗನ್ ಅಲ್ಲ, ನಾನೂ ಹೇಳುತ್ತೇನೆ. ಕೆಲವರು ಜೈ ಶ್ರೀರಾಮ್ ಸ್ಲೋಗನ್ ತಮ್ಮ‌ ಸ್ವತ್ತು ಅಂದುಕೊಂಡಿದ್ದಾರೆ. ಎಲ್ಲರೂ ಜೈ ಶ್ರೀರಾಮ್ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ಹೇಳುತ್ತಾ ತಾವು ಸಹ ಜೈ ಶ್ರೀರಾಮ್​ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ