AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಹಗಲು ದರೋಡೆ ಮಾಡಿದವರು: ಸಿ ಟಿ ರವಿ ವಾಗ್ದಾಳಿ

ರೀಡೂ ಹಗರಣದ ಕುರಿತು ನ್ಯಾ.ಕೆಂಪಣ್ಣ ವರದಿಯನ್ನು ಸರ್ಕಾರ ಸದನದಲ್ಲಿ ಮಂಡನೆ ಮಾಡಲಿ ಆಗ ನಿಜವಾದ ಭ್ರಷ್ಟರು ಯಾರು ಎಂದು ಬಯಲಿಗೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಸಿದ್ದರಾಮಯ್ಯ ಹಗಲು ದರೋಡೆ ಮಾಡಿದವರು: ಸಿ ಟಿ ರವಿ ವಾಗ್ದಾಳಿ
ಬಿಜೆಪಿ ನಾಯಕ ಸಿ ಟಿ ರವಿ
TV9 Web
| Edited By: |

Updated on: Sep 26, 2022 | 6:15 PM

Share

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಹಗರಣಗಳ ಪಟ್ಟಿಯನ್ನೇ ಕಕ್ಕುತ್ತಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ (C T Ravi) ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಮೇಲೆ ಬೆಂಗಳೂರಿನಲ್ಲಿ (Bengaluru) ವಾಗ್ದಾಳಿ ಮಾಡಿದ್ದಾರೆ. ರೀಡೂ (ಅರ್ಕಾವತಿ) ಹಗರಣದ ಕುರಿತು ನ್ಯಾ.ಕೆಂಪಣ್ಣ ವರದಿಯನ್ನು ಸರ್ಕಾರ ಸದನದಲ್ಲಿ ಮಂಡನೆ ಮಾಡಲಿ ಆಗ ನಿಜವಾದ ಭ್ರಷ್ಟರು ಯಾರು ಎಂದು ಬಯಲಿಗೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. 2017ರಲ್ಲಿ ಸಿದ್ದರಾಮಯ್ಯ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಮುಚ್ಚಿ ಹಾಕಿದ್ದು ಯಾಕೆ? ಲೋಕಾಯುಕ್ತ ವರದಿ ನೀಡಿದ್ದನ್ನೇ ಮುಚ್ಚಿಹಾಕಿದ್ದು ಯಾಕೆ? ಸಿದ್ದರಾಮಯ್ಯ ರೀಡೂ ಎಂಬ ಹೊಸ ಹೆಸರು ನೀಡಿದ್ದು ಯಾಕೆ? ಸಿದ್ದರಾಮಯ್ಯ ಮೊದಲು ಇದಕ್ಕೆ ಉತ್ತರ ಕೊಡಲಿ ಸಾಕು ಎಂದು ಪ್ರಶ್ನೆ ಮಾಡಿದ್ದಾರೆ.

ಹಗಲು ದರೋಡೆಯ ಪಿತಾಮಹರು ಈಗ ಬಿಜೆಪಿ ವಿರುದ್ಧ ಆರೋಪ ಮಾಡ್ತಿದ್ದಾರೆ. ಹಾಸಿಗೆ ದಿಂಬು ಹಗರಣ ನಡೆದಿದ್ದು‌ ಅವರ ಕಾಲದಲ್ಲಿ. ಕಳ್ಳ ಬಿಲ್ಲು ಪ್ರಕರಣ ನಡೆದಿದ್ದು ಕಾಂಗ್ರೆಸ್ ಕಾಲದಲ್ಲಿ. ಒಬ್ಬೊಬ್ಬರ ಜಾತಕ ತೆಗೆದರೆ ತಿಹಾರ್ ಜೈಲಿಗೆ ಹೋಗಲು ಲಾಯಕ್ ಆಗಿರುವವರೇ ಕಾಂಗ್ರೆಸ್​ನಲ್ಲಿರುವವರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೇ ಸಿಎಂ ಪೋಸ್ಟರ್ ಬಳಿಕ ಸಚಿವರ ಪೋಸ್ಟರ್ ಅಂಟಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ ಆರೋಪಕ್ಕೆ ಆಧಾರ ಏನು? ಸಚಿವ ಮುನಿರತ್ನ ಕೂಡಾ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಭ್ರಷ್ಟಾಚಾರ ನಡೆದಿದ್ದರೆ ಕಾಂಗ್ರೆಸ್ ಲೋಕಾಯುಕ್ತಕ್ಕೆ ದೂರ ಕೂಡಬೇಕಲ್ಲವೇ?ಸಿದ್ದರಾಮಯ್ಯ ಯಾವ ಕಾರಣಕ್ಕೆ ಲೋಕಾಯುಕ್ತದ ಹಲ್ಲು ತೆಗೆದರು? ಸಿದ್ದರಾಮಯ್ಯ ತನ್ನ ಅಧಿಕಾರಾವಧಿಯಲ್ಲಿ ಲೋಕಾಯುಕ್ತವನ್ನು ದುರ್ಬಲ ಗೊಳಿಸಿದರು. ಸಿದ್ದರಾಮಯ್ಯ ತನ್ನ ಕೈ ಕೆಳಗಡೆ ಇರುವ ಎಸಿಬಿ ರಚನೆ ಮಾಡಿದರು. ಭೂತದ ಬಾಯಿಯಲ್ಲಿ ಭಗವದ್ಗೀತೆ ಹೇಳಿಸಿದ ಹಾಗೆ ಸಿದ್ದರಾಮಯ್ಯ ಮಾಡಿದರು. ಸಿದ್ದರಾಮಯ್ಯ ಹಗಲು ದರೋಡೆ ಮಾಡಿದವರು ಎಂದು ಆರೋಪಿಸಿದರು.

ಅರ್ಕಾವತಿ ರೀಡೂ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿದ್ದಾರೆ. ಕೈಗೆ ಹ್ಯಾಂಡ್ ಗ್ಲೌಸ್ ಹಾಕಿ ಸಿದ್ದರಾಮಯ್ಯ ಅಕ್ರಮ ಮಾಡಿದ್ದಾರೆ. ಹೀಗಾಗಿ ಅವರ ಫಿಂಗರ್ ಪ್ರಿಂಟ್ ಕಾಣುತ್ತಿಲ್ಲ. ಆದರೆ ಅಕ್ರಮ ಮಾಡಿದ್ದು ಸುಳ್ಳಾ? ಸಿದ್ದರಾಮಯ್ಯ ಅವರು ಉಡುವ ಪಂಚೆಯಷ್ಟೇ ಕ್ಲೀನ್ ಇದ್ದಾರಾ? ಡಿ.ಕೆ. ಶಿವಕುಮಾರ್ ಭ್ರಷ್ಟ ಹೌದೋ ಅಲ್ಲವೋ ಅಂತಾ ಜನಸಾಮಾನ್ಯರನ್ನು ಒಮ್ಮೆ ಕೇಳಿಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾರಕ್ಕೆ ಇವರನ್ನೆಲ್ಲಾ ಕೇವಲ ಪರಪ್ಪನ ಅಗ್ರಹಾರಕ್ಕೆ‌ ಹಾಕುವುದಲ್ಲ ಕಾಂಗ್ರೆಸ್ ನಾಯಕರು ತಿಹಾರ್ ಜೈಲಿನಲ್ಲೇ ಇರಬೇಕು ಎಂದು ಕಿಡಿ ಕಾರಿದರು.

ಪಿಎಫ್​ಐ ಮುಖಂಡರ ಮನೆ ಮೇಲೆ ಎನ್​ಐಎ ದಾಳಿ ಪ್ರಕರಣ ಕುರಿತು ಮಾತನಾಡಿದ ಅವರು ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಕ್ರಮ ಕೈಗೊಂಡಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದರು. ಆಗಲೂ ಪಿಎಫ್​ಐ ಕಾರ್ಯಕರ್ತರ ಹೆಸರು ಕೇಳಿಬಂದಿತ್ತು. ಕೆಲವು ಹಿಂದೂ ಕಾರ್ಯಕರ್ತರ ಹತ್ಯೆ ಹಿಂದೆ ಇದ್ದಿದ್ದು PFI ಇದೆ. ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಹಿಂದೆಯೂ PFI ಇದೆ. ಭಾರತವನ್ನು‌ ಮೊಘಲಸ್ಥಾನ ಮಾಡುವ ಪಿತೂರಿ‌ ಮಾಡುತ್ತಿದ್ದಾರೆ. ಕಠಿಣ ಕ್ರಮ ತೆಗೆದುಕೊಂಡು ಬೇರುಸಮೇತ ಕಿತ್ತೊಗೆಯಬೇಕು. ಪಿಎಫ್ಐ ಸಂಘಟನೆ ಹುಟ್ಟಿದ್ದೇ ದೇಶದ್ರೋಹ ಕೆಲಸ ಮಾಡಲು. ಭಯೋತ್ಪಾದನೆ ಮಾಡುವವರಿಗೆ ಈ ನೆಲದಲ್ಲಿ ಜಾಗ ಇಲ್ಲ. ಅಂಥವರನ್ನು ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನಕ್ಕೆ ಕಳಿಸೋಣ. ಅಲ್ಲೇ ಅವರಿಗೆ ಜನ್ನತ್ ಸಿಗಲಿ ಎಂದರು.

ಐಐಟಿ ಅಂತಹ ಆಧುನಿಕ ಸಂಸ್ಥೆಯನ್ನು ರಾಷ್ಟ್ರಪತಿಗಳು ಕನ್ನಡ ನಾಡಿಗೆ ಸಮರ್ಪಣೆ ಮಾಡಿದ್ದಾರೆ. ಅವರಿಗೆ ಅಂತರಾಳದ ಕೃತಜ್ಞತೆಗಳು. ಬುಡಕಟ್ಟು ಜನಾಂಗದಿಂದ ಬಂದವರು, ಸರಳ‌ಜೀವಿಗಳು ಆದರ್ಶವೇ ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ. ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿಯಾದಾಗ ದೇಗುಲ ಸ್ವಚ್ಛ ಮಾಡಿದವರು. ಇವೆಲ್ಲ ನಮಗೆ ಆದರ್ಶ ಹಾಗೂ ಪ್ರೇರಣೆ ನೀಡುವಂಥವುಗಳು. ಅಂಥ ರಾಷ್ಟ್ರಪತಿ ಇಂಥ ತಾಂತ್ರಿಕ ಸಂಸ್ಥೆ ಉದ್ಘಾಟನೆ ಮಾಡಿದ್ದಾರೆ. ಯಾವ ವಿಜ್ಞಾನ ಮಾನವನಿಗೆ ಅನುಕೂಲವಿದೆಯೋ ಅದೇ ಶ್ರೇಷ್ಠ ವಿಜ್ಞಾನ. ಮಾನವೀಯತೆ ಇಲ್ಲದಿದ್ದರೆ ಯಾವುದಕ್ಕೂ ಬೆಲೆ ಇಲ್ಲ. ಮಾನವೀಯತೆಯ ಸಾಕಾರ ಮೂರ್ತಿ ಆಗಿರೋ ರಾಷ್ಟ್ರಪತಿ ಈ ಸಂಸ್ಥೆಯನ್ನು ಉದ್ಘಾಟಿಸಿದ್ದಾರೆ. ಇದು ತುಂಬಾನೇ ಸಂತಸದ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!