ಬೆಂಗಳೂರು, (ಜನವರಿ 15): ಪಕ್ಷದಲ್ಲಿ ಕಲೆವರ ನಡೆಗೆ ಅಸಮಾಧಾನಗೊಂಡಿದ್ದ ವಿ ಸೋಮಣ್ಣ (V Somanna) ಇದೀಗ ಹೈಕಮಾಂಡ್ ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿದ್ದಾರೆ. ಅಲ್ಲದೇ ಹೈಕಮಾಂಡ್ ಸಹ ಸೋಮಣ್ಣ ಕೋಪವನ್ನು ಶಮನ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಜತೆ ಶನಿವಾರವಷ್ಟೇ ಮಾತುಕತೆ ನಡೆಸಿ ಬಂದಿರುವ ಹಿರಿಯ ನಾಯಕ ವಿ ಸೋಮಣ್ಣ , ಇದೀಗ ಭೇಟಿ ಬಗ್ಗೆ ಮಾಹಿತಿ ನೀಡಿದ್ದು ಎಲ್ಲವೂ ಸುಖಾಂತ್ಯವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಸೋಮಣ್ಣ ಹಿರಿಯರು, ಪಕ್ಷಕ್ಕೆ ಅವರದ್ದೇ ಆದ ಕೊಡುಗೆ ಇದೆ. ಗೆಲ್ಲುವ ಭರವಸೆ ಮೇಲೆ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಸೋಮಣ್ಣ ಪರಾಭವ ಆಗಿದ್ದಕ್ಕೆ ನಮಗೂ ನೋವು ಇದೆ ಎಂದಿದ್ದಾರೆ.
ಹೈಕಮಾಂಡ್ ನಾಯಕರನ್ನು ವಿ.ಸೋಮಣ್ಣ ಭೇಟಿಯಾದ ವಿಚಾರವಾಗಿ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪಕ್ಷಕ್ಕೆ ಅವರದ್ದೇ ಆದ ಕೊಡುಗೆ ಇದೆ. ಗೆಲ್ಲುವ ಭರವಸೆ ಮೇಲೆ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಸೋಮಣ್ಣ ಪರಾಭವ ಆಗಿದ್ದಕ್ಕೆ ನಮಗೂ ನೋವು ಇದೆ. ಕೇಂದ್ರದ ಮುಂದೆ ವ್ಯಕ್ತಪಡಿಸಿರುವ ಅಪೇಕ್ಷೆ ಬಗ್ಗೆ ಮಾತಾಡುತ್ತೇನೆ. ಆ ವಿಚಾರದಲ್ಲಿ ನಮ್ಮದೇನೂ ಅಭ್ಯಂತರ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ರಾಜ್ಯಾಧ್ಯಕ್ಷನಾಗಿ ನಾನು ಅವರ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದನನ್ನೂ ಓದಿ: ಎಲ್ಲವೂ ಸುಖಾಂತ್ಯವಾಗಿದೆ, ಮುಂದಿನ ನಡೆಯ ಬಗ್ಗೆ ಸೋಮಣ್ಣ ಕೊಟ್ಟ ಸುಳಿವೇನು?
ಬಿಜೆಪಿ ಹೈಕಮಾಂಡ್ ಜತೆ ಶನಿವಾರವಷ್ಟೇ ಮಾತುಕತೆ ನಡೆಸಿ ಬಂದಿರುವ ಹಿರಿಯ ನಾಯಕ ವಿ ಸೋಮಣ್ಣ, ಇದೀಗ ಭೇಟಿ ಬಗ್ಗೆ ಮಾಹಿತಿ ನೀಡಿದ್ದು ಎಲ್ಲವೂ ಸುಖಾಂತ್ಯವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಮಾಡಿದ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಸೋಮಣ್ಣ, ಒಳ್ಳೇತನಕ್ಕೆ, ಒಳ್ಳೇ ನಡವಳಿಕೆಗೆ ಸಹಾಯ ಆಗುತ್ತದೆ. ಅದಕ್ಕೆ ದೆಹಲಿ ಭೇಟಿಯೇ ಒಂದು ಉದಾಹರಣೆ. ಅಮಿತ್ ಶಾ ನಡವಳಿಕೆ, ಅವರ ತೀರ್ಮಾನ, ಭಾವನೆ ಸಕಾರಾತ್ಮಕವಾಗಿಯೇ ಇತ್ತು. ಎಲ್ಲವೂ ಸುಖಾಂತ್ಯವಾಗಿದೆ ಎಂದು ಹೇಳಿದ್ದಾರೆ.
ಕೆಲಸ ಮಾಡಿ ಬಳಿಕ ಮುಂದಿನದ್ದನ್ನ ಚರ್ಚೆ ಮಾಡುತ್ತೇವೆ. ನಾನು ರಾಜ್ಯಸಭೆ ಸ್ಥಾನ ಕೇಳಿದ್ದೇನೆ. ಜತೆಗೆ ನನಗೆ 3 ಕಷ್ಟದ ಲೋಕಸಭಾ ಕ್ಷೇತ್ರ ಕೊಡಿ. ಯಾವುದೇ 3 ಕ್ಷೇತ್ರಗಳನ್ನು ಕೊಟ್ಟರೂ ಗಲ್ಲಿಸಿಕೊಂಡು ಬರುತ್ತೇನೆ. 28 ಕ್ಷೇತ್ರಗಳ ಪೈಕಿ 3 ಕ್ಷೇತ್ರ ವಹಿಸಿದರೆ ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ನನ್ನ ಶ್ರಮ ಇದೆ ಎಂದಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ