ಜುಲೈ 24ರಂದು ದೆಹಲಿ ಪ್ರವಾಸ; ಸಂಪುಟ ವಿಸ್ತರಣೆ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು : ಸಿಎಂ ಬೊಮ್ಮಾಯಿ
ಸಂಪುಟ ವಿಸ್ತರಣೆ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದ್ದು, ಸಂಪುಟ ವಿಸ್ತರಣೆ ಬಗ್ಗೆ ತಾವೇ ತಿಳಿಸುವುದಾಗಿ ವರಿಷ್ಠರು ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಸಂಪುಟ ವಿಸ್ತರಣೆ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದ್ದು, ಸಂಪುಟ ವಿಸ್ತರಣೆ ಬಗ್ಗೆ ತಾವೇ ತಿಳಿಸುವುದಾಗಿ ವರಿಷ್ಠರು ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ (Bengaluru) ಮುಖ್ಯಮಂತ್ರಿ ಬಸವರಾಜ (Basavaraj Bommai) ಬೊಮ್ಮಾಯಿ ಅವರು ಹೇಳಿದ್ದಾರೆ. ಜುಲೈ 24ರಂದು ನಾನು ದೆಹಲಿಗೆ (Delhi) ಹೋಗುತ್ತಿದ್ದೇನೆ. ದೆಹಲಿಗೆ ಕೆಲವು ಇಲಾಖೆಗಳ ನಿಯೋಗ ಕೊಂಡೊಯ್ಯುತ್ತಿದ್ದೇನೆ. ಜುಲೈ 25, ಜುಲೈ 26ರಂದು ದೆಹಲಿಯಲ್ಲೇ ಇರುತ್ತೇನೆ ಎಂದು ತಿಳಿಸಿದರು.
ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ, ಇಲಾಖೆಯವರು ಬಿ ರಿಪೋರ್ಟ್ ಹಾಕಿದ್ದಾರೆ, ಅದು ಕೋರ್ಟ್ ಗೆ ಸಲ್ಲಿಕೆ ಆಗುತ್ತದೆ. ಹೆಚ್.ವೈ.ಮೇಟಿ ಪ್ರಕರಣದಲ್ಲಿ FIR ಹಾಕದೆಯೇ ಬಿ ರಿಪೋರ್ಟ್ ಹಾಕಿದ್ದರು. ಇದನ್ನು ಮೊದಲೆ ತೀರ್ಮಾನಿಸಿದ್ದರು ವಿಡಿಯೋ ಸಾಕ್ಷ್ಯವಿದ್ದರೂ ಮೇಟಿ ವಿರುದ್ಧ ಎಫ್‌ಐಆರ್ ಹಾಕಿರಲಿಲ್ಲ. ಇದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮರೆತುಹೋಗಿದ್ದಾರೆ ಎಂದು ಮುಖ್ಯಮಂತ್ರಿಗಳು ತಿರುಗೇಟು ನೀಡಿದ್ದಾರೆ.