ಗೃಹ ಸಚಿವರ ನಿವಾಸಕ್ಕೆ ಸಿಎಂ ಭೇಟಿ ವಿಚಾರ; ಡಾ.ಪರಮೇಶ್ವರ್ ಹೇಳಿದ್ದಿಷ್ಟು
ಲೋಕಸಭೆ ಚುನಾವಣೆ ಬಗ್ಗೆ ‘ಲೋಕಸಭಾ ಚುನಾವಣೆ ಬಗ್ಗೆ ಅಧ್ಯಕ್ಷರು ಚರ್ಚೆ ಮಾಡುತ್ತಾರೆ. ಚುನಾವಣೆ ಹತ್ತಿರ ಬಂದಾಗ ಸಭೆ ಮಾಡಲಿದ್ದಾರೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣ ಸ್ಪರ್ಧೆ ವಿಚಾರ ‘ ಅವರು ಏಕೆ ಅಭ್ಯರ್ಥಿ ಆಗಬಾರದು ಎಂದು ಪರಮೇಶ್ವರ್ ಹೇಳಿದರು.
ತುಮಕೂರು, ಅ.28:ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹ ಸಚಿವ ಪರಮೇಶ್ವರ್ (G Parameshwara) ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ನಿನ್ನೆ(ಅ.27) ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಒಂದೂವರೆ ಗಂಟೆಗೂ ಅಧಿಕ ಕಾಲ ಚರ್ಚೆ ನಡೆದಿತ್ತು. ಇದೀಗ ಈ ಕುರಿತು ತುಮಕೂರಿನಲ್ಲಿ ಗೃಹಸಚಿವ ಡಾ.ಪರಮೇಶ್ವರ್ ಮಾತನಾಡಿ ‘ ಸೌಜನ್ಯದ ಭೇಟಿ ಇದಾಗಿದ್ದು, ನಿನ್ನೆ ಊಟಕ್ಕೆ ಸೇರಿದ್ವಿ ಅಷ್ಟೇ. ಊಟ ಮಾಡಿದ್ರೂ, ಅವರ ಮನೆಗೆ ಅವರು ಹೋದರು. ನಮ್ಮ ಮನೇಲಿ ನಾನು ಉಳಿದುಕೊಂಡೆ. ಯಾವ ವಿಚಾರವಾಗಿಯೂ ಚರ್ಚೆ ಆಗಲಿಲ್ಲ ಎಂದರು.
ಡಾ.ಜಿ.ಪರಮೇಶ್ವರ್ ಸಿಎಂ ಆಗುತ್ತಾರೆ ಎಂಬ ಚರ್ಚೆ ವಿಚಾರ ‘ ಸುಮ್ಮನೇ ಅವೆಲ್ಲಾ ಮಾತನಾಡಬಾರದು ಎಂದರು. ಇದೆ ವೇಳೆ ಲೋಕಸಭೆ ಚುನಾವಣೆ ಬಗ್ಗೆ ‘ಲೋಕಸಭಾ ಚುನಾವಣೆ ಬಗ್ಗೆ ಅಧ್ಯಕ್ಷರು ಚರ್ಚೆ ಮಾಡುತ್ತಾರೆ. ಚುನಾವಣೆ ಹತ್ತಿರ ಬಂದಾಗ ಸಭೆ ಮಾಡಲಿದ್ದಾರೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣ ಸ್ಪರ್ಧೆ ವಿಚಾರ ‘ ಅವರು ಏಕೆ ಅಭ್ಯರ್ಥಿ ಆಗಬಾರದು ಎಂದು ಪರಮೇಶ್ವರ್ ಹೇಳಿದರು.‘
ಇದನ್ನೂ ಓದಿ:ಗೃಹ ಸಚಿವರ ಮನೆಗೆ ಸಿಎಂ ಸಿದ್ದರಾಮಯ್ಯ ದಿಢೀರ್ ಭೇಟಿ; ಕುತೂಹಲ ಕೆರಳಿಸಿರುವ ಬೆಳವಣಿಗೆ
ಡಿನ್ನರ್ ಅರೇಂಜ್ಮೆಂಟ್ನಲ್ಲಿ ಸತೀಶ್ ಜಾರಕಿಹೊಳಿ
ಇನ್ನು ಸಿಎಂ ಬರುವುದಕ್ಕೂ ಮುಂಚಿತವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಗೃಹ ಸಚಿವರ ಮನೆಯಲ್ಲಿ ಇದ್ದು, ಸಿಎಂ ಸಿದ್ದರಾಮಯ್ಯ ಬಂದ ಬಳಿಕ ಒಟ್ಟಿಗೆ ಊಟ ಮಾಡಿಕೊಂಡೆ ರಾಜಕೀಯದ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದರು. ಇತ್ತೀಚಿಗೆ ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಜಾರಕಿಹೊಳಿ ಅಸಮಧಾನಗೊಂಡಿದ್ದರು. ಬಳಿಕ ಶಾಸಕರ ಮೂಲಕ ಶಕ್ತಿ ಪ್ರದರ್ಶನಕ್ಕೆ ಸತೀಶ್ ಜಾರಕಿಹೊಳಿ ಮುಂದಾಗಿದ್ದರು. ಆ ಬಳಿಕ ಇದೀಗ ಸಿಎಂ ಭೇಟಿ ಕೂತುಹಲ ಮೂಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Sat, 28 October 23