ಹಿರಿಯ ನಾಯಕರೇ ಈ ರೀತಿ ಮಾಡಿದರೆ ಹೇಗೆ? ಘಟನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ: ವಿಎಸ್ ಉಗ್ರಪ್ಪಗೆ ಸಿದ್ದರಾಮಯ್ಯ ಎಚ್ಚರಿಕೆ

| Updated By: ganapathi bhat

Updated on: Oct 13, 2021 | 10:54 PM

Siddaramaiah: ಹಿರಿಯ ನಾಯಕರೇ ಈ ರೀತಿಯಾಗಿ ಮಾಡಿದರೆ ಹೇಗೆ? ಎಂದು ಸಿದ್ದರಾಮಯ್ಯ ಉಗ್ರಪ್ಪ ಬಳಿ ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯಗೆ ಉಗ್ರಪ್ಪ ವಿವರಣೆಯನ್ನು ನೀಡಿದ್ದಾರೆ. ಆದರೆ, ಸಿಡಿಮಿಡಿಯಲ್ಲೇ ಸಿದ್ದರಾಮಯ್ಯ ಮಾತು ಮುಗಿಸಿದ್ದಾರೆ ಎಂದು ತಿಳಿದುಬಂದಿದೆ.

ಹಿರಿಯ ನಾಯಕರೇ ಈ ರೀತಿ ಮಾಡಿದರೆ ಹೇಗೆ? ಘಟನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ: ವಿಎಸ್ ಉಗ್ರಪ್ಪಗೆ ಸಿದ್ದರಾಮಯ್ಯ ಎಚ್ಚರಿಕೆ
ಸಿದ್ದರಾಮಯ್ಯ
Follow us on

ಬೆಂಗಳೂರು: ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ಮಾತನಾಡಿರುವ ವಿಚಾರ ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಟೀಕೆ, ವ್ಯಂಗ್ಯಗಳ ಸುರಿಮಳೆಗೈದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕೂಡ ಇಬ್ಬರ ಘಟನೆ ಹಾನಿ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ವಿ.ಎಸ್. ಉಗ್ರಪ್ಪಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಸಂಜೆ ಸಿದ್ದರಾಮಯ್ಯಗೆ ವಿ.ಎಸ್. ಉಗ್ರಪ್ಪ ಕರೆ ಮಾಡಿದ್ದರು. ಇದೇ ವೇಳೆ, ಸಿದ್ದರಾಮಯ್ಯ ಉಗ್ರಪ್ಪ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದುಬಂದಿದೆ. ಸಂಜೆ 6 ಗಂಟೆ ಸುಮಾರಿಗೆ ಉಗ್ರಪ್ಪ ಕರೆ ಮಾಡಿದ್ದರು. ಘಟನೆ ಕುರಿತು ವಿವರ ನೀಡಲು ಉಗ್ರಪ್ಪ ಮುಂದಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಈ ವೇಳೆ ಉಗ್ರಪ್ಪರಿಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಈ ರೀತಿಯ ಘಟನೆಗಳು ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿರುವುದು ತಿಳಿದುಬಂದಿದೆ.

ಈ ಘಟನೆಯಿಂದಾಗಿ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ಇದರಿಂದ ನಾಯಕರು ಮುಜುಗರ ಎದುರಿಸುವಂತಾಗಿದೆ. ಹಿರಿಯ ನಾಯಕರೇ ಈ ರೀತಿಯಾಗಿ ಮಾಡಿದರೆ ಹೇಗೆ? ಎಂದು ಸಿದ್ದರಾಮಯ್ಯ ಉಗ್ರಪ್ಪ ಬಳಿ ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯಗೆ ಉಗ್ರಪ್ಪ ವಿವರಣೆಯನ್ನು ನೀಡಿದ್ದಾರೆ. ಆದರೆ, ಸಿಡಿಮಿಡಿಯಲ್ಲೇ ಸಿದ್ದರಾಮಯ್ಯ ಮಾತು ಮುಗಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಏನೂ ಹೇಳಬೇಡ ಸುಮ್ನಿರಪ್ಪ, ಸ್ಪಷ್ಟನೆ ನೀಡುವುದಕ್ಕೆ ಮುಂದಾದ ಉಗ್ರಪ್ಪ ವಿರುದ್ಧ ಡಿಕೆ ಶಿವಕುಮಾರ್ ಉಗ್ರ ರೂಪ!

ಇದನ್ನೂ ಓದಿ: Congress: ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಜಯಕಾರ ಹಾಕೋರು ಇರ್ತಾರೆ: ಸಲೀಂ-ಉಗ್ರಪ್ಪ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

Published On - 10:29 pm, Wed, 13 October 21