AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ವಿರೋಧಿ ಬಣದಿಂದ ಸ್ವಾತಂತ್ರ್ಯದ ಬಾವುಟ! ಸಂದರ್ಭಕ್ಕೆ ತಕ್ಕಂತೆ ಪದ-ಪದವಿ ಪೋಣಿಸುವುದಾದರೆ ಅದು ಹೀಗಾಗಬಹುದೇ?

bs yediyurappa: ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿಗೂ ಮೊದಲೇ ಸಂಘ ಪರಿವಾರದ ನಾಯಕರಿಂದಲೂ ಮಾಹಿತಿ ಸಂಗ್ರಹಗೊಂಡಿತ್ತು. ಅರುಣ್ ಸಿಂಗ್ ಭೇಟಿ ಕಾಲಕ್ಕೆ ಇನ್ನೂ ಕೆಲ ಶಾಸಕರಿಂದಲೂ ಮಾಹಿತಿ ಪೂರೈಕೆಯಾಗಿದೆ.  ಅರುಣ್ ಸಿಂಗ್ ರಾಜ್ಯ ಭೇಟಿ ಅಭಿಪ್ರಾಯ ಸಂಗ್ರಹವೂ ನಾಯಕತ್ವದ ಬದಲಾವಣೆ ಭಾಗವೇ ಆಗಿತ್ತು ಎಂಬುದು ಕುತೂಹಲಕಾರಿಯಾಗಿದೆ.

ಯಡಿಯೂರಪ್ಪ ವಿರೋಧಿ ಬಣದಿಂದ ಸ್ವಾತಂತ್ರ್ಯದ ಬಾವುಟ! ಸಂದರ್ಭಕ್ಕೆ ತಕ್ಕಂತೆ ಪದ-ಪದವಿ ಪೋಣಿಸುವುದಾದರೆ ಅದು ಹೀಗಾಗಬಹುದೇ?
ಕೊನೆಗೂ ಯಡಿಯೂರಪ್ಪ ಕೆಳಗಿಳಿಸುವಲ್ಲಿ ಯಶಸ್ಸು ಪಡೆದ ವಿರೋಧಿ ಬಣ; ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಸಿಎಂ
TV9 Web
| Edited By: |

Updated on:Jul 26, 2021 | 4:03 PM

Share

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್​ ಯಡಿಯೂರಪ್ಪ ಅವರನ್ನು ಕೆಳಗಿಳಿಸುವಲ್ಲಿ ವಿರೋಧಿ ಬಣ ಕೊನೆಗೂ ಯಶಸ್ಸು ಸಾಧಿಸಿದೆ. ಅದೂ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಹೊಸ ಸಿಎಂ ಇರ್ತಾರೆ ಎಂದೇ ಬಿಂಬಿಸಿಕೊಂಡು ಬಂದಿದ್ದ ವಿರೋಧಿ ಪಡೆ ಮೇಲುಗೈ ಸಾಧಿಸಿದೆ. 

ಗಮನಾರ್ಹವೆಂದ್ರೆ ಕೇವಲ ವಯೋ ಸಹಜ ಕಾರಣಗಳನ್ನು ಮಾತ್ರ ಯಡಿಯೂರಪ್ಪ ವಿರುದ್ದ ಬಳಸಲ್ಪಟ್ಟಿಲ್ಲ. ಬದಲಿಗೆ ಯಡಿಯೂರಪ್ಪ ಹೊರತುಪಡಿಸಿ, ಅವರ ಕುಟುಂಬಸ್ಥರ ದಾಖಲೆಗಳನ್ನೂ ಸಹ ಬಿಎಸ್ವೈ ವಿರೋಧಿ ಬಣ  ಹೈಕಮಾಂಡ್ ನಾಯಕರಿಗೆ ತಲುಪಿಸಿತ್ತು.

ಸಿಎಂ‌ ಪುತ್ರ ವಿಜಯೇಂದ್ರಗೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ ಹೈಕಮಾಂಡ್ ಗೆ ರವಾನೆಯಾಗಿದೆ. ಸಿಎಂ ಯಡಿಯೂರಪ್ಪ ಅವರ ದಿನಚರಿಯ ವಿವರಗಳನ್ನು ಕೂಡ ವಿರೋಧಿ ಟೀಂ ಸಂಗ್ರಹಿಸಿ, ಹೈಕಮಾಂಡ್ ಗಮನಕ್ಕೆ ತಂದಿತ್ತು.

ಯಡಿಯೂರಪ್ಪ ತಾವೇ ಐದಕ್ಕೂ ಹೆಚ್ಚು ಪ್ರಮುಖ ಖಾತೆಗಳನ್ನು ಇಟ್ಟುಕೊಂಡಿರುವ ಬಗ್ಗೆ ಸವಿವರ ತಲುಪಿಯಾಗಿತ್ತು. ಪ್ರತಿ ಇಲಾಖೆಯಲ್ಲೂ ವಿಜಯೇಂದ್ರ ಹಸ್ತಕ್ಷೇಪ, ಟೆಂಡರ್ ಪ್ರಕ್ರಿಯೆಗಳಲ್ಲಿ ವಿಜಯೇಂದ್ರ ಮೂಗು ತೂರಿಸುವುದು, ಈ ಎಲ್ಲ ವಿಚಾರಗಳನ್ನು ದಾಖಲೆ ಸಮೇತ ಕೊಂಡೊಯ್ದು ಹೈಕಮಾಂಡ್ ನಾಯಕರಿಗೆ ಅದೇ ಟೀಂ ತಲುಪಿಸಿತ್ತು.

ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿಗೂ ಮೊದಲೇ ಸಂಘ ಪರಿವಾರದ ನಾಯಕರಿಂದಲೂ ಮಾಹಿತಿ ಸಂಗ್ರಹಗೊಂಡಿತ್ತು. ಅರುಣ್ ಸಿಂಗ್ ಭೇಟಿ ಕಾಲಕ್ಕೆ ಇನ್ನೂ ಕೆಲ ಶಾಸಕರಿಂದಲೂ ಮಾಹಿತಿ ಪೂರೈಕೆಯಾಗಿದೆ.  ಅರುಣ್ ಸಿಂಗ್ ರಾಜ್ಯ ಭೇಟಿ ಅಭಿಪ್ರಾಯ ಸಂಗ್ರಹವೂ ನಾಯಕತ್ವದ ಬದಲಾವಣೆ ಭಾಗವೇ ಆಗಿತ್ತು ಎಂಬುದು ಕುತೂಹಲಕಾರಿಯಾಗಿದೆ. ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಡಿಯೂರಪ್ಪ ವಿರೋಧಿ ಬಣ ಯಶಸ್ಸು ಕಂಡಿದೆ.

ಈ ಸಂದರ್ಭಕ್ಕೆ ತಕ್ಕಂತೆ ಪದ- ಪದವಿ ಪೋಣಿಸುವುದಾದರೆ ಅದು ಹೀಗಾಗಬಹುದೇ?  ನಾಳೆ ಯಾರ ‘ಜೋಶ್‘ ಉಳಿಯುತ್ತದೋ..? ಯಾರಿಗೆ ಸಿಗುತ್ತೋ ‘ಬೆಲ್ಲ‘ದ ಹೋಳಿಗೆ..? ಯಾರು ‘ಸೀಟಿ‘ ಹೊಡೆಯುತ್ತಾರೋ…? ಯಾರಾಗುತ್ತಾರೋ ಕರ್ನಾಟಕದ ‘ಮುರುಗೇಶ‘… ಯಾರ ಯತ್ನಾ(ಳ) ಫಲ ಕೊಡುತ್ತದೋ ಗೊತ್ತಿಲ್ಲ.. ಒಟ್ನಲ್ಲಿ ಯಾರೇ ಆದರೂ ‘ಸಂತೋಷ…’

ಬಿ.ಎಸ್. ಯಡಿಯೂರಪ್ಪ ಬಿಜೆಪಿಯ ಆಧಾರ ಸ್ತಂಭವಿದ್ದಂತೆ; ಬಿಎಸ್‌ವೈ ರಾಜೀನಾಮೆಯಿಂದ ನಮ್ಮ ಬಲ ಕುಸಿದ ಭಾವನೆ: ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ

(corruption allegations team opposite to bs yediyurappa successful in pulling him down timely)

Published On - 3:41 pm, Mon, 26 July 21

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು