ವಿಧಾನ ಪರಿಷತ್ ಸದಸ್ಯತ್ವಕ್ಕೆ ಜೆಡಿಎಸ್​ ನಾಯಕ ಸಿಆರ್ ಮನೋಹರ್​ ರಾಜೀನಾಮೆ

ಕಾಂಗ್ರೆಸ್​ ಸೇರಲು ಚಿಂತನೆ ನಡೆಸಿರುವ ಸಿ.ಆರ್. ಮನೋಹರ್​, ಜೆಡಿಎಸ್​ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ರಿಜಿಸ್ಟರ್ ಪೋಸ್ಟ್​ ಮೂಲಕ ಮನೋಹರ್ ರಾಜೀನಾಮೆ ಸಲ್ಲಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯತ್ವಕ್ಕೆ ಜೆಡಿಎಸ್​ ನಾಯಕ ಸಿಆರ್ ಮನೋಹರ್​ ರಾಜೀನಾಮೆ
ಸಿಆರ್ ಮನೋಹರ್

ಬೆಂಗಳೂರು: ವಿಧಾನ ಪರಿಷತ್ ಸದಸ್ಯತ್ವಕ್ಕೆ ಸಿ.ಆರ್. ಮನೋಹರ್​ ರಾಜೀನಾಮೆ ನೀಡಿದ್ದಾರೆ. ಸಿ.ಆರ್. ಮನೋಹರ್ ಜೆಡಿಎಸ್​ ತೊರೆದು ಬಿಜೆಪಿ ಸೇರುತ್ತಾರೆಂದು ಸುದ್ದಿಯಾಗಿತ್ತು. ಆದರೆ, ಇದೀಗ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಅವರು ಕಾಂಗ್ರೆಸ್​ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ವಿಧಾನಪರಿಷತ್​ನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನೋಹರ್​ ರಾಜೀನಾಮೆ ಸಲ್ಲಿಸಿದ್ದಾರೆ.

ಕಾಂಗ್ರೆಸ್​ ಸೇರಲು ಚಿಂತನೆ ನಡೆಸಿರುವ ಸಿ.ಆರ್. ಮನೋಹರ್​, ಜೆಡಿಎಸ್​ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ರಿಜಿಸ್ಟರ್ ಪೋಸ್ಟ್​ ಮೂಲಕ ಮನೋಹರ್ ರಾಜೀನಾಮೆ ಸಲ್ಲಿಸಿದ್ದಾರೆ.

ಸಿ.ಆರ್. ಮನೋಹರ್ ರಾಜೀನಾಮೆ ಅಂಗೀಕರಿಸಿದ್ದೇನೆ. ನಿನ್ನೆ ನಾನು ದೆಹಲಿಗೆ ಹೋಗಿದ್ದೆ, ಹೀಗಾಗಿ ಇಂದು ಮನೋಹರ್ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಕ್ಕೆ ಎಮ್​ಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾವುದೇ ಒತ್ತಡಕ್ಕೆ ಒಳಗಾಗಿ ರಾಜೀನಾಮೆಯನ್ನು ನೀಡಿಲ್ಲ. ಹೀಗಾಗಿ ಸಿ.ಆರ್. ಮನೋಹರ್ ರಾಜೀನಾಮೆ ಅಂಗೀಕಾರ ಮಾಡಿದ್ದೇನೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.

ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸಭಾಪತಿ ಬಸವರಾಜ ಹೊರಟ್ಟಿಗೆ ರಾಜೀನಾಮೆ ನೀಡಿದ್ದೇನೆ. ನಿನ್ನೆಯೇ ರಾಜೀನಾಮೆ ನೀಡಬೇಕಿತ್ತು, ಸಭಾಪತಿ ಇರಲಿಲ್ಲ. ಹಾಗಾಗಿ ಇಂದು ಸಭಾಪತಿ ಭೇಟಿಯಾಗಿ ರಾಜೀನಾಮೆ ಸಲ್ಲಿಕೆ ಮಾಡಲಾಗಿದೆ. ನಾನು ಬಹಳ ದಿನಗಳಿಂದ ಜೆಡಿಎಸ್​ ಪಕ್ಷದಿಂದ ದೂರವಿದ್ದೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಸಿ.ಆರ್. ಮನೋಹರ್​ ಹೇಳಿಕೆ ನೀಡಿದ್ದಾರೆ. ಜೆಡಿಎಸ್​ನವರು ಟಿಕೆಟ್​ ನಿರಾಕರಿಸುವ ನಿರ್ಧಾರ ಮಾಡಿದ್ದರು. ಹಾಗಾಗಿ ಜೆಡಿಎಸ್​ ತೊರೆದು MLC ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಡಿ.2ರಂದು ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಿ.ಆರ್.ಮನೋಹರ್​ ತಿಳಿಸಿದ್ಧಾರೆ.

ಇದನ್ನೂ ಓದಿ: ಚುನಾವಣೆ ಅಕ್ರಮ ಆರೋಪ: ಮತಗಟ್ಟೆಗಳಲ್ಲಿ ಸಿಸಿಕ್ಯಾಮರಾ ಹಾಕಬೇಕು- ಡಿಕೆ ಶಿವಕುಮಾರ್ ಹೇಳಿಕೆ

ಇದನ್ನೂ ಓದಿ: ಪರಿಷತ್ ಚುನಾವಣೆ: ಎಸ್​ಆರ್​ ಪಾಟೀಲ್​ಗೆ ಟಿಕೆಟ್ ಸಿಗದ ಹಿನ್ನೆಲೆ; ಸೋನಿಯಾ ಗಾಂಧಿಗೆ ಪತ್ರ ಬರೆದು ಬೆಂಬಲಿಗರ ಅಸಮಾಧಾನ

Published On - 9:38 pm, Mon, 29 November 21

Click on your DTH Provider to Add TV9 Kannada