BS Yediyurappa: ಬಿಜೆಪಿ ಬಿಎಸ್ ಯಡಿಯೂರಪ್ಪಗೆ ಬಹಳಷ್ಟು ಅವಕಾಶ ನೀಡಿದೆ: ಸಿಟಿ ರವಿ
CT Ravi: ಕೆಲ ಶಾಸಕರು, ಸಚಿವರ ಅಸಮಾಧಾನ ವಿಚಾರವಾಗಿ ಕೇಳಿದಾಗ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ರಾಜಕೀಯದಲ್ಲಿ ಈ ರೀತಿ ನಡೆಯುವುದು ಸಾಮಾನ್ಯ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.
ಪಣಜಿ: ಹೈಕಮಾಂಡ್ ಸೂಚನೆಯನ್ನು ಎಲ್ಲರೂ ಪಾಲಿಸಲೇಬೇಕು ಎಂದು ಗೋವಾದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ. ಈ ಮೂಲಕ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಹೈಕಮಾಂಡ್ ಸೂಚನೆ ಪಾಲಿಸುವ ಬಗ್ಗೆ ಪರೋಕ್ಷ ಹೇಳಿಕೆಯನ್ನು ಸಿ.ಟಿ. ರವಿ ನೀಡಿದ್ದಾರಾ ಎಂಬ ಪ್ರಶ್ನೆ ಕೇಳಿಬಂದಿದೆ. ಸಿಎಂ ಯಡಿಯೂರಪ್ಪಗೆ ಪರೋಕ್ಷವಾಗಿ ಸಿ.ಟಿ. ರವಿ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪ ಒಬ್ಬರು ಬೆಸ್ಟ್ ಪಾಪ್ಯುಲರ್ ಲೀಡರ್. ಪಾರ್ಟಿ ಅವರಿಗೆ 4 ಸಲ ಸಿಎಂ ಆಗಿ ಸೇವೆ ಮಾಡಲು ಅವಕಾಶ ಕೊಟ್ಟಿದೆ. ವಿಪಕ್ಷದ ನಾಯಕನಾಗಿ ಕೂಡ ಯಡಿಯೂರಪ್ಪ ಕೆಲಸ ಮಾಡಿದ್ದಾರೆ. ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ . 4 ಸಲ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಎಂದು ಸಿ.ಟಿ. ರವಿ ಯಡಿಯೂರಪ್ಪರನ್ನು ಹೊಗಳಿದ್ದಾರೆ.
ಯಡಿಯೂರಪ್ಪರ ಜನಪ್ರಿಯತೆಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಪಕ್ಷ ಬಿ.ಎಸ್. ಯಡಿಯೂರಪ್ಪಗೆ ಬಹಳಷ್ಟು ಅವಕಾಶ ನೀಡಿದೆ. ಯಾವುದೇ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳು ಈ ರೀತಿ ಅವಕಾಶ ಕೊಟ್ಟಿಲ್ಲ. ಬಿಜೆಪಿ ಸಾಮಾನ್ಯ ಕಾರ್ಯಕರ್ತರನ್ನು ಬೆಳೆಯಲು ಅವಕಾಶ ಮಾಡಿಕೊಟ್ಟಿದೆ. ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಿ ಈ ರೀತಿ ಶಕ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ.
ಕೆಲ ಶಾಸಕರು, ಸಚಿವರ ಅಸಮಾಧಾನ ವಿಚಾರವಾಗಿ ಕೇಳಿದಾಗ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ರಾಜಕೀಯದಲ್ಲಿ ಈ ರೀತಿ ನಡೆಯುವುದು ಸಾಮಾನ್ಯ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.
ಸಾಮಾನ್ಯ ಕಾರ್ಯಕರ್ತನನ್ನು ನಾಯಕ ಮಾಡುತ್ತೆ ಪಕ್ಷ. ಯಡಿಯೂರಪ್ಪ ಅವರೂ ರಾಜ್ಯದ ಜನಪ್ರಿಯ ನಾಯಕ. ಯಡಿಯೂರಪ್ಪ ಅವರಿಗೆ ಅವಕಾಶ ಕೊಟ್ಟಿದ್ದು ಬಿಜೆಪಿ. ಕಾಂಗ್ರೆಸ್, ಕಮ್ಯುನಿಸ್ಟರು, ಜನತಾ ಪರಿವಾರದವರು ಅಲ್ಲ. ನಾಯಕತ್ವ ಬೆಳೆಸಿಕೊಳ್ಳುವ ಅವಕಾಶ ನೀಡುವುದು ಪಕ್ಷ. ಕಾರ್ಯಕರ್ತರ ಅವಿರತ ಶ್ರಮದಿಂದ ಇಷ್ಟೆಲ್ಲಾ ಅವಕಾಶ ಎಂದು ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.
ಸಿ.ಟಿ. ರವಿ ಹೇಳಿರುವುದು ನೂರಕ್ಕೆ ನೂರು ಸತ್ಯವಿದೆ: ಬಿ.ಎಸ್. ಯಡಿಯೂರಪ್ಪ ಸಿಟಿ ರವಿ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಎಲ್ಲಾ ಅವಕಾಶಗಳೂ ಸಿಕ್ಕಿವೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಬಹುಶಃ ನನಗೆ ಸಿಕ್ಕಿರುವ ಅವಕಾಶ ಯಾರಿಗೂ ಸಿಕ್ಕಿಲ್ಲ. ಮೋದಿ, ಅಮಿತ್ ಶಾ ಅವರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಸ್ಥಾನ-ಮಾನದ ವಿಚಾರದಲ್ಲಿ ಯಾವುದೇ ಬೇಸರವಿಲ್ಲ. ಮುಂದೆಯೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಬಿಜೆಪಿ ಅಧಿಕಾರಕ್ಕೆ ತರಲು ನಾನು ನಿರಂತರ ಶ್ರಮಿಸುವೆ. ಸಿ.ಟಿ. ರವಿ ಹೇಳಿರುವುದು ನೂರಕ್ಕೆ ನೂರು ಸತ್ಯವಿದೆ. ನಾನು, ಕಾರ್ಯಕರ್ತರೆಲ್ಲರೂ ಹೈಕಮಾಂಡ್ ಹೇಳಿಕೆಗೆ ಬದ್ಧ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಸ್ವಾಭಾವಿಕವಾಗಿ ಬಿಜೆಪಿಯಲ್ಲಿ ಗೊಂದಲಗಳಿಗೆ ಅವಕಾಶವಿಲ್ಲ. ಸಿಎಂ ಪಕ್ಷವನ್ನು ಮಾತೃ ಸಮಾನವಾಗಿ ನೋಡಿಕೊಂಡಿದ್ದಾರೆ. ಪಕ್ಷದ ಹಿರಿಯರ ಸೂಚನೆ ಪ್ರಕಾರ ನಡೆದುಕೊಳ್ತೇನೆ ಎಂದಿದ್ದಾರೆ. ದೇಶ, ರಾಜ್ಯಕ್ಕೆ ಮಾದರಿಯಾಗಬಲ್ಲ ಕಾರ್ಯಕರ್ತನ ಮಾತು ಅದು. ಹೈಕಮಾಂಡ್ನಿಂದ ಬರುವ ಸೂಚನೆ ಪಾಲಿಸುತ್ತೇನೆ ಎಂದಿದ್ದಾರೆ. ಮುಂದಿನದ್ದನ್ನು ಮುಖ್ಯಮಂತ್ರಿಗಳು, ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ನಿರ್ಧಾರ ಮಾಡುತ್ತಾರೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ..ಕರ್ನಾಟಕ ರಾಜಕೀಯದಲ್ಲಿ ಅಸ್ಥಿರತೆ ಇಲ್ಲ: ಜೆ.ಪಿ.ನಡ್ಡಾ
ಬಿಎಸ್ ಯಡಿಯೂರಪ್ಪ ಕಟ್ಟಿದ ಮನೆಯಲ್ಲಿ ಬೇರೆಯವರು ಇರುವುದಲ್ಲ: ಸಿಎಂ ವಿರೋಧಿ ಬಣಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಟಾಂಗ್
(CT Ravi on BS Yediyurappa BJP Karnataka Politics Developments)