AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ರೀತಿ ವೈಎಸ್​ಟಿ ಸಂಗ್ರಹ ಆಗುತ್ತಿದೆ: ಸಿದ್ದರಾಮಯ್ಯ ಪುತ್ರನ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಜಿಎಸ್​ಟಿ ರೀತಿ ವೈಎಸ್​ಟಿ ಸಂಗ್ರಹ ಆಗುತ್ತಿದೆ: ಸಿದ್ದರಾಮಯ್ಯ ಪುತ್ರನ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ
ಯತೀಂದ್ರ ಸಿದ್ದರಾಮಯ್ಯ, ಹೆಚ್​ಡಿ ಕುಮಾರಸ್ವಾಮಿ
Sunil MH
| Updated By: ರಮೇಶ್ ಬಿ. ಜವಳಗೇರಾ|

Updated on:Jul 02, 2023 | 1:22 PM

Share

ಬೆಂಗಳೂರು: ಕಾಂಗ್ರೆಸ್​ ಸರ್ಕಾರದಲ್ಲಿ ಜಿಎಸ್​ಟಿ ರೀತಿ ವೈಎಸ್​ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್ ) ಸಂಗ್ರಹ ಆಗುತ್ತಿದೆ. ವೈಎಸ್​​ಟಿ ಸಂಗ್ರಹದ ಬಗ್ಗೆ ನಾನು ಮಾಹಿತಿ ಕಲೆ ಹಾಕುತ್ತಿದ್ದೇನೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇಂದು (ಜುಲೈ 02) ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವೈಎಸ್ ಟಿ ತೆರಿಗೆ ಅಂತ ಇವರ ಸರ್ಕಾರದಲ್ಲಿ ಬಂದಿದೆಯಂತೆ. ಅದರ ಬಗ್ಗೆ ಪತ್ತೆ ಮಾಡುತ್ತಿದ್ದೇವೆ. ನಾನು ಒಂದು ರೂಪಾಯಿ ತೆಗೆದುಕೊಳ್ಳದೆ ಟ್ರಾನ್ಸ್​ಫರ್ ಮಾಡಿದ್ದೇನೆ. ನಾನು ಯಾವುದಕ್ಕೂ ಭಯ ಪಡಲ್ಲ. ರಾಜ್ಯಪಾಲರ ಭಾಷಣ ಮುಗಿಯಲಿ ಆಮೇಲೆ ನೋಡೋಣ ಎಂದು ಹೇಳಿದರು.

ಇದನ್ನೂ ಓದಿ: ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ ಹೆಸರಿನಲ್ಲಿ ಬಿಜೆಪಿ ಹೋರಾಟ: ಅಶ್ವತ್ಥ್ ನಾರಾಯಣ

ಇದೊಂದು ಪಾರದರ್ಶಕ ಸರ್ಕಾರ ಅಲ್ಲ ಎಂದು ಗೊತ್ತಾಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಒಬ್ಬರೇನಾ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಹೇಳುತ್ತಾರೆ, ಸತೀಶ್ ಜಾರಿಹೊಳಿ ಒಂದು ರೀತಿ ಹೇಳ್ತಾಳುತ್ತಾರೆ. ಹಾಗಾದ್ರೆ ಎಷ್ಟು ಜನ ಸಿಎಂ ಇದ್ದೀರಾ ಎಂದು ಪ್ರಶ್ನಿಸಿದ ಹೆಚ್​ಡಿಕೆ, ಅಧಿಕಾರಿಗಳನ್ನು ವರ್ಗಾವಣೆ ಮಾಡದೇ ವಸೂಲಿ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇಂದು ಸಭೆ ಕರೆಯಲಾಗಿದ್ದು, ಸರ್ಕಾರ ರಚನೆಯಾಗಿ 50 ದಿನ ಆಗಿದೆ. ನಾವು ಹೇಗೆ ಸಂಘಟನೆ ಮಾಡಬೇಕು ಎಂದು ಇಂದಿನ ಸಭೆಯಲ್ಲಿ ನಾಯಕರ ಅಭಿಪ್ರಾಯ ಕೇಳಲಾಗುತ್ತದೆ. ಅಧಿವೇಶನದಲ್ಲಿ ನಮ್ಮ ಪಕ್ಷದ ನಿಲುವೇನು? ಸರ್ಕಾರದ ನಡವಳಿಕೆಯಿಂದ ಜನರ ಅಭಿಪ್ರಾಯ ಏನು? ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಕಡಿಮೆ ಜನ ಇದ್ದರೂ ವಿರೋಧ ಪಕ್ಷದ ನಾಯಕರಾಗಿ ಹೇಗೆ ಮಾತಾಡಬೇಕು. ನಾನು ಗ್ಯಾರಂಟಿ ಬಗ್ಗೆ ಸದನದಲ್ಲಿ ಚರ್ಚೆ ಮಾಡಲ್ಲ. ಸ್ವತಂತ್ರ ಬಂದು 70 ವರ್ಷ ಆಗಿದೆ. ಜನರನ್ನು ಇನ್ನೂ ಎಷ್ಟು ವರ್ಷ ಕೈ ಚಾಚುವಂತೆ ಮಾಡುತ್ತಿದ್ದಾರೆ ಅಂತ. ಇಂಥ ಸಣ್ಣಮಟ್ಟದ ಸರ್ಕಾರದ ಆಸೆ ಆಮಿಷಗಳನ್ನು ಜನರಿಗೆ ಕೊಟ್ಟಿದ್ದೀರಾ. ಇದರಿಂದ ಜನ ಕೈ ಚಾಚಯವಂತೆ ಮಾಡಿದ್ದೀರಾ. ಇನ್ನು ಎಷ್ಟು ದಿನ ಜನರನ್ನು ಭಿಕ್ಷುಕರ ರೀತಿ ಇಡುತ್ತೀರ ಎಂದು ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದರು.

ನಾನು ಸಿಎಂ ಆದಾಗ ನಿಮ್ಮ ಮಂತ್ರಿಗಳು ಏನು ಮಾಡಿದರು. ಪೊಗರುದಸ್ತ್ ಇಲಾಖೆ ನಿಮ್ಮ ಕಡೆಯವರು ಇಟ್ಟುಕೊಂಡಿದ್ದರು. ಯಾವುದೇ ಟ್ರಾನ್ಸ್​ಫರ್​ ಕೂಡ ನಾನು ಮಾಡುವಂತಿರಲಿಲ್ಲ. ಅವರ ಆದೇಶದಂತೆ ಎಲ್ಲಾ ನಡೆಯಬೇಕಿತ್ತು. ಬೆಂಗಳೂರು ಪ್ರಾಧಿಕಾರಕ್ಕೆ ಡಿಮ್ಯಾಂಡ್​ ಇಟ್ಟುಕೊಂಡು ಬಂದವರನ್ನ ಆಚೆ ಇಟ್ಟಿದ್ದೆ. ಯಲಹಂಕ ತಹಶೀಲ್ದಾರರ ಕಚೇರಿಗೆ ಒಂದೂವರೆ ಕೋಟಿ ಕೊಡುತ್ತೇವೆ ಅಂದವರನ್ನ ಆಚೆ ಇಟ್ಟಿದ್ದೆ. ಇದು ನಮ್ಮ ಕಾಲದಲ್ಲಿ ನಡೆದಿದ್ದು ಎಂದರು.

Published On - 1:08 pm, Sun, 2 July 23