AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಡವೆಂದು ನಿಖಿಲ್​ಗೆ ಹೇಳಿದ್ದೆ, ಮಗನ ಸೋಲನ್ನು ಮತ್ತೆ ಪ್ರಸ್ತಾಪಿಸಿದ ಹೆಚ್​ಡಿ ಕುಮಾರಸ್ವಾಮಿ

ಲೋಕಸಭೆ ಚುನಾವಣೆಗೆ ನಿಲ್ಲಬೇಡ ಎಂದು ನಿಖಿಲ್​ಗೆ ಹೇಳಿದ್ದೆ. ಮಂಡ್ಯ ಕ್ಷೇತ್ರದ ಜನತೆ ನಿಖಿಲ್​ನನ್ನು ಸೋಲಿಸಲಿಲ್ಲ. ಆದರೆ ಕಾಂಗ್ರೆಸ್, ಬಿಜೆಪಿ, ರೈತ ಸಂಘದವರು ನಿಖಿಲ್​ನನ್ನು ಸೋಲಿಸಿದ್ದು ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿದರು.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಡವೆಂದು ನಿಖಿಲ್​ಗೆ ಹೇಳಿದ್ದೆ, ಮಗನ ಸೋಲನ್ನು ಮತ್ತೆ ಪ್ರಸ್ತಾಪಿಸಿದ ಹೆಚ್​ಡಿ ಕುಮಾರಸ್ವಾಮಿ
ಹೆಚ್​​.ಡಿ.ಕುಮಾರಸ್ವಾಮಿ, ನಿಖಿಲ್
ಗಂಗಾಧರ​ ಬ. ಸಾಬೋಜಿ
|

Updated on: Mar 05, 2023 | 3:08 PM

Share

ಬೆಂಗಳೂರು: ಲೋಕಸಭೆ ಚುನಾವಣೆಗೆ ನಿಲ್ಲಬೇಡ ಎಂದು ನಿಖಿಲ್​ಗೆ (Nikhil Kumaraswamy) ಹೇಳಿದ್ದೆ. ಕಾರ್ಯಕರ್ತರ ಒತ್ತಡದಿಂದ ನಿಖಿಲ್​ ಚುನಾವಣೆಗೆ ಸ್ಪರ್ಧಿಸಿದ್ದ. ಮಂಡ್ಯ ಕ್ಷೇತ್ರದ ಜನತೆ ನಿಖಿಲ್​ನನ್ನು ಸೋಲಿಸಲಿಲ್ಲ. ಆದರೆ ಕಾಂಗ್ರೆಸ್, ಬಿಜೆಪಿ, ರೈತ ಸಂಘದವರು ನಿಖಿಲ್​ನನ್ನು ಸೋಲಿಸಿದ್ದು ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿದರು. ನಗರದ ಶ್ರೀಗಂಧ ಕಾವಲು ಮೈದಾನದಲ್ಲಿ ಆಯೋಜಿಸಿರುವ ಜೆಡಿಎಸ್​ ಪ್ರತಿಜ್ಞಾ ಸಮಾವೇಶದಲ್ಲಿ ಮಾತನಾಡಿದ ಅವರು ನಿಖಿಲ್​ ಸೋಲನ್ನು ಮತ್ತೆ ಪ್ರಸ್ತಾಪಿಸಿದರು. ಕುತಂತ್ರದಿಂದ ನಿಖಿಲ್ ಸೋತಿರಬಹುದು, ಆದ್ರೆ ಜನರ ಬಳಿ ಗೆದ್ದಿದ್ದಾನೆ. ಮಂಡ್ಯ ಜಿಲ್ಲೆ ಸ್ವಾಭಿಮಾನ ಅಮಿತ್ ಶಾ, ಮೋದಿ ಕೆಳಗೆ ಹೋಗಲಿದೆ. ರಾಜ್ಯದಲ್ಲಿ ಮೂರೂವರೆ ವರ್ಷ ಬಿಜೆಪಿ ಆಡಳಿತವನ್ನು ನೋಡಿದ್ದೀರಿ. ಈಗ ಶಾ ಮಂಡ್ಯದಲ್ಲಿ ಡೈನಾಮೈಟ್ ಇಟ್ಟು ಒಡೆಯಲು ಬಂದಿದ್ದಾರೆ. ಜನರ ಪ್ರೀತಿಯನ್ನು ಯಾವ ಡೈನಾಮೈಟ್​​ನಿಂದಲೂ ಒಡೆಯಲು ಆಗಲ್ಲ. ನಿಮ್ಮ ಮನೆಯ ಮಕ್ಕಳಿಗೆ ವಿಷ ಹಾಕುವ ಹುನ್ನಾರಕ್ಕೆ ಬಲಿಯಾಗಬೇಡಿ ಎಂದು ಸಂಸದೆ ಸುಮಲತಾಗೆ ಮಾಜಿ ಸಿಎಂ ಹೆಚ್​.ಡಿ. ಕುಮಾಸ್ವಾಮಿ ಪರೋಕ್ಷವಾಗಿ ಟಾಂಗ್​ ನೀಡಿದರು.

ನಾನು ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ

15 ದಿನ ಕಾಯಿರಿ ನಮಗೆ ಟೋಪಿ ಹಾಕಿದವರೆಲ್ಲ ಕಾಂಗ್ರೆಸ್ ಸೇರ್ತಾರೆ. ಸಿಎಂ ಆಗಿದ್ದಾಗ ಕಷ್ಟ ಅನುಭವಿಸಿದೆ, ವರ್ಗಾವಣೆಗೂ ಶಕ್ತಿ ಕೊಡಲಿಲ್ಲ. ನಾನು ಪಕ್ಷದ ಕಚೇರಿಯಲ್ಲಿ ಕೂತು ಕಣ್ಣೀರು ಹಾಕಿದೆ. ಹೆಚ್​.ಡಿ.ದೇವೇಗೌಡರಿಗೆ ರಾಜಕೀಯ ಜೀವನ ಕೊಟ್ಟಿದ್ದು ನಾಗಮಂಗಲ. ಇಲ್ಲಿನ ಜನ ದೇವೇಗೌಡರಿಗೆ ನೋವು ಕೊಡಲ್ಲ ಅಂತಾ ಗೊತ್ತಿದೆ. ನಾನು ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ. ನಾನು ರಾಜಕೀಯಕ್ಕೆ ಬಂದ ಮೇಲೆ ಬೇರೆ ವ್ಯವಹಾರಗಳನ್ನು ಬದಿಗಿಟ್ಟೆ. ನಾನು ಸಿಎಂ ಆಗಿದ್ದಾಗ ಜನರಿಗೆ ಸಿಗ್ತಿಲ್ಲ ಅಂತಾ ಅಪಪ್ರಚಾರ ಮಾಡಿದ್ದರು ಎಂದರು.

ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ 2ನೇ ಬಾರಿ ಶಿವಾಜಿ ಪ್ರತಿಮೆ ಉದ್ಘಾಟನೆ; ಹಾಸ್ಯಾಸ್ಪದ ಎಂದ ಸಿಎಂ ಬಸವರಾಜ ಬೊಮ್ಮಾಯಿ

ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನಲ್ಲಿ ಮನೆ ಇರಲಿಲ್ಲ

ಜನರು ಹಾಗೂ ನನ್ನ ಮಧ್ಯೆ ಹುಳಿಹಿಂಡುವ ಕೆಲಸ ಮಾಡಿದರು. ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನಲ್ಲಿ ಮನೆ ಇರಲಿಲ್ಲ. ನಾನು ಬೆಂಗಳೂರಿಗೆ ಬಂದು ಜನರನ್ನು ಎಲ್ಲಿ ನೋಡಬೇಕಿತ್ತು. ಒಂದು 1 ಗಂಟೆ ವಿಶ್ರಾಂತಿಗೆ ಹೋಟೆಲ್​ಗೆ ಹೋಗುತ್ತಿದೆ. ರೈತರ ಸಾಲ‌ಮನ್ನಾ ಮಾಡುವುದಕ್ಕೂ ಯಾವುದೇ ಬೆಂಬಲ ನೀಡಲಿಲ್ಲ ಎಂದು ಕಾಂಗ್ರೆಸ್​​ ನಾಯಕರ ವಿರುದ್ಧ ಹೆಚ್​​.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಇದನ್ನೂ ಓದಿ: ಲೋಕಾ ಬಲೆಗೆ ಮಾಡಾಳ್ ಪುತ್ರ..‘ಕೈ’ಗೆ ಸಿಕ್ತು ಅಸ್ತ್ರ: ರಾಜ್ಯಾದ್ಯಂತ 2 ಗಂಟೆ ಬಂದ್​ಗೆ ಕರೆ ನೀಡಿದ ಕಾಂಗ್ರೆಸ್

ಮಂಡ್ಯದಲ್ಲಿ 7 ಕ್ಕೆ 7 ಕ್ಷೇತ್ರ ಗೆಲ್ಲಲು ಎಲ್ಲ ಶ್ರಮ ಹಾಕ್ತೀವಿ

ಬೆಂಗಳೂರಿನಲ್ಲಿ ಯಶವಂತಪುರ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ನಗರ, ದಾಸರಹಳ್ಳಿ, ರಾಜಾಜಿನಗರ, ಪದ್ಮನಾಭ ನಗರವನ್ನು ನಾವು ಗೆಲ್ಲಬಹುದು. ಇನ್ನೆರಡು ತಿಂಗಳು ನೀವು ಶ್ರಮವಹಿಸಿದ್ರೆ ಈ ಎಲ್ಲ ಕ್ಷೇತ್ರ ಗೆಲ್ಲಬಹುದು. ನೀವು ಒಂದು ಬಾರಿ 5 ವರ್ಷ ಸ್ವತಂತ್ರ ಅವಕಾಶ ನೀಡಿ. ಈ ಜೀವ ಭೂಮಿಗೆ ಹೋಗುವ ಮೊದಲು ನಿಮ್ಮ ಭವಿಷ್ಯ ಸರಿಪಡಿಸುತ್ತೇನೆ. ಇದೇ ಮಾರ್ಚ್ 26 ರಂದು ದೇವೆಗೌಡರು ಕಾರ್ಯಕ್ರಮಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡ್ತಿದೇನೆ. ರಾಮನಗರದಿಂದ ದೇವೆಗೌಡರನ್ನ ಮೆರವಣಿಗೆ ಮೂಲಕ ಕಳೆದುಕೊಂಡು ಹೋಗ್ತಿನಿ. ಚಾಮುಂಡೇಶ್ವರಿಯ ತಪ್ಪಲಿನಲ್ಲಿ 10 ಲಕ್ಷ ಜನ ಸೇರಿಸಿ ಸಮಾವೇಶ ಮಾಡುತ್ತೇವೆ. ಮಂಡ್ಯದಲ್ಲಿ 7 ಕ್ಕೆ 7 ಕ್ಷೇತ್ರ ಗೆಲ್ಲಲು ಎಲ್ಲ ಶ್ರಮ ಹಾಕುತ್ತೇವೆ. ಅದಕ್ಕಿಂತ ನಿಮ್ಮ ಶ್ರಮ ಹೆಚ್ಚಿರಬೇಕು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.