ಹೆಚ್​.ಡಿ.ಕುಮಾರಸ್ವಾಮಿ ಸಿಎಂ ಆಗುವುದು ನಿಶ್ಚಿತ: ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದ ಸಿ.ಎಂ.ಇಬ್ರಾಹಿಂ

ರಾಜ್ಯದಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಸಿಎಂ ಆಗುವುದು ನಿಶ್ಚಿತ. ಒಂದು ವೇಳೆ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ಹೆಚ್​.ಡಿ.ಕುಮಾರಸ್ವಾಮಿ ಸಿಎಂ ಆಗುವುದು ನಿಶ್ಚಿತ: ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದ ಸಿ.ಎಂ.ಇಬ್ರಾಹಿಂ
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 26, 2023 | 6:42 PM

ಕಲಬುರಗಿ: ನನ್ನ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ ರಾಜ್ಯದಲ್ಲಿ ಹೆಚ್​.ಡಿ.ಕುಮಾರಸ್ವಾಮಿ (H.D.Kumaraswamy) ಸಿಎಂ ಆಗುವುದು ನಿಶ್ಚಿತ. ಒಂದು ವೇಳೆ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಮರದ ಎರಡು ಹಕ್ಕಿಗಳು. ಕಾಂಗ್ರೆಸ್, ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ನಮ್ಮ ನಾಯಕರು ಜೈಲಿನಲ್ಲಿಲ್ಲ, ಬೇಲ್ ಮೇಲೆ ಹೊರಬಂದಿಲ್ಲ. ಬಿಜೆಪಿ, ಕಾಂಗ್ರೆಸ್​ ಎರಡೂ ಪಕ್ಷದವರು ಜನರನ್ನು ಕರೆಸುತ್ತಾರೆ. ಜನ‌ ಇದ್ದಲ್ಲಿಗೆ ನಾವು ಹೋಗುತ್ತಿದ್ದೇವೆ. ಕಾಂಗ್ರೆಸ್​ನವರು ಹವಾನಿಯಂತ್ರಿತ ಬಸ್​ನಲ್ಲಿ ತಿರುಗುತ್ತಿದ್ದಾರೆ. ಬಿಜೆಪಿ ನಾಯಕರು ಹೆಲಿಕಾಪ್ಟರ್​ ಮೂಲಕ ತಿರುಗಾಡುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿಯವರಿಗೆ ಬರೀ ಸಿಡಿಗಳು ಮಾತ್ರ ಬೇಕಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್​ಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ವ್ಯತ್ಯಾಸ ಇದೆ. ಡಿ.ಕೆ. ಶಿವಕುಮಾರ್​ ಅವರೆ ಕುಮಾರಸ್ವಾಮಿ ಸರ್ಕಾರ ಬಿಳಿಸಿದವರು ಯಾರು ಎಂದು ಪ್ರಶ್ನಿಸಿದರು. ಬಹಿರಂಗ ಚರ್ಚೆಗೆ ಬರೋದಾದ್ರೆ ಬನ್ನಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್; ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರಬಲ ಟಿಕೆಟ್ ಆಕಾಂಕ್ಷಿ ಸ್ವರೂಪ್ ಏನ್ ಹೇಳಿದ್ರು ನೋಡಿ

ಶಿವರಾಜ್ ಪಾಟೀಲ್​ರನ್ನು ಟೋಪಿವಾಲಾ ಎಂದ ಕುಮಾರಸ್ವಾಮಿ

ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಮತ್ತೆ JDS ಸೇರ್ಪಡೆ ವಿಚಾರವಾಗಿ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಶಿವರಾಜ್ ಪಾಟೀಲ್​ ಟೋಪಿವಾಲಾ. 2013ರಲ್ಲಿ ರಾಯಚೂರು ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳಿದ್ದರು. ಏನೋ ಡಾಕ್ಟರ್ ಅಂತಾ ಶಿವರಾಜ್ ಪಾಟೀಲ್​ಗೆ ಟಿಕೆಟ್ ಕೊಟ್ಟಿದ್ದೆ. ಒಮ್ಮೆ ಟೋಪಿ ಹಾಕಿ ಆಗಿದೆ. ಈಗ ಮತ್ತೊಮ್ಮೆ ಹಾಕಿಸಿಕೊಳ್ಳಲಾ ಎಂದು ವಾಗ್ದಾಳಿ ಮಾಡಿದರು.

ಪ್ರಜ್ವಲ್ ರೇವಣ್ಣ ಹೇಳಿಕೆಗೆ ಕುಮಾರಸ್ವಾಮಿ ಮಾರ್ಮಿಕ ಉತ್ತರ

ಬಿಫಾರ್ಮ್​ ಕೊಡುವುದು ಹೆಚ್.ಡಿ.ದೇವೇಗೌಡರೇ. ಆದರೆ ಬಿ ಫಾರ್ಮ್​ಗೆ ಸಹಿ ಹಾಕೋದು ಯಾರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಬಿ ಫಾರ್ಮ್​ಗೆ ಸಹಿ ಮಾಡುವುದು ಕೂಡ H.D.ದೇವೇಗೌಡರೇ. ಅಂತಿಮವಾಗಿ ಪಕ್ಷದ ಸಂಸದೀಯ ಮಂಡಳಿ ತೀರ್ಮಾನಿಸಲಿದೆ. ಪಕ್ಷದ ನಾಯಕರು ಅಂತಿಮವಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿಯದ್ದು ಏನೂ ನಡೆಯಲ್ಲ, ಅವರದ್ದೇನಿದ್ದರೂ ಮಂಡ್ಯ, ಹಾಸನ ಎಂದ ಶಾಸಕ ಯತ್ನಾಳ್

ಸಂಸದೆ ಸುಮಲತಾ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು

ತಮ್ಮ ಮೂಲಕ ಡಿಕೆಶಿ, ಹೆಚ್​ಡಿಕೆ ಪಬ್ಲಿಸಿಟಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಸಂಸದೆ ಸುಮಲತಾ ಬಗ್ಗೆ ಮಾತನಾಡುವಷ್ಟು ದೊಡ್ಡವನಾ ನಾನು. ಅಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ಮಾರ್ಮಿಕವಾಗಿ ನುಡಿದರು. ಅವರು ಆಕಾಶದಲ್ಲಿರೋರು, ನಾನು ಭೂಮಿಯಲ್ಲಿರೋನು. ಅವರ ಬಗ್ಗೆ ಮಾತನಾಡಿ ನಾನು ಪಬ್ಲಿಸಿಟಿ ತೆಗೆದುಕೊಳ್ಳಲು ಆಗುತ್ತಾ. ಅವರ ಬಗ್ಗೆ ನಾನ್ಯಾಕೆ ಚರ್ಚೆ ಮಾಡಲಿ, ಅಂತಹ ಯೋಗ್ಯತೆ ನನಗಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.