ಐಟಿ ಭಯದಿಂದ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ: ಅಕ್ರಮ ಆಸ್ತಿ ಮಾಡಿದ್ದರೆ ದಾಖಲೆ ಕೊಡಿ ಎಂದ ಸಂಕಲ್ಪ ಶೆಟ್ಟರ್

ಜಗದೀಶ್​ ಶೆಟ್ಟರ್ ಇಡಿ, ಐಟಿ ಭಯದಿಂದ ಬಿಜೆಪಿಗೆ ಹೋಗಿದ್ದಾರೆ ಎನ್ನುವ ಹೇಳಿಕೆಗೆ ಸಂಕಲ್ಪ ಅವರು ತಿರುಗೇಟು ಕೊಟ್ಟಿದ್ದು, ಶೆಟ್ಟರ್ ಅಕ್ರಮ ಆಸ್ತಿ ಮಾಡಿದ್ರೆ ದಾಖಲೆ ಕೊಡಿ ಎಂದು ಪುತ್ರ ಸಂಕಲ್ಪ ಶೆಟ್ಟರ್ ಸವಾಲ್​ ಹಾಕಿದ್ದಾರೆ.

ಐಟಿ ಭಯದಿಂದ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ: ಅಕ್ರಮ ಆಸ್ತಿ ಮಾಡಿದ್ದರೆ ದಾಖಲೆ ಕೊಡಿ ಎಂದ ಸಂಕಲ್ಪ ಶೆಟ್ಟರ್
ಸಂಕಲ್ಪ ಶೆಟ್ಟರ್​
Updated By: ಕಿರಣ್ ಹನುಮಂತ್​ ಮಾದಾರ್

Updated on: Jan 26, 2024 | 4:12 PM

ಹುಬ್ಬಳ್ಳಿ, ಜ.26: ಜಗದೀಶ್ ಶೆಟ್ಟರ್(Jagadish Shettar) ನಮ್ಮ ಮನೆಗೆ ಮರಳಿ ಬಂದಿರುವುದು ಬಹಳ ಖುಷಿಯಾಗಿದೆ ಎಂದು ಸಂಕಲ್ಪ ಶೆಟ್ಟರ್(Sankalp Shettar) ಹೇಳಿದ್ದಾರೆ. ಹುಬ್ಬಳ್ಳಿ(Hubballi)ಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಶೆಟ್ಟರ್ ಇಡಿ, ಐಟಿ ಭಯದಿಂದ ಬಿಜೆಪಿಗೆ ಹೋಗಿದ್ದಾರೆ ಎನ್ನುವ ಹೇಳಿಕೆಗೆ ಸಂಕಲ್ಪ ಅವರು ತಿರುಗೇಟು ಕೊಟ್ಟಿದ್ದು, ಜಗದೀಶ್ ಶೆಟ್ಟರ್ ಅಕ್ರಮ ಆಸ್ತಿ ಮಾಡಿದ್ರೆ ದಾಖಲೆ ಕೊಡಿ ಎಂದಿದ್ದಾರೆ.

ಕಾರ್ಯಕರ್ತರು, ನಾಯಕರ ಒತ್ತಡಕ್ಕೆ ಬಿಜೆಪಿಗೆ ಸೇರ್ಪಡೆ

ಯಾವುದೇ ಕಂಡೀಷನ್ ಹಾಕದೆ ಜಗದೀಶ್ ಶೆಟ್ಟರ್ ಬಿಜೆಪಿ ಸೇರಿದ್ದಾರೆ. ಅವರು ವಾಪಸ್ ಬಿಜೆಪಿ ಸೇರಬೇಕು ಎಂದು ಕಾರ್ಯಕರ್ತರು ಹಾಗೂ ಅನೇಕ ನಾಯಕರ ಒತ್ತಡ ಇತ್ತು. ನಮ್ಮ ಮೇಲೆ ಬಹಳ ಒತ್ತಡ ಬಂದಿರೋದಕ್ಕೆ ಬಿಜೆಪಿ ಸೇರಿದ್ದಾರೆ.  ಇನ್ನು ಲೋಕಸಭೆ ಟಿಕೆಟ್ ವಿಚಾರವೂ ಚರ್ಚೆಯಾಗಿಲ್ಲ ಎಂದರು.

ಇದನ್ನೂ ಓದಿ:ಮುನಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ವಾಪಸ್ಸು ಕರೆತಂದ ಹೈಕಮಾಂಡ್ ತೀರ್ಪನ್ನು ಸ್ವಾಗತಿಸುತ್ತೇನೆ: ವಿ ಸೋಮಣ್ಣ

ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎಂಬ ಆಶಯದಿಂದ ಬಿಜೆಪಿ ಸೇರಿದ್ದೇನೆ-ಶೆಟ್ಟರ್​

ವಿಧಾನಸಭೆ ಚುನಾವಣೆ ವೇಳೆ ಕೆಲವು ಘಟನೆ ನಡೆಯಿತು, ಅದರಿಂದಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದೆ ಎಂದು ಜಗದೀಶ್​ ಶೆಟ್ಟರ್​ ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ‘ಎಲ್ಲಾ ನಾಯಕರು ನಿಮಗೆ ಸೂಕ್ತ ಸ್ಥಾನಮಾನ, ಗೌರವ ಕೊಡುತ್ತೇವೆ ಎಂದಿದ್ದಾರೆ. ಜೊತೆಗೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎಂಬ ಆಶಯದಿಂದ ಬಿಜೆಪಿ ಸೇರಿದ್ದೇನೆ. ಮೋದಿ ಮತ್ತೆ ಪ್ರಧಾನಿಯಾಗಲು ನಾನು ಅಳಿಲು ಸೇವೆ ಸಲ್ಲಿಸಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ