ಕೋಲಾರದ ಇಬ್ಬರು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ; ಯಾರ‍್ಯಾರಿಗೆ?
ನಿಗಮ ಮಂಡಳಿ ನೇಮಕ ವಿಚಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹಲವು ಸುತ್ತುಗಳ ಸಮಾಲೋಚನೆ, ಸಭೆಗಳ ಬಳಿಕವೂ ಪಟ್ಟಿ ಅಂತಿಮಗೊಳಿಸಲಾಗಿರಲಿಲ್ಲ. ಇದೀಗ ಕೋಲಾರ(Kolar)ದ ಇಬ್ಬರು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಕೋಲಾರ, ಜ.26: ಕೋಲಾರ(Kolar)ದ ಇಬ್ಬರು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಬಂಗಾರಪೇಟೆ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿರುವ ಎಸ್.ಎನ್.ನಾರಾಯಣಸ್ವಾಮಿ(SN Narayanaswamy) ಕೆ.ಯು.ಡಿ.ಐ.ಸಿ ಅಂಡ್ ಎಫ್.ಸಿ ಅಧ್ಯಕ್ಷ ಸ್ಥಾನ ಹಾಗೂ ಕೆಜಿಎಫ್ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕಿಯಾಗಿದ್ದ ರೂಪಕಲಾ(Roopkala) ಅವರಿಗೆ ಕರಕುಶಲ ಅಭಿವೃದ್ದಿ ಮಂಡಳಿ ಅಧ್ಯಕ್ಷೆಯಾಗಿ ಆದೇಶಿಸಲಾಗಿದೆ.
ನಿಗಮ ಮಂಡಳಿ ನೇಮಕ ವಿಚಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹಲವು ಸುತ್ತುಗಳ ಸಮಾಲೋಚನೆ, ಸಭೆಗಳ ಬಳಿಕವೂ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. ಜೊತೆಗೆ ನಿಗಮ ಮಂಡಳಿ ನೇಮಕ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ನಡುವೆ ಸಂಘರ್ಷ ಮಾರ್ಪಟ್ಟಿತ್ತು. ಇದೀಗ ಕೋಲಾರದ ಇಬ್ಬರು ಶಾಸಕರನ್ನು ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ:ನಿಗಮ ಮಂಡಳಿ ನೇಮಕ ಜಟಾಪಟಿ; ಕೋಳಿಯನ್ನು ಕೇಳಿ ಕೊಯ್ಯುಲು ಆಗುತ್ತಾ ಎಂದು ಪರಮೇಶ್ವರ್ಗೆ ಟಾಂಗ್ ಕೊಟ್ಟ ವೆಂಕಟೇಶ್
ಇನ್ನು ನಿಗಮ ಮಂಡಳಿ ನೇಮಕಾತಿಗಾಗಿ ಹೈಕಮಾಂಡ್ ಹಾಗೂ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಧ್ಯೆ ಹಗ್ಗಜಗ್ಗಾಟ ನಡೆದಿತ್ತು. ಹೈಕಮಾಂಡ್ಗೆ ಕಳುಹಿಸದ ಹೆಸರುಗಳು ನಿಗಮ ಮಂಡಳಿ ನೇಮಕಾತಿ ಪಟ್ಟಿಯಲ್ಲಿ ಎಂಟ್ರಿಯಾಗಿದ್ದು, ಇದು ಸಿಎಂ, ಡಿಸಿಎಂಗೆ ಶಾಕ್ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಅಂಬಿಗರ ಚೌಡಯ್ಯ ಕಾರ್ಯಕ್ರಮಕ್ಕೆ ಹೋಗದೇ ತಾಜ್ ವೆಸ್ಟ್ ಎಂಡ್ನಲ್ಲಿ ಸೇರಿ ಚರ್ಚಿಸಿದ್ದರು. ಇದೆಲ್ಲದರ ನಡುವೆ ಇದೀಗ ಬಂಗಾರಪೇಟೆ ಹಾಗೂ ಕೆಜಿಎಫ್ ಶಾಸಕರಿಗೆ ಅಧ್ಯಕ್ಷ ಸ್ಥಾನ ಕೊಡಲಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Fri, 26 January 24