Karnataka By Election Results 2021 Date: ಹಾನಗಲ್ ಮತ್ತು ಸಿಂದಗಿ ಅಸೆಂಬ್ಲಿ ಉಪಚುನಾವಣೆ ಫಲಿತಾಂಶ ಇಂದು

| Updated By: ಸಾಧು ಶ್ರೀನಾಥ್​

Updated on: Nov 02, 2021 | 9:52 AM

ಸಿಂದಗಿ, ಹಾನಗಲ್ ಉಪಚುನಾವಣೆ ಫಲಿತಾಂಶ 2021: ವಿಜೇತ ಅಭ್ಯರ್ಥಿ ಚುನಾವಣಾ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಲೂ ಷರತ್ತು‌ ವಿಧಿಸಲಾಗಿದೆ. ವಿಜೇತ ಅಭ್ಯರ್ಥಿಯೊಂದಿಗೆ ಪ್ರಮಾಣಪತ್ರ ಪಡೆಯಲು ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

Karnataka By Election Results 2021 Date: ಹಾನಗಲ್ ಮತ್ತು ಸಿಂದಗಿ ಅಸೆಂಬ್ಲಿ ಉಪಚುನಾವಣೆ ಫಲಿತಾಂಶ ಇಂದು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ಇಂದು (ನವೆಂಬರ್ 2) ನಡೆದಿದೆ. ಮತ ಎಣಿಕೆಯ ಬಳಿಕ ಭಾರತೀಯ ಚುನಾವಣಾ ಆಯೋಗ ಕೆಲ ಮಾರ್ಗಸೂಚಿಗಳನ್ನು ವಿಧಿಸಿದೆ. ಅದರಂತೆ ಮತ ಎಣಿಕೆಯಲ್ಲಿ ವಿಜೇತರಾದ ಅಭ್ಯರ್ಥಿ ಹಾಗೂ ಬೆಂಬಲಿಗರು ವಿಜಯೋತ್ಸವವನ್ನು ಆಚರಿಸಲು ಅವಕಾಶ ಇರುವುದಿಲ್ಲ. ವಿಜೇತ ಅಭ್ಯರ್ಥಿ ಚುನಾವಣಾ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಲೂ ಷರತ್ತು‌ ವಿಧಿಸಲಾಗಿದೆ. ವಿಜೇತ ಅಭ್ಯರ್ಥಿಯೊಂದಿಗೆ ಪ್ರಮಾಣಪತ್ರ ಪಡೆಯಲು ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಬಗ್ಗೆ ಭಾರತ ಚುನಾವಣಾ ಆಯೋಗದಿಂದ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ.

ವಿಜಯಪುರದ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಈಗ ನಡೆದಿದೆ. ವಿಜಯಪುರ ನಗರದ ಸೈನಿಕ ಶಾಲೆಯ ಆವರಣದ ಒಡೆಯರ್ ಹೌಸ್​ನಲ್ಲಿ ಮತ ಎಣಿಕೆ ನಡೆದಿದೆ.

ಕರ್ನಾಟಕ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆದಿತ್ತು. ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ಮತದಾನ ನಡೆದಿತ್ತು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಗೆಲ್ಲುವ ಪಣತೊಟ್ಟು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಪ್ರಲ್ಹಾದ್ ಜೋಶಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರಚಾರ ಕಣದಲ್ಲಿ ಪಾಲ್ಗೊಂಡಿದ್ದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪರವಾಗಿ ಹಾಗೂ ಜೆಡಿಎಸ್ ಪರವಾಗಿ ಹೆಚ್​.ಡಿ. ಕುಮಾರಸ್ವಾಮಿ, ಹೆಚ್.ಡಿ. ದೇವೇಗೌಡ ಪ್ರಚಾರ ಮಾಡಿದ್ದರು.

ಇದನ್ನೂ ಓದಿ: ಉಪಚುನಾವಣೆಯಲ್ಲಿ ಗೆಲುವು ಯಾರಿಗೆ? ವಕ್ತಾರರ ಅಭಿಪ್ರಾಯಗಳೇನು?

ಇದನ್ನೂ ಓದಿ: Karnataka Byelections: ಹಾನಗಲ್ ಹಾಗೂ ಸಿಂದಗಿಯಲ್ಲಿ ಮತದಾನ; ಚುನಾವಣೆ ಕುರಿತ ಮಾಹಿತಿ ಇಲ್ಲಿದೆ

Published On - 6:40 pm, Mon, 1 November 21