ಉಪಚುನಾವಣೆಯಲ್ಲಿ ಗೆಲುವು ಯಾರಿಗೆ? ವಕ್ತಾರರ ಅಭಿಪ್ರಾಯಗಳೇನು?

ಸದ್ಯ ಫಲಿತಾಂಶಕ್ಕೆ ಕಾಯುತ್ತಿರುವ ಬಿಜೆಪಿ ಯಾವ ವಿಶ್ವಾಸವನ್ನು ಹೊಂದಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಛಲವಾದಿ, 24 ಗಂಟೆಗಳಲ್ಲಿ ಫಲಿತಾಂಶ ಸಿಗಲಿದೆ.

ಉಪಚುನಾವಣೆಯಲ್ಲಿ ಗೆಲುವು ಯಾರಿಗೆ? ವಕ್ತಾರರ ಅಭಿಪ್ರಾಯಗಳೇನು?
ರಮೇಶ್ ಬಾಬು, ಕೋನಾರೆಡ್ಡಿ ಮತ್ತು ಛಲವಾದಿ ನಾರಾಯಣಸ್ವಾಮಿ
Follow us
TV9 Web
| Updated By: sandhya thejappa

Updated on: Nov 01, 2021 | 5:15 PM

ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮೂರು ಪಕ್ಷದ ನಾಯಕರು ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಹೊಂದಿದ್ದಾರೆ. ಆದರೆ ಫಲಿತಾಂಶ ಬರುವವರೆಗೆ ಯಾವ ಪಕ್ಷಕ್ಕೆ ಗೆಲುವು ಸಿಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ನಾಳೆ (ನ.2) ಉಪಚುನಾವಣೆಗೆ ನಡೆದ ಮತಗಳ ಎಣಿಕೆ ನಡೆಯಲಿದ್ದು, ಈ ಬಗ್ಗೆ ಇಂದಿನ (ನ.1) ಡಿಜಿಟಲ್ ಲೈವ್​ನಲ್ಲಿ ಚರ್ಚಿಸಲಾಗಿದೆ.

ಆ್ಯಂಕರ್ ಹರಿಪ್ರಸಾದ್ ಈ ಚರ್ಚೆಯನ್ನು ನಡೆಸಿಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ ಹಿರಿಯ ಸಹಾಯಕ ಸಂಪಾದಕರಾದ ಕೆ ಶಿವಕುಮಾರ್, ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಜೆಡಿಎಸ್ ವಕ್ತಾರ ಕೋನಾರೆಡ್ಡಿ ಭಾಗವಹಿಸಿದ್ದರು.

ಚರ್ಚೆಯ ಮೊದಲಿನಲ್ಲಿ ಆ್ಯಂಕರ್ ಹರಿಪ್ರಸಾದ್ ಬಿಜೆಪಿ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿಯನ್ನು ಮಾತನಾಡಿಸಿದರು. ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲು ತಯಾರಿ ನಡೆಸಿಕೊಂಡಿತ್ತು. ಸದ್ಯ ಫಲಿತಾಂಶಕ್ಕೆ ಕಾಯುತ್ತಿರುವ ಬಿಜೆಪಿ ಯಾವ ವಿಶ್ವಾಸವನ್ನು ಹೊಂದಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಛಲವಾದಿ, 24 ಗಂಟೆಗಳಲ್ಲಿ ಫಲಿತಾಂಶ ಸಿಗಲಿದೆ. ಜನರನ್ನು ಓಲೈಸಲು ಯಾವ ರೀತಿ ಬೇಕಾದರೂ ಮಾತನಾಡಬಹುದು. ಆದರೆ ಈಗಾಗಲೇ ಜನರು ಮತದಾನ ಮಾಡಿದ್ದಾರೆ. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಈ ಬಗ್ಗೆ ಸಂದೇಹ ಇಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.

ಚರ್ಚೆಯಲ್ಲಿ ಮುಂದುವರಿದು ಮಾತನಾಡಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಚುನಾವಣೆಗಳು ಸರ್ಕಾರಕ್ಕೆ ಪೂರಕವಾಗಿರುತ್ತದೆ. ಹಾನಗಲ್ ಕ್ಷೇತ್ರ ಬಹಳಷ್ಟು ಪ್ರತಿಷ್ಠೆ ಚುನಾವಣೆಯಾಗಿದೆ. 40 ವರ್ಷಗಳ ನನ್ನ ರಾಜಕೀಯ ಅನುಭವದಲ್ಲಿ ಯಾವ ಮುಖ್ಯಮಂತ್ರಿ ಇಷ್ಟು ಅಧೈರ್ಯವಂತರಾಗಿ ಉಪಚುನಾವಣೆಯಲ್ಲಿ ಕೂತು ಚುನಾವಣೆ ಮಾಡಿರುವುದು ನೋಡಿರಲಿಲ್ಲ ಎಂದರು.

ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಹೇಗೆ ಗೆಲುವು ಸಾಧಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜೆಡಿಎಸ್ ವಕ್ತಾರ ಕೋನಾರೆಡ್ಡಿ, ಸೋಲು- ಗೆಲುವಿನ ಬಗ್ಗೆ ಫಲಿತಾಂಶ ಬಳಿಕ ಹೇಳುತ್ತೇವೆ. ಫಲಿತಾಂಶದ ಮೊದಲೆ ಹೇಳಲ್ಲ. ಆದರೆ ಕುಮಾರಸ್ವಾಮಿಗೆ ಈ ಮೊದಲೆ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಅಂತ ತಿಳಿಸಿದ್ದೆ. 2020 ಮಿಷನ್ 123 ಹೋಗೋಣ ಅಂತ ಸ್ಪಷ್ಟವಾಗಿ ಹೇಳಿದ್ದೆ. ಆದರೆ ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಸ್ಪರ್ಧಿಸುವಂತಹ ಅನಿವಾರ್ಯತೆ ಇತ್ತು ಎಂದು ಅಭಿಪ್ರಾಯಪಟ್ಟರು.

ಉಪಚುನಾವಣೆಯಲ್ಲಿ ಶೇ.95ರಷ್ಟು ಆಡಳಿಯ ಪಕ್ಷ ಗೆಲುವು ಸಾಧಿಸುತ್ತದೆ. ಆದರೆ ಜನರು ಜನರಲ್ ಚುನಾವಣೆಯಲ್ಲಿ ಕೊಡುವ ಫಲಿತಾಂವೇ ಬೇರೆ. ಬೈ ಎಲೆಕ್ಷನ್​ನಲ್ಲಿ ಕೊಡುವ ಫಲಿತಾಂಶವೇ ಬೇರೆ ಅಂತ ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ಹಿರಿಯ ಸಹಾಯಕ ಸಂಪಾದಕರಾದ ಕೆ ಶಿವಕುಮಾರ್ ಹೇಳಿದರು. ಎಲ್ಲಾ ಬೈ ಎಲೆಕ್ಷನ್​ಗಳಲ್ಲೂ ಮುಖ್ಯಮಂತ್ರಿಗಳು ಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳುತ್ತಾರೆ. ಇದು ಅವರ ಮೊದಲ ಸ್ಲೋಗನ್ ಆಗಿರುತ್ತದೆ. ಈ ಮೂಲಕ ಗೆಲುವು ಸಾಧಿಸುತ್ತ ಬಂದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ

T20 World Cup 2021: ಸೋಲ್ತಾರೆ…ಇದೆಂಥಾ ಸೋಲು…ಟೀಮ್ ಇಂಡಿಯಾ ಪ್ರದರ್ಶನಕ್ಕೆ ಸೆಹ್ವಾಗ್ ಬೇಸರ

Rajya Sabha Bypolls: ಖಾಲಿ ಇರುವ ಎರಡು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ