ಬೈ ಎಲೆಕ್ಷನ್ ಟೆನ್ಶನ್‌ ನಡುವೆ ಹೆಚ್​ಡಿ ದೇವೇಗೌಡರು ದೆಹಲಿಯತ್ತ, ಸಿಎಂ ಬಸವರಾಜ ಬೊಮ್ಮಾಯಿ ಮಂಡ್ಯದತ್ತ ಪ್ರಯಾಣ!

ಬೆಂಗಳೂರು: ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ಮತ ಎಣಿಕೆ ನಡೆದಿದ್ದು, ಫಲಿತಾಂಶ ಕುತೂಃಲ ಕೆರಳಿಸಿದೆ. ಫಲಿತಾಂಶ ಹಾವು ಏಣಿಯಂತೆ ಸರಿದಾಡುತ್ತಿದ್ದು, ರಾಜಕೀಯ ನಾಯಕರು ಭಾರೀ ಟೆನ್ಶನ್​ನಲ್ಲಿದ್ದಾರೆ. ಈ ನಡುವೆ ಜೆಡಿಎಸ್ ನೇತಾರ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ದಿಢೀರನೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರ್ವನಿಗದಿಯಂತೆ ಮಂಡ್ಯದತ್ತ ಪ್ರಯಾಣ ಮಾಡಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡ ದಿಢೀರನೆ ಬೆಂಗಳೂರಿನಿಂದ ದೆಹಲಿಗೆ ಇಂದು ಬೆಳಗ್ಗೆ 9 ಗಂಟೆಗೆ ತೆರಳಿದ್ದಾರೆ. ರಾತ್ರಿ ವೇಳೆಗೆ ದೇವೆಗೌಡ್ರು […]

ಬೈ ಎಲೆಕ್ಷನ್ ಟೆನ್ಶನ್‌ ನಡುವೆ ಹೆಚ್​ಡಿ ದೇವೇಗೌಡರು ದೆಹಲಿಯತ್ತ, ಸಿಎಂ ಬಸವರಾಜ ಬೊಮ್ಮಾಯಿ ಮಂಡ್ಯದತ್ತ ಪ್ರಯಾಣ!
ಬೈ ಎಲೆಕ್ಷನ್ ಟೆನ್ಶನ್‌ ನಡುವೆ ದೇವೇಗೌಡರು ದೆಹಲಿಯತ್ತ, ಸಿಎಂ ಬೊಮ್ಮಾಯಿ ಮಂಡ್ಯದತ್ತ ಪ್ರಯಾಣ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 02, 2021 | 10:21 AM

ಬೆಂಗಳೂರು: ರಾಜ್ಯದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ಮತ ಎಣಿಕೆ ನಡೆದಿದ್ದು, ಫಲಿತಾಂಶ ಕುತೂಃಲ ಕೆರಳಿಸಿದೆ. ಫಲಿತಾಂಶ ಹಾವು ಏಣಿಯಂತೆ ಸರಿದಾಡುತ್ತಿದ್ದು, ರಾಜಕೀಯ ನಾಯಕರು ಭಾರೀ ಟೆನ್ಶನ್​ನಲ್ಲಿದ್ದಾರೆ. ಈ ನಡುವೆ ಜೆಡಿಎಸ್ ನೇತಾರ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ದಿಢೀರನೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರ್ವನಿಗದಿಯಂತೆ ಮಂಡ್ಯದತ್ತ ಪ್ರಯಾಣ ಮಾಡಿದ್ದಾರೆ.

ಮಾಜಿ ಪ್ರಧಾನಿ ದೇವೆಗೌಡ ದಿಢೀರನೆ ಬೆಂಗಳೂರಿನಿಂದ ದೆಹಲಿಗೆ ಇಂದು ಬೆಳಗ್ಗೆ 9 ಗಂಟೆಗೆ ತೆರಳಿದ್ದಾರೆ. ರಾತ್ರಿ ವೇಳೆಗೆ ದೇವೆಗೌಡ್ರು ಬೆಂಗಳೂರಿಗೆ ವಾಪಸು ಆಗಲಿದ್ದಾರೆ. ಹಾನಗಲ್​ ಅಸೆಂಬ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಹೀನಾಯ ಸೋಲಿನತ್ತ ಮುಖ ಮಾಡಿದೆ.

ಇನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಂದಗಿ ಮತ್ತು ಹಾನಗಲ್ ಅಸೆಂಬ್ಲಿ ಆರಂಭಿಕ ಫಲಿತಾಂಶಗಳು ಹಾವು ಏಣಿ ಆಟದಂತೆ ನಡೆದಿದ್ದು, ಬೆಳಗ್ಗೆಯಿಂದ ಮನೆಯಲ್ಲಿ ಟೆನ್ಶನ್​ನಲ್ಲಿಯೇ ಟಿವಿ ವರದಿ ನೋಡುತ್ತಿದ್ದರು.

ಸಿಎಂ ಬೊಮ್ಮಾಯಿ ಅವರು ಇವತ್ತು ಮಧ್ಯಾಹ್ನದ ವೇಳೆಗೆ ಮೊದಲು ಕಬಿನಿ ಜಲಾಶಯಕ್ಕೆ ಬಾಗಿನ ಮತ್ತು ಆ ನಂತರ ಕೆಆರ್​ಎಸ್ ಅಣೆಕಟ್ಟೆ ಬಳಿ ಕಾವೇರಿ ತಾಯಿಗೆ ಬಾಗಿನ ಕೊಟ್ಟು ಬರುತ್ತೇನೆ ಎಂದು ಇದೀಗ ಬೆಂಗಳೂರಿನಿಂದ ಹೊರಟಿದ್ದಾರೆ.

ಚುನಾವಣಾ ಫಲಿತಾಂಶ ತಾಜಾ ಏನು? (10.10 ರ ವೇಳೆಗೆ): ಸಿಂದಗಿ ಉಪಚುನಾವಣೆ ಫಲಿತಾಂಶದಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿರುವ ಬಿಜೆಪಿ ಮೊದಲ, ಎರಡನೇ, ಮೂರನೇ, ನಾಲ್ಕನೇ ಹಾಗೂ ಐದನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ವಿವರ, ನಾಲ್ಕನೇ ಸುತ್ತಿನಲ್ಲಿ ಪಡೆದ ಮತಗಳ ವಿವರ ಹೀಗಿದೆ: ಬಿಜೆಪಿ-17,769, ಕಾಂಗ್ರೆಸ್‌-18,019, ಜೆಡಿಎಸ್-149.

ತಾಜಾ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್​ ಮಾಡಿ:

Karnataka ByElection Results 2021 Counting LIVE: ಇಂದು ಹಾನಗಲ್​, ಸಿಂದಗಿ ಉಪಚುನಾವಣೆ ಫಲಿತಾಂಶ

(sindagi hangal assembly by election result cm basavaraj bommai leaves for mandya and hd devegowda leaves for delhi)

Published On - 10:12 am, Tue, 2 November 21

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್