T20 World Cup 2021: ಸೋಲ್ತಾರೆ…ಇದೆಂಥಾ ಸೋಲು…ಟೀಮ್ ಇಂಡಿಯಾ ಪ್ರದರ್ಶನಕ್ಕೆ ಸೆಹ್ವಾಗ್ ಬೇಸರ
ವಿರಾಟ್ ಕೊಹ್ಲಿ ಪ್ಲೇಯಿಂಗ್ 11 ನಲ್ಲಿ ಒಂದೆರೆಡು ಬದಲಾವಣೆ ಮಾಡಿಕೊಂಡರು. ತಂಡದಲ್ಲಿ ಬದಲಾವಣೆಯಾದರೂ ಅವರ ಅದೃಷ್ಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನ (T20 World Cup 2021) 28ನೇ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ (India vs New Zealand) ವಿರುದ್ದ ಹೀನಾಯವಾಗಿ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 110 ರನ್ಗಳು ಮಾತ್ರ. ಈ ಸಾಧಾರಣ ಸವಾಲನ್ನು ನ್ಯೂಜಿಲೆಂಡ್ 14.3 ಓವರ್ಗಳಲ್ಲಿ ಚೇಸ್ ಮಾಡಿತು. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿದೆ. ಇತ್ತ ಟೀಮ್ ಇಂಡಿಯಾದ ಈ ನಿರಾಶಾದಾಯಕ ಪ್ರದರ್ಶನದ ಬಗ್ಗೆ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag) ಬೇಸರ ವ್ಯಕ್ತಪಡಿಸಿದ್ದಾರೆ.
ಸೋಲುವುದು ಆಟದ ಒಂದು ಭಾಗ. ಆದರೆ ಭಾರತ ಹೋರಾಡದೇ ಸೋತಿರುವುದು ನಿರಾಶೆಯನ್ನುಂಟು ಮಾಡಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ನಾನು ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ ಎಂದು ತಿಳಿಸಿರುವ ಸೆಹ್ವಾಗ್, ಇಂತಹ ಸೋಲನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.
ನಮ್ಮ ಆಟಗಾರರಲ್ಲಿ ಗೆಲ್ಲಬೇಕೆಂಬ ಛಲವೇ ಕಾಣಿಸಿರಲಿಲ್ಲ. ಪಂದ್ಯಗಳಲ್ಲಿ ಸೋಲುವುದು ಸಹಜ. ಆದರೆ ಟೀಮ್ ಇಂಡಿಯಾ ನಿರ್ಣಾಯಕ ಪಂದ್ಯಗಳಲ್ಲಿ ಶರಣಾಗತಿಯಾಗಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ ನಾವು ಒಮ್ಮೆ ವಿಶ್ವ ಕ್ರಿಕೆಟ್ನಲ್ಲಿ ಪ್ರಾಬಲ್ಯ ಹೊಂದಿದ್ದೆವು ಎಂಬುದನ್ನು ತೋರಿಸುತ್ತಿಲ್ಲ ಎಂದು ಸೆಹ್ವಾಗ್ ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ತಂಡದಲ್ಲಿನ ಬದಲಾವಣೆ ಬಗ್ಗೆ ಮಾತನಾಡಿರುವ ಸೆಹ್ವಾಗ್, ವಿರಾಟ್ ಕೊಹ್ಲಿ ಪ್ಲೇಯಿಂಗ್ 11 ನಲ್ಲಿ ಒಂದೆರೆಡು ಬದಲಾವಣೆ ಮಾಡಿಕೊಂಡರು. ತಂಡದಲ್ಲಿ ಬದಲಾವಣೆಯಾದರೂ ಅವರ ಅದೃಷ್ಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಏಕೆಂದರೆ ನಿರ್ಣಾಯಕ ಪಂದ್ಯದಲ್ಲೂ ಅವರು ಟಾಸ್ ಸೋತರು. ಟಾಸ್ ಗೆಲ್ಲಲು 50-50 ಚಾನ್ಸ್ ಇರುತ್ತವೆ. ಆದರೆ ಕೊಹ್ಲಿಯ ಟಾಸ್ ಗೆಲ್ಲುವ ಸಂಭವನೀಯತೆಯು ನಿರಾಶಾದಾಯಕ ಹಂತವಾಗಿದೆ ಎಂದು ವೀರೇಂದ್ರ ಸೆಹ್ವಾಗ್ ಹೇಳಿದರು,
ಭಾರತ ತಂಡದ ನ್ಯೂಜಿಲೆಂಡ್ ವಿರುದ್ದ 2 ಬದಲಾವಣೆಯೊಂದಿಗೆ ಆಡಿದರೂ ಪಂದ್ಯದ ಫಲಿತಾಂಶ ಮಾತ್ರ ಬದಲಾವಣೆಯಾಗಿಲ್ಲ. ತಂಡದ ಅದೃಷ್ಟದಲ್ಲೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಒಟ್ಟಾರೆ ಟೀಮ್ ಇಂಡಿಯಾದ ಪ್ರದರ್ಶನ ತುಂಬಾ ನಿರಾಶದಾಯಕವಾಗಿತ್ತು ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
(Virender Sehwag utterly disappointed with India’s performance)