ಇದೇ ಅವಧಿಗೆ ಪರಮೇಶ್ವರ್ ಮುಖ್ಯಮಂತ್ರಿ ಆಗಲಿ: ಸಿಎಂ ಪರಮಾಪ್ತ ಕೆ.ಎನ್. ರಾಜಣ್ಣ ಹೇಳಿಕೆ

ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ಮೇಲೆ ಆಡಳಿತ ಪಕ್ಷ ಕಾಂಗ್ರೆಸ್​ನಲ್ಲಿ ಹಲವರ ಕಣ್ಣಿದೆ. ಸಿದ್ದರಾಮಯ್ಯ ಅವರು ಎರಡೂವರೆ ವರ್ಷಕ್ಕೆ ಮಾತ್ರ ಸಿಎಂ ಆಗಿರಲಿದ್ದಾರೆ, ನಂತರದ ಅವಧಿಗೆ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ಸಿಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ನಡುವೆ, ಗೃಹಸಚಿವ ಪರಮೇಶ್ವರ್ ಅವರು ಕೂಡ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದು, ಸಚಿವ ಕೆಎನ್ ರಾಜಣ್ಣ ಅವರು ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದಾರೆ.

ಇದೇ ಅವಧಿಗೆ ಪರಮೇಶ್ವರ್ ಮುಖ್ಯಮಂತ್ರಿ ಆಗಲಿ: ಸಿಎಂ ಪರಮಾಪ್ತ ಕೆ.ಎನ್. ರಾಜಣ್ಣ ಹೇಳಿಕೆ
ಇದೇ ಅವಧಿಗೆ ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲಿ ಎಂದ ಸಚಿವ ಕೆಎನ್ ರಾಜಣ್ಣ
Follow us
TV9 Web
| Updated By: Rakesh Nayak Manchi

Updated on:Aug 20, 2023 | 3:38 PM

ತುಮಕೂರು, ಆಗಸ್ಟ್ 20: ಸಿದ್ದರಾಮಯ್ಯ (Siddaramaiah) ಅವರು ಎರಡೂವರೆ ವರ್ಷಕ್ಕೆ ಮಾತ್ರ ಸಿಎಂ ಆಗಿರಲಿದ್ದಾರೆ, ನಂತರದ ಅವಧಿಗೆ ಡಿ.ಕೆ. ಶಿವಕುಮಾರ್ (D.K. Shivakumar) ಅವರಿಗೆ ಸಿಎಂ ಪಟ್ಟ ಸಿಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ನಡುವೆ ಗೃಹಸಚಿವ ಡಾ.ಜಿ.ಪರಮೇಶ್ವರ್ (Dr. G. Parameshwara) ಅವರು ಮುಖ್ಯಮಂತ್ರಿ ಆಗಲಿ ಎಂಬ ಅಭಿಪ್ರಾಯಗಳನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದಾಮಯ್ಯ ಅವರ ಪರಮಾಪ್ತ, ಸಹಕಾರ ಸಚಿವ ಕೆ.ಎನ್.ರಾಜಣ್ಣ (K.N.Rajanna) ಕೂಡ ಒಬ್ಬರು.

ಮುಖ್ಯಮಂತ್ರಿ ಆಗುವ ಆಸೆ ಇದೆಯೇ ಅಂತಾ ಕಾರ್ಯಕ್ರವೊಂದರಲ್ಲಿ ರಾಜಣ್ಣ ಕೇಳಿದಾಗ ಇದೆ ಎಂದು ಪರಮೇಶ್ವರ್ ತಲೆಯಲ್ಲಾಡಿಸಿದ್ದಾರೆ. ನಮ್ಮ ಜಿಲ್ಲೆಯಿಂದ ಯಾರಾದರು ಮುಖ್ಯಮಂತ್ರಿಯಾದರೆ, ನಾವೆಲ್ಲರೂ ಮುಖ್ಯಮಂತ್ರಿ ಆದ ಹಾಗೆ. ನೋಡೊಣ ಇದೇ ಅವಧಿಯಲ್ಲಿ ಪರಮೇಶ್ವರ್ ಮುಖ್ಯಮಂತ್ರಿ ಆಗಲಿ ಎಂದು ರಾಜಣ್ಣ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ನಂತರ ಕಾಂಗ್ರೆಸ್​ನಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬಹುದೇ ಅಥವಾ ಡಿಕೆ ಶಿವಕುಮಾರ್ ಆಗಬಹುದೆ ಎಂಬ ಭಾರೀ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಕೆಎನ್ ರಾಜಣ್ಣ ಅವರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದರು.

ತುಮಕೂರಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಣ್ಣ, ಚುನಾವಣೆ ಬರುತ್ತದೆ, ಹೋಗುತ್ತದೆ. ಅದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಬೇಕಿಲ್ಲ. ಇವತ್ತಿನ ದಿನದಲ್ಲಿ ಚುನಾವಣೆ ಸ್ಥಿತಿ ತೀರಾ ಹದಗೆಟ್ಟಿದೆ. ಕೆಲಸ ಮಾಡಿದವರೆಲ್ಲ ಗೆಲ್ಲುತ್ತಾರೆ ಅನ್ನೋ ಸ್ಥಿತಿ ಈಗ ಇಲ್ಲ. ಇವತ್ತಿನ ಸ್ಥಿತಿ ಹೇಗಿದೆ ಅಂದರೆ ಮಹಾತ್ಮಾ ಗಾಂಧಿಯೇ ಬಂದು ಚುನಾವಣೆಗೆ ನಿಂತರೂ ಸೋತು ಹೋಗುತ್ತಾರೆ. ಹೀಗಾಗಿ ಮೊದಲು ನೀವು ಪ್ರಾಮಾಣಿಕರಾಗಬೇಕು. ನೀವು ಪ್ರಾಮಾಣಿಕರಾದರೆ, ನಾವು ಹೇಗೆ ಅಪ್ರಾಮಾಣಿಕರಾಗುತ್ತೇವೆ ಎಂದರು.

ಇದನ್ನೂ ಓದಿ: ಎಐಸಿಸಿ ಅಧ್ಯಕ್ಷರಿಗೆ ನಾನು ಪತ್ರ ಬರೆದಿದ್ದು ನಿಜ: ಗೃಹಸಚಿವ ಪರಮೇಶ್ವರ್

ನಾನು ಮುಂದಿನ ಚುನಾವಣೆಗೆ ನಿಲ್ಲಬಾರದು ಅಂತ ಯೋಚಿಸಿದ್ದೇನೆ. ನನಗೆ ಅನ್ನಿಸಿದಂತೆ ಬಸವರಾಜು ಕೂಡ ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ. ಜಯಣ್ಣ ಕೂಡ ನಿಲ್ಲಲ್ಲ ಅಂತಾ ಅಂದುಕೊಂಡಿದ್ದೇನೆ. ಆದರೆ ಡಾಕ್ಟರ್ ಅವರಿಗೆ ಮುಖ್ಯಮಂತ್ರಿ ಆಗುವ ಆಸೆ ಇದೆ. ಹೀಗಾಗಿ ಅವರು ಮುಂದಿನ ಬಾರಿಯೂ ಸ್ಪರ್ಧೆ ಮಾಡಬಹುದು. ನಾನೂ ಸೇರಿದಂತೆ ಜಯಣ್ಣನ, ಷಡಕ್ಷರಿ ಮತ್ತೆ ಇತರರ ಸಹಕಾರ ಇರುತ್ತದೆ ಎಂದರು.

ಸಹಕಾರಿಗಳು ಎಲ್ಲಾ ಪಕ್ಷದಲ್ಲಿಯೂ ಇದ್ದಾರೆ. ಅವರೆಲ್ಲರ ಉದ್ದೇಶ ಬಡವರ ಬದುಕನ್ನ ಹಸನುಗೊಳಿಸಬೇಕು ಅನ್ನೋದಾಗಿದೆ. 1970ರ ದಶಕದಲ್ಲಿ ಕರ್ನಾಟಕದಲ್ಲಿ ಆನಂದ್ ಕುರಿಯನ್ ದೂರದೃಷ್ಟಿಯಿಂದ ಹಾಲಿನ ಸೊಸೈಟಿಗಳನ್ನ ಆರಂಭ ಮಾಡಲಾಯ್ತು. ನಮ್ಮ ರಾಜ್ಯದಲ್ಲಿ ಮಳೆಯನ್ನ ಆಧರಿಸಿ ಬೇಸಾಯ ಮಾಡುತ್ತೇವೆ. ಮಧುಗಿರಿ ಉಪವಿಭಾಗದಲ್ಲಿ ಏನೇ ಬೆಳೆ ಬೆಳೆದರೂ ಹಾಕಿದ ಬಂಡವಾಳ ವಾಪಾಸ್ ಬಾರದ ಸ್ಥಿತಿಯಿದೆ. ಹೀಗಾಗಿ ಉಪಕಸುಬುಗಳನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಕೆಲಸ ಮಾಡುತ್ತಿವೆ ಎಂದರು.

ನಾನು ಸಚಿವನಾದ ಮೇಲೆ ಎಲ್ಲಾ ಕಂದಾಯ ವಿಭಾಗಳಲ್ಲಿ ಸಭೆಗಳನ್ನ ನಡೆಸಿ, ಅಲ್ಲಿನ ನ್ಯೂನತೆಗಳನ್ನ ತಿಳಿದುಕೊಂಡಿದ್ದೇವೆ. ನಮ್ಮ ಜಿಲ್ಲಾ ಬ್ಯಾಂಕ್​ನಲ್ಲಿ ಇವತ್ತು 1500 ಕೋಟಿ ಸಾಲ ಸೌಲಭ್ಯವನ್ನ ಕೊಡುತ್ತೇವೆ. ರೈತರಿಗೆ 800 ಕೋಟಿ ಸಾಲ ಸೌಲಭ್ಯವನ್ನ ಕೊಟ್ಟಿದ್ದೇವೆ. ಶೂನ್ಯ ಬಡ್ಡಿಯ ಸಾಲ ಸೌಲಭ್ಯಗಳನ್ನ ಕೊಟ್ಟಿದ್ದೇವೆ ಎಂದರು.

ನಮ್ಮ ಆಡಳಿತ ಮಂಡಳಿಯಲ್ಲಿ ಎಲ್ಲಾ ಪಕ್ಷದವರಿದ್ದೇವೆ. ಆದರೆ ನಾವು ಸಂಸ್ಥೆಯ ಒಳಗೆ ಹೋದ ಮೇಲೆ ಎಲ್ಲಾ ಪಕ್ಷಭೇದ ಮರೆತು ಸಂಸ್ಥೆಯ ಒಳಿತಿಗಾಗಿ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯನವರು ಈ ರಾಜ್ಯದಲ್ಲಿ ಯಾರು ಕೂಡ ಹಸಿವಿನಿಂದ ಮಲಗಬಾರದು ಅನ್ನೋ ಉದ್ದೇಶದಿಂದ ಈ ಯೋಜನೆ ತಂದಿದ್ದಾರೆ ಎಂದು ರಾಜಣ್ಣ ಹೇಳಿದರು.

ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖ್ಯಮಂತ್ರಿ ಅಂತಾ ಕೇವಲ ಕಾಂಗ್ರೆಸ್​ನವರಿಗೆ ಮಾತ್ರ ಕೊಡಲಿಲ್ಲ. ಕುರುಬರು ಅಂತಾ ಕುರುಬರಿಗೆ ಮಾತ್ರ ಕೊಡಲಿಲ್ಲ, ಎಲ್ಲಾ ಬಡವರಿಗೂ ಕೊಟ್ಟಿದ್ದಾರೆ. ಆದರೆ, ಯಾರಿಗೆ ಅರ್ಹತೆ ಇದೆ ಅವರಿಗೆ ದೊರಕಬೇಕು. ಯಾರಿಗೆ ಅರ್ಹತೆ ಇಲ್ಲ ಅವರು ತೆಗೆದುಕೊಳ್ಳಬಾರದು. ಅರ್ಹತೆ ಇಲ್ಲದವರು ತಗೊಂಡರೆ ಸತ್ತ ಹೆಣದ ಮೇಲೆ ಅನ್ನ ಉಂಡಂಗೆ ಆಗುತ್ತದೆ ಎಂದರು.

ನಗು‌ ನಗುತಾ ಮಾಧ್ಯಮಗಳಿಗೆ ಪರಮೇಶ್ವರ್ ಪ್ರತಿಕ್ರಿಯೆ

ಪರಮೇಶ್ವರ್ ಸಿ‌ಎಂ ಆಗಲಿ ಎಂಬ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಕೇಳಿದ ಪ್ರಶ್ನೆಗೆ ನಗುನಗುತ್ತಾ ಪ್ರತಿಕ್ರಿಯಸಿದಿ ಪರಮೇಶ್ವರ್, ಅದನ್ನು ಅವರನ್ನೆ ಕೇಳಬೇಕು, ಅವರ ಅಭಿಪ್ರಾಯ ಅದು. ಸಂತೋಷದ ಸಂದರ್ಭದಲ್ಲಿ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಲಿಸುವುದಕ್ಕೆ ಹೋಗಬೇಡಿ. ಈ ಬಗ್ಗೆ ಹೆಚ್ಚೆನು ಪ್ರತಿಕ್ರಿಯೆ ನೀಡಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Sun, 20 August 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?