BS Yediyurappa: ಯಡಿಯೂರಪ್ಪಗೆ ಬ್ಲ್ಯಾಕ್​​ಮೇಲ್ ಮಾಡಲಾಗಿದೆ; ಸ್ವಾಮೀಜಿಗಳಿಂದ ಬಿಜೆಪಿ ವಿರುದ್ಧ ಆರೋಪ

ಬಿಜೆಪಿಯವರಿಗೆ ಧೈರ್ಯ ಇದ್ದರೆ ಈಗ ಚುನಾವಣೆ ಘೋಷಿಸಿ. 20 ಸೀಟ್​ ಗೆಲ್ಲಲಿ, ನಾವು ಕಾವಿ ಬಟ್ಟೆ ಕಳಚಿ ಕಾಡು ಸೇರುತ್ತೇವೆ ಎಂದು ಬಿಜೆಪಿ ಹೈಕಮಾಂಡ್​​ಗೆ ತಿಪಟೂರಿನ ರುದ್ರಮುನಿಶ್ರೀ ಬಹಿರಂಗ ಸವಾಲ್ ಹಾಕಿದ್ದಾರೆ.

BS Yediyurappa: ಯಡಿಯೂರಪ್ಪಗೆ ಬ್ಲ್ಯಾಕ್​​ಮೇಲ್ ಮಾಡಲಾಗಿದೆ; ಸ್ವಾಮೀಜಿಗಳಿಂದ ಬಿಜೆಪಿ ವಿರುದ್ಧ ಆರೋಪ
ದಿಂಗಾಲೇಶ್ವರಶ್ರೀ (ಸಂಗ್ರಹ ಚಿತ್ರ)
Follow us
TV9 Web
| Updated By: guruganesh bhat

Updated on: Jul 26, 2021 | 6:31 PM

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಕಣ್ಣೀರನ್ನು ನಾವು ಮಠಾಧೀಶರೆಲ್ಲ ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ಇದು ಬಿಎಸ್​ವೈ ಕಣ್ಣೀರಲ್ಲ, ಇದು ಕರುನಾಡಿನ ಕಣ್ಣೀರು. ಬಿಜೆಪಿ ಯಡಿಯೂರಪ್ಪ ಅವರ ಕಣ್ಣೀರಿನಲ್ಲಿ ತೇಲಿ ಹೋಗಲಿದೆ. ಬಿಜೆಪಿಯನ್ನು ಮತ್ತೆ ಕಟ್ಟಿ ಬೆಳೆಸಲು ಆಗದಷ್ಟು ಕೆಟ್ಟ ಪರಿಸ್ಥಿತಿ ಬರಲಿದೆ. ಬಿಜೆಪಿಯ ಸಾಧನಾ ಸಮಾವೇಶ ವೇದನಾ ಸಮಾವೇಶ ಆಗಲಿದೆ ಎಂದು ಬೆಂಗಳೂರಲ್ಲಿ (Bengaluru) ಬಾಲೇಹೊಸೂರು ದಿಂಗಾಲೇಶ್ವರಶ್ರೀ ಬಿಜೆಪಿ (BJP) ಹೈಕಮಾಂಡ್​ಗೆ ಸವಾಲೆಸೆದಿದ್ದಾರೆ.

ಕಾಂಗ್ರೆಸ್ ಪಕ್ಷ ಹಿಂದೆ ನಮ್ಮ ಸಮಾಜವನ್ನು ಒಡೆಯುಲು ಪ್ರಯತ್ನ ಮಾಡಿತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಇಂದು ವೀರಶೈವ ಲಿಂಗಾಯತ ಸಮಾಜವನ್ನು ಒಡೆದಿದೆ. ಯಡಿಯೂರಪ್ಪ ಅವರು ರಾಜಿನಾಮೆ ಕೊಟ್ಟಿಲ್ಲ, ರಾಜೀನಾಮೆ ಕೊಡಿಸುವ ವಾತಾವರಣ ನಿರ್ಮಾಣ ಮಾಡಿದ್ದಾರೆ. ಬಿಜೆಪಿಯ ವರಿಷ್ಠರು ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪಗೆ ಬ್ಲ್ಯಾಕ್​​ಮೇಲ್ ಮಾಡಲಾಗಿದೆ. ಮುಂದಿನ 2 ವರ್ಷ ಬಿಎಸ್​​ವೈರನ್ನೇ ಸಿಎಂ ಮಾಡಬೇಕು. ಇಲ್ಲದಿದ್ದರೆ ಬಿಎಸ್​​ವೈ ಕಣ್ಣೀರಿನಲ್ಲಿ ಬಿಜೆಪಿ ತೇಲಿ ಹೋಗಲಿದೆ. ನಮ್ಮ ಸಮಾಜದ ಎಲ್ಲರೂ ಕಣ್ಣೀರು ಹಾಕುವಂತೆ ಮಾಡಲಾಗಿದೆ. ನಮಗೆ ಕಣ್ಣೀರು ಹಾಕಿಸಿದವರಿಗೆ ಮುಂದಿನ ದಿನಗಳಲ್ಲಿ ನಾವು ಕೂಡ ಕಣ್ಣೀರು ಹಾಕಿಸುತ್ತೇವೆ ಎಂದು ಅವರು ಹೇಳಿದರು.

ಬಿಜೆಪಿಯವರಿಗೆ ಧೈರ್ಯ ಇದ್ದರೆ ಈಗ ಚುನಾವಣೆ ಘೋಷಿಸಿ. 20 ಸೀಟ್​ ಗೆಲ್ಲಲಿ, ನಾವು ಕಾವಿ ಬಟ್ಟೆ ಕಳಚಿ ಕಾಡು ಸೇರುತ್ತೇವೆ ಎಂದು ಬಿಜೆಪಿ ಹೈಕಮಾಂಡ್​​ಗೆ ತಿಪಟೂರಿನ ರುದ್ರಮುನಿಶ್ರೀ ಬಹಿರಂಗ ಸವಾಲ್ ಹಾಕಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ಫೋಟೋ ಹಿಡಿದು ಚುನಾವಣೆಯಲ್ಲಿ ಗೆದ್ದಿದ್ದಾರೆ. ಆದರೆ ಈಗ ಬಿಎಸ್​ವೈರನ್ನು ಜಾಡಿಸಿ ಒದ್ದಿದ್ದಾರೆ. ಬಿಎಸ್​​ವೈರನ್ನು ಕೆಳಗೆ ಇಳಿಸಿದರೆ 20 ವರ್ಷ ಬಿಜೆಪಿ ಸರ್ವನಾಶವಾಗಲಿದೆ ಎಂದು ಬೆಂಗಳೂರಿನಲ್ಲಿ ರುದ್ರಮುನಿ ಷಡಕ್ಷರಿಶ್ರೀ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: 

ಯಡಿಯೂರಪ್ಪ ರಾಜೀನಾಮೆಯಿಂದ ಬೂಕನಕೆರೆಯಲ್ಲಿ ಸೂತಕದ ಛಾಯೆ, ಗ್ರಾಮ ದೇವತೆ ಗೋಗಲಮ್ಮ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲವೆಂದ ಗ್ರಾಮಸ್ಥರು

ಬಿ ಎಸ್ ಯಡಿಯೂರಪ್ಪ ಬಾಯಿಂದಲೇ ಮುಂದಿನ ಸಿಎಂ ಹೆಸರು ಘೋಷಿಸಲು ಯೋಚಿಸುತ್ತಿದೆ ಬಿಜೆಪಿ ಹೈಕಮಾಂಡ್

(Karnataka Politics Blackmail to Yediyurappa Accused by by Swamijis)