ಕರ್ನಾಟಕದಲ್ಲೂ ದಲಿತ ಸಿಎಂ ಬೇಡಿಕೆ ಇಡಬೇಕಾದ ಸ್ಥಿತಿ ಬರಬಹುದು: ಡಾ.ಜಿ.ಪರಮೇಶ್ವರ್
Karnataka Politics: ರಾಜ್ಯ ಬಿಜೆಪಿಯಲ್ಲಿ ಕಳೆದ ಬಾರಿಯೂ 3 ಜನ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಈ ಬಾರಿಯೂ ಮೂವರು ಮುಖ್ಯಮಂತ್ರಿಯಾದರೂ ಆಶ್ಚರ್ಯವಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದರು.
ತುಮಕೂರು: ಪಂಜಾಬ್ನಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ದಲಿತ ಸಿಎಂ ಬೇಕೆಂದು ಕೇಳುವಂತಾಗಬಹುದು ಎಂದು ತುಮಕೂರಿನಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ದಲಿತರನ್ನು ಸಿಎಂ ಮಾಡಬೇಕೆಂದು ಕೇಳುವಂತಾಗಬಹುದು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ. ರಾಜ್ಯ ಬಿಜೆಪಿಯಲ್ಲಿ ಕಳೆದ ಬಾರಿಯೂ 3 ಜನ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಈ ಬಾರಿಯೂ ಮೂವರು ಮುಖ್ಯಮಂತ್ರಿಯಾದರೂ ಆಶ್ಚರ್ಯವಿಲ್ಲ ಎಂದು ಅವರು ಅಭಿಪ್ರಾಯ ತಿಳಿಸಿದರು.
ರಾಮ ಮಂದಿರ ಕಾಮಗಾರಿಯನ್ನು ಕಾಂಗ್ರೆಸ್ ಪೂರ್ಣಗೊಳಿಸಲಿದೆ: ಮಾಜಿ ಡಿಸಿಎಂ ಡಾ ಜಿ.ಪರಮೇಶ್ವರ್ 2024ರವರೆಗೂ ರಾಮ ಮಂದಿರ ಕಾಮಗಾರಿ ಮುಗಿಯದಿದ್ದರೆ 2024ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಮಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ ಜಿ.ಪರಮೇಶ್ವರ್ ಘೋಷಿಸಿದರು. ರಾಮ ಮಂದಿರವನ್ನು ಕಾಂಗ್ರೆಸ್ ಸರ್ಕಾರ ಏಕೆ ಪೂರ್ಣಗೊಳಿಸಬಾರದು? ನಾನು ಮಂದಿರ ನಿರ್ಮಾಣಕ್ಕೆ ₹10 ಸಾವಿರ ದೇಣಿಗೆ ನೀಡಿದ್ದೇನೆ. ಏಕೆಂದರೆ ಶ್ರೀರಾಮ ಬಿಜೆಪಿಗೆ ಸೇರಿದ ವ್ಯಕ್ತಿ ಅಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಸಾವಿರಾರು ಕೋಟಿ ಸಂಗ್ರಹಿಸಲಾಗಿದೆ. ಆ ಹಣ ಎಲ್ಲೋಯ್ತು, ಯಾರಾದ್ರೂ ಲೆಕ್ಕ ಕೊಡ್ತಾರಾ? ಎಂದು ಸಹ ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:
Charanjit Singh Channi ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಛನ್ನಿ ಪ್ರಮಾಣ ವಚನ ಸ್ವೀಕಾರ
ರೈಲ್ವೆ ಹಳಿಗಳ ಮೇಲೆ ಧರಣಿ ನಡೆಸಿದ್ದ ರೈತರ ವಿರುದ್ಧದ ಕೇಸ್ಗಳನ್ನು ಹಿಂಪಡೆದ ಪಂಜಾಬ್ ಸಿಎಂ; ಆರ್ಆರ್ಎಫ್ಗೆ ಆದೇಶ
Published On - 3:23 pm, Sat, 2 October 21