ಮಗಳು ಸಂಯುಕ್ತ ​ಪರ ತಂದೆ, ಮಗ ಬಿಜೆಪಿಯ ಆಕ್ಟೀವ್​ ಕಾರ್ಯಕರ್ತ! ಬಾಗಲಕೋಟೆಯಲ್ಲಿ ತಂದೆ-ಮಕ್ಕಳ ಜುಗಲಬಂದಿ

| Updated By: ವಿವೇಕ ಬಿರಾದಾರ

Updated on: Apr 06, 2024 | 1:15 PM

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಈ ಬಾರಿಯ ಚುನಾವಣೆ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಮೊದಲ ಚುನಾವಣೆಯಲ್ಲೇ ಸಂಯುಕ್ತ ಪಾಟೀಲ್​ ಅವರಿಗೆ ಹಲವು ಸವಾಲುಗಳು ಎದುರಾಗಿವೆ. ಸಂಯುಕ್ತ ಪಾಟೀಲ್​​ ಅಣ್ಣ ಹರ್ಷಗೌಡ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮಗಳು ಸಂಯುಕ್ತ ​ಪರ ತಂದೆ, ಮಗ ಬಿಜೆಪಿಯ ಆಕ್ಟೀವ್​ ಕಾರ್ಯಕರ್ತ! ಬಾಗಲಕೋಟೆಯಲ್ಲಿ ತಂದೆ-ಮಕ್ಕಳ ಜುಗಲಬಂದಿ
ಮಗ ಹರ್ಷಗೌಡ, ತಂದೆ ಶರಣಗೌಡ, ಮಗಳು ಸಂಯುಕ್ತ ಪಾಟೀಲ್ (ಎಡದಿಂದ ಬಲಕ್ಕೆ)
Follow us on

ಬಾಗಲಕೋಟೆ, ಏಪ್ರಿಲ್​ 06: ಬಾಗಲಕೋಟೆ ಲೋಕಸಭಾ ಕ್ಷೇತ್ರದ (Bagalkot Lok Sabha Constituency) ಈ ಬಾರಿಯ ಚುನಾವಣೆ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಸಚಿವ ಶಿವಾನಂದ ಪಾಟೀಲ್ (Shivand Patil)​ ಪುತ್ರಿ ಸಂಯುಕ್ತ ಪಾಟೀಲ್ (Samyuktha Patil)​ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಸಂಯುಕ್ತ ಪಾಟೀಲ್​ ಅವರಿಗೆ ಇದು ಮೊದಲನೇ ಚುನಾವಣೆಯಾಗಿದೆ. ಮೊದಲ ಚುನಾವಣೆಯಲ್ಲೇ ಸಂಯುಕ್ತ ಪಾಟೀಲ್​ ಅವರಿಗೆ ಹಲವು ಸವಾಲುಗಳು ಎದುರಾಗಿವೆ. ಒಂದಡೆ ಹುನುಗುಂದ ಕಾಂಗ್ರೆಸ್​ ಶಾಸಕ ವಿಜಯನಾಂದ ಕಾಶಪ್ಪನವರ್​ ಪತ್ನಿ ವೀಣಾ ಕಾಶಪ್ಪನವರ್​ ತಮಗೆ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ. ಮತ್ತೊಂದಡೆ ಸಂಯುಕ್ತ ಪಾಟೀಲ್​​ ಅಣ್ಣ ಹರ್ಷಗೌಡ (Harsha Gowda) ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಅಣ್ಣ ಹರ್ಷಗೌಡ ಬಿಜೆಪಿ ಸೇರ್ಪಡೆ ವಿಚಾರವಾಗಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟಿಲ್ ಟಿವಿ9 ಜೊತೆ ಮಾತನಾಡಿ, ಅವರು ಬಿಜೆಪಿ ಸೇರಿರುವುದು ಈಗ ಎಲ್ಲರಿಗೂ ಗೊತ್ತಾಗಿರಬಹುದು. ಆದರೆ ಅವರು ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಸಮಯದಿಂದ ಗುರುತಿಸಿಕೊಂಡಿದ್ದಾರೆ. ಇದು ಮಾಧ್ಯಮಕ್ಕೆ ಹೊಸ ವಿಷಯವಾಗಿರಬಹುದು, ಆದರೆ ಇದು ತುಂಬಾ ಹಳೆಯ ವಿಷಯ. ಅವರು ಬಿಜೆಪಿ ಅಂತ ಮೊದಲಿಂದಲೂ ಎಲ್ಲರಿಗೂ ಗೊತ್ತು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಕೂಡ ಅವರವರ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ. ನಾನು ಅವರಿಗೆ ಒಳ್ಳೆಯದಾಗಲಿ ಅಂತ‌ ಹಾರೈಸುತ್ತೇನೆ. ಅವರಿಗೆ ಬೆಸ್ಟ್ ಆಫ್​ ಲಕ್ ಆದರೆ ಗೆಲುವು ನಮ್ಮದಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಆದರೆ ಹರ್ಷಗೌಡ ಅವರ ತಂದೆ ನಿಮ್ಮ ಪರ ಪ್ರಚಾರ ಮಾಡುತ್ತಿದ್ದಾರೆ ಇದಕ್ಕೇನಂತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ತಂದೆ (ಶಿವಾನಂದ ಪಾಟೀಲ್​) ನಾ ಚಿಕ್ಕವಳಿದ್ದಾಗ ಬಹಳ ಬ್ಯೂಸಿಯಾಗಿರುತ್ತಿದ್ದರು. ಹೀಗಾಗಿ ನಾನು ಬೆಳೆದಿರುವುದು ನಮ್ಮ ದೊಡ್ಡಪ್ಪ ಶಿವಶರಣಗೌಡ (ಹರ್ಷಗೌಡ) ಅವರ ಮಡಿಲಲ್ಲಿ. ತುಂಬಾ ಸಮಯ ಅವರ ಜೊತೆ ಕಳೆದಿದ್ದೇನೆ. ಈಗಲೂ ಅವರು ನಮ್ಮ ತಂದೆಗಿಂತಲೂ ಹೆಚ್ಚು ನನ್ನನ್ನು ಪ್ರೀತಿ ಮಾಡುತ್ತಾರೆ. ನಾನು ಎಲ್ಲೆ ಹೋದರೂ ಅವರು ನನ್ನ ಪರವಾಗಿ ಬರುತ್ತಾರೆ. ಇದೀಗ ಚುನಾವಣೆಗೆ ನಿಂತಿದ್ದೇನೆ ಮಗಳಿಗೋಸ್ಕರ ಬರದೆ ಮತ್ಯಾರಿಗೋಸ್ಕರ ಬರುತ್ತಾರೆ. ಅವರಿಗೆ ನನ್ನ ಮೇಲೆ ಜಾಸ್ತಿ ಪ್ರೀತಿ. ಹರ್ಷಗೌಡ ನನ್ನ ದೊಡ್ಡಪ್ಪನ ಮಗ, ಸ್ವಂತ ಅಣ್ಣ ಅಲ್ಲ. ಅವರು ಮೊದಲಿನಿಂದಲೂ ಬಿಜೆಪಿ ಆರ್​ಎಸ್​ಎಸ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಇವಾಗ ವೇದಿಕೆ ಮೇಲೆ‌ ಕಾಣಿಸಿಕೊಂಡಿದ್ದಕ್ಕೆ ಹೊಸದು ಅನಿಸುತ್ತಿದೆ ಎಂದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಭಾವಚಿತ್ರಕ್ಕಾಗಿ ಫೈಟ್: ಕೋರ್ಟ್ ಮೊರೆ ಹೋದ ಈಶ್ವರಪ್ಪ

ಮುಂಬರುವ ದಿನಗಳಲ್ಲಿ ಹರ್ಷಗೌಡ ಅವರನ್ನು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅವರ ಕ್ಷೇತ್ರದಲ್ಲಿ ಚುನಾವಣೆ ನಿಲ್ಲಿಸುವ ಲೆಕ್ಕಾಚಾರ ಇದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ಬಿಜೆಪಿ ಪಕ್ಷದ ವರಿಷ್ಟರನ್ನೇ ಕೇಳಬೇಕು. ಈ ಬಗ್ಗೆ ನಾನು ಹೇಗೆ ಟೀಕೆ ಟಿಪ್ಪಣಿ‌ ಮಾಡಲು ಬರುತ್ತದೆ. ಅದು ಅವರ ಆಂತರಿಕ ವಿಚಾರ. ನಾವು ಮಾತ್ರ ಸುಸಜ್ಜಿತವಾಗಿ ಚುನಾವಣೆ ನಡೆಸುತ್ತಿದ್ದೇವೆ. ನಮ್ಮ ಪ್ರಚಾರ ಕಾರ್ಯಕರ್ತರ ಹುಮ್ಮಸ್ಸು ಗೆಲಿವಿನ ಕಡೆ ಇದೆ. ಹರ್ಷಗೌಡ ನಿರ್ಧಾರದಿಂದ ನಮಗೆ ಯಾವುದೇ ಹಿನ್ನಡೆ ವ್ಯತ್ಯಾಸ ಆಗುವುದಿಲ್ಲ. ನಮ್ಮ ಗೆಲುವು ಗ್ಯಾರಂಟಿ ಎಂದರು.

ಹೊಸ-ಹಳೆ ತಲೆ ಮಧ್ಯೆ ಪೈಪೋಟಿ

ಬಾಗಲಕೋಟೆ ಲೋಕಸಭಾ ಕ್ಷೇತ್ರ ಕಳೆದ 15 ವರ್ಷಗಳಿಂದ ಬಿಜೆಪಿ ವಶದಲ್ಲಿ 2004ರಿಂದಲೂ ಬಿಜೆಪಿಯಿಂದ ಜಿಪಿ ಗದ್ದಿಗೌಡರ ಗೆಲ್ಲುತ್ತಾ ಬಂದಿದ್ದಾರೆ. ಹಾಲಿ ಸಂಸದ, ಹಿರಿಯ ರಾಜಕಾರಣಿ ಜಿ.ಪಿ ಗದ್ದಿಗೌಡರ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿದ್ದಾರೆ.

ಇವರ ಪ್ರತಿ ಸ್ಪರ್ಧಿಯಾಗಿ ಸಚಿವ ಶಿವಾನಂದ ಪಾಟೀಲ್​ ಪುತ್ರಿ ಸಂಯಕ್ತ ಪಾಟೀಲ್​ ಕಣಕ್ಕೆ ಇಳಿದಿದ್ದಾರೆ. ಶಿವಾನಂದ ಪಾಟೀಲ್​ ಹಿರಿಯ ರಾಜಕಾರಣಿಯಾಗಿದ್ದು, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಮ್ಮದೆಯಾದ ಪ್ರಭಾವವನ್ನು ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮಗಳನ್ನು ಕಣಕ್ಕೆ ಇಳಿಸಿದ್ದಾರೆ. ಒಟ್ಟಿನಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರ ಚುನಾವಣೆ ಹೊಸ ಮತ್ತು ಹಳೆ ತಲೆಮಾರಿನ ನಡುವೆ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:12 pm, Sat, 6 April 24