ತಾಲಿಬಾನ್ಗೆ ಬೆಂಬಲ ಕೊಡುತ್ತೀರಾ, ರಾಜ್ಯದ ಜನರ ಕ್ಷಮೆ ಕೇಳುತ್ತೀರಾ; ಕಾಂಗ್ರೆಸ್ಗೆ ಜೋಶಿ ಪ್ರಶ್ನೆ
ಐಎಸ್ಐಎಸ್ ಉಗ್ರ ಸಂಘಟನೆ ಕುಕ್ಕರ್ ಬಾಂಬ್ ದಾಳಿ ಹೊಣೆ ಹೊತ್ತುಕೊಂಡಿದೆ. ಈಗ ತಾಲಿಬಾನ್ಗೆ ಬೆಂಬಲ ಕೊಡುತ್ತೀರಾ ಅಥವಾ ಕರ್ನಾಟಕದ ಜನರ ಕ್ಷಮೆ ಕೇಳುತ್ತೀರಾ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ವಿಜಯನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ (Mangaluru Cooker Bomb Blast Case) ಪ್ರಕರಣದ ಹೊಣೆಯನ್ನು ISIS ಉಗ್ರ ಸಂಘಟನೆ ಹೊತ್ತುಕೊಂಡಿದೆ. ಈಗ ತಾಲಿಬಾನ್ಗೆ ಬೆಂಬಲ ಕೊಡುತ್ತೀರಾ ಅಥವಾ ಜನರ ಕ್ಷಮೆ ಕೇಳುತ್ತೀರಾ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರನ್ನು ಪ್ರಶ್ನಿಸಿದರು. ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬುದು ಭಾರತದ ನಿಲುವಾಗಿದೆ. ಆದರೆ ವಿದೇಶಿ ಶಕ್ತಿಗಳಿಂದ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆಗಿದೆ. ಅದಕ್ಕೆ ಪಾಕಿಸ್ತಾನದ ಸಪೋರ್ಟ್ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಘಟನೆ ನಡೆದಾಗ ಅದೊಂದು ಆ್ಯಕ್ಸಿಡೆಂಟ್ ಎಂದು ಡಿಕೆಶಿ ಹೇಳಿದ್ದರು. ಇಂತಹ ಸಮಯದಲ್ಲಿ ಅವರು ಈ ರೀತಿ ಹೇಳುವುದು ಸರಿಯಾ ಎಂದು ಪ್ರಶ್ನಿಸಿದರು.
ಮತಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪದ ವಿಷಯಾಂತರ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಮಾಡಿಸಿದೆ ಎಂದು ಡಿಕೆಶಿವಕುಮಾರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕುಕ್ಕರ್ ಸ್ಫೋಟ ಪೂರ್ವನಿಯೋಜಿತ ಎಂದು ಹೇಗೆ ಹೇಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಗೂ ಮುನ್ನವೇ ಅಧಿಕಾರಿಗಳು ಇದನ್ನು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಇದರ ಹಿಂದೆ ಯಾವ ಉಗ್ರನಿದ್ದಾನೆ? ಯಾವ ಸಂಘಟನೆ ಇದೆ? ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ. ತನಿಖೆ ಏನಾಯ್ತು ಎಂದು ಪ್ರಶ್ನಿಸಿದ್ದರು. ಅಲ್ಲದೆ, ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿದ್ದಾರೆ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
“ಭಾರತದ ಹಿತಾಸಕ್ತಿಯ ವಿರುದ್ಧ ರಾಹುಲ್ ಗಾಂಧಿಯವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಾರೆ. ಇನ್ನೂ ರಾಹುಲ್ ಗಾಂಧಿ ಅವರು ಕಾರ್ ಸ್ಟೋಟ ಅಂತ ಹೇಳುತ್ತಾರೆ. ಡಿಕೆ ಶಿವಕುಮಾರ್ ಅವರು ಬಾಂಬ್ ಸ್ಫೋಟದ ಬಗ್ಗೆ ಮೃದು ಹೇಳಿಕೆ ನೀಡಿದ್ದಾರೆ. ನಿವೇನು ಐಸಿಸ್ ಸಪೋರ್ಟ್ ಇದ್ದೀರಾ? ಸಿಂಪತಿ ರಾಜಕೀಯ ಮಾಡುತ್ತಿದ್ದೀರಾ? ಯಾಕೆ ಹೀಗೆ ಮಾತನಾಡಿದ್ದೀರಿ? ನೀವು ಕ್ಷಮೆ ಕೇಳಬೇಕು, ಇಲ್ಲ ಅಂದರೆ ಜನರು ಐಸಿಸ್, ತಾಲಿಬಾನಿ ಸಪೋರ್ಟರ್ಸ್ ಅಂತ ಜನರು ತೀರ್ಮಾನ ಮಾಡುತ್ತಾರೆ” ಎಂದು ಜೋಶಿ ವಾಗ್ದಾಳಿ ನಡೆಸಿದರು.
“ಒಂದು ಸಮುದಾಯ ಓಲೈಕೆಗೆ ತುಷ್ಟಿಕರಣದ ರಾಜಕಾರಣ ಮಾಡಲಾಗುತ್ತಿದೆ. ಉತ್ತರಪ್ರದೇಶ ಸೇರಿ ಈಶನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಸ್ಥಾನಗಳು ಇಲ್ಲ, ಆದರೂ ಈ ರೀತಿಯಲ್ಲಿ ತುಷ್ಟಿಕರಣದ ರಾಜಕಾರಣ ಮಾಡುತ್ತಾ ಇದ್ದಾರೆ. ನೀವು ಕ್ಷಮೆ ಕೇಳಿದರೆ ಭಯೋತ್ಪಾದನಾ ವಿರುದ್ಧದ ಹೋರಾಟದಲ್ಲಿದ್ದೀರಾ ಎಂದರ್ಥ. ಇಲ್ಲದಿದ್ದರೆ ಭಯೋತ್ಪಾದಕರ ಪರ ಎಂದರ್ಥ ಆಗುತ್ತದೆ” ಎಂದು ಜೋಶಿ ಹೇಳಿದರು.
ಇದನ್ನೂ ಓದಿ: Mangaluru: ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಕೊನೆಗೂ ಸ್ಫೋಟದ ಹೊಣೆ ಹೊತ್ತ ISIS ಉಗ್ರ ಸಂಘಟನೆ
ತಮ್ಮ ಪಕ್ಷದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರನ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ಬಗ್ಗೆ ಹೇಳಿಕೆ ನೀಡಿದ ಜೋಶಿ, ಶಾಸಕರ ಪುತ್ರ ಹಾಗೂ ಓರ್ವ ಸರ್ಕಾರಿ ಅಧಿಕಾರಿಯ ಬಂಧನವಾಗಿದೆ. ನಾವು ಲೋಕಾಯುಕ್ತ ಬಲಿಷ್ಠಗೊಳಿಸಿದ್ದೇವೆ. ಯಾವುದೇ ಪಾರ್ಟಿ ಭ್ರಷ್ಟಾಚಾರ ಮಾಡಿದರೂ ಅದನ್ನು ತಡೆಯಲು ಪವರ್ ಕೊಟ್ಟಿದ್ದೇವೆ. 59 ಕೇಸ್ ಮುಚ್ಚಿ ಹಾಕಿ ಲೋಕಾಯುಕ್ತ ದುರ್ಬಲಗೊಳಿಸಿ, ಎಸಿಬಿ ಜಾರಿ ಮಾಡಿದ್ದರು ಎಂದು ಸಿಎಂ ಬೊಮ್ಮಾಯಿಯವರೇ ಹೇಳಿದ್ದಾರೆ ಎಂದರು.
ಬೆಳಗಾವಿಯ ರಾಜಹಂಸಗಡ ಕೋಟೆಯಲ್ಲಿರುವ ಶಿವಾಜಿ ಪ್ರತಿಮೆಯ ಕ್ರೆಡಿಟ್ ಪಡೆಯಲು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಭಾರೀ ಪೈಪೋಟಿ ನಡೆದಿತ್ತು. ಅದರಂತೆ ಮೊದಲು ಸಿಎಂ ಬೊಮ್ಮಾಯಿ ಅವರು ಉದ್ಘಾಟಿಸಿದ್ದರು. ನಂತರ ಪಟ್ಟುಬಿಡದ ಶಾಸಕಿ ಎರಡನೇ ಬಾರಿ ಉದ್ಘಾಟನೆ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಕಾಂಗ್ರೆಸ್ನವರಿಗೆ ದುರಂಹಕಾರ. ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿಯವರು ಉದ್ಘಾಟನೆ ಮಾಡಿದ್ದಾರೆ. ಮತ್ತೆ ಅದನ್ನು ಉದ್ಘಾಟನೆ ಮಾಡುತ್ತಾರೆ ಅಂದರೆ ಅದು ಪ್ರಜಾಪ್ರಭುತ್ವಕ್ಕೆ ತದ್ವಿರುದ್ಧ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ