Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಕೆಯ ಕುರಿ ಯಾರು ಅನ್ನೋದು ಮುಂದೆ ಗೊತ್ತಾಗುತ್ತೆ;ತಿಮ್ಮಾಪುರ ಹೇಳಿಕೆಗೆ ಪ್ರೀತಮ್ ಗೌಡ ಟಾಂಗ್​

ವಿಜಯೇಂದ್ರ ಶಕ್ತಿ, ತಂತ್ರಗಾರಿಕೆ ಏನು ಎಂದು ಲೋಕಸಭಾ ಚುನಾವಣೆಯಲ್ಲಿ ಶಕ್ತಿ ಗೊತ್ತಾಗಲಿದೆ. ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದವರಲ್ಲಿ ಪ್ರೀತಮ್ ಗೌಡ ಕೂಡ ಒಬ್ಬ, ಕಾಲ‌ ಕ್ರಮೇಣ ಎಲ್ಲವೂ ಸರಿ ಹೋಗಲಿದೆ ಎಂದರು.

ಹರಕೆಯ ಕುರಿ ಯಾರು ಅನ್ನೋದು ಮುಂದೆ ಗೊತ್ತಾಗುತ್ತೆ;ತಿಮ್ಮಾಪುರ ಹೇಳಿಕೆಗೆ ಪ್ರೀತಮ್ ಗೌಡ ಟಾಂಗ್​
ಆರ್​ಬಿ ತಿಮ್ಮಾಪುರ, ಪ್ರೀತಂ ಗೌಡ
Follow us
Anil Kalkere
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 26, 2023 | 3:42 PM

ಬೆಂಗಳೂರು, ನ.26: ಬಿಎಸ್​ವೈಗೆ ಆದ ಗತಿಯೇ ವಿಜಯೇಂದ್ರಗೂ ಆಗಲಿದೆ ಎಂಬ ಸಚಿವ ಆರ್.ಬಿ ತಿಮ್ಮಾಪುರ (RB Timmapur) ಹೇಳಿಕೆಗೆ ಪ್ರೀತಂ ಗೌಡ(Preetham Gowda) ತಿರುಗೇಟು ಕೊಟ್ಟಿದ್ದಾರೆ. ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಬಿ.ಎಸ್ ಯಡಿಯೂರಪ್ಪ 4 ಬಾರಿ ಮುಖ್ಯಮಂತ್ರಿ ಆಗಿದ್ದರು. ಬಿಎಸ್​ವೈ ಪುತ್ರ ವಿಜಯೇಂದ್ರ ಕೂಡ 4 ಬಾರಿ ಸಿಎಂ ಆಗುತ್ತಾರೆ. ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಲಾಗಿದೆ. ಹರಕೆಯ ಕುರಿ ಯಾರು ಎನ್ನುವುದು ಮುಂದೆ ಗೊತ್ತಾಗುತ್ತೆ ಎಂದು ಟಾಂಗ್​ ಕೊಟ್ಟಿದ್ದಾರೆ.

ವಿಜಯೇಂದ್ರ ಶಕ್ತಿ, ತಂತ್ರಗಾರಿಕೆ ಏನು ಎಂದು ಲೋಕಸಭಾ ಚುನಾವಣೆಯಲ್ಲಿ ಶಕ್ತಿ ಗೊತ್ತಾಗಲಿದೆ. ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದವರಲ್ಲಿ ಪ್ರೀತಮ್ ಗೌಡ ಕೂಡ ಒಬ್ಬ, ಕಾಲ‌ ಕ್ರಮೇಣ ಎಲ್ಲವೂ ಸರಿ ಹೋಗಲಿದೆ. ಅವರೆಲ್ಲರೂ ಹಿರಿಯರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದರು.

ಇದನ್ನೂ ಓದಿ:ನಂಜುಂಡಸ್ವಾಮಿ, ಪ.ಮಲ್ಲೇಶ್‌ ಸಹವಾಸ ಇಲ್ಲದಿದ್ರೆ ನಾನು ರಾಜಕೀಯಕ್ಕೆ ಬರ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನೆಗೆ ನೀವೂ ಭೇಟಿಯಾಗುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ‘ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಭೇಟಿ ಮಾಡಿರಲಿಲ್ಲ. ಹಾಗಾಗಿ ಅವರು ಭೇಟಿಯಾಗಲು ಹೋಗುತ್ತಿದ್ದಾರೆ. ನಾನು ಹಾಸನಕ್ಕೆ ಕಾರ್ಯಕರ್ತ, ಇಲ್ಲಿಗೆ ಮಾತ್ರ ಸೀಮಿತವಾಗಿರುತ್ತೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ